ಶುಕ್ರವಾರ, ಆಗಸ್ಟ್ 12, 2022
25 °C
ಜಿಲ್ಲೆಯಲ್ಲಿ 1,329 ಸೋಂಕಿತರು, 238 ಮಂದಿ ಗುಣಮುಖ, 160 ಹೊಸ ಪ್ರಕರಣ

ಚಾಮರಾಜನಗರ: ಮತ್ತಷ್ಟು ಕುಸಿದ ಸಕ್ರಿಯ ಪ್ರಕರಣಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,329ಕ್ಕೆ ಇಳಿದಿದೆ. ಶುಕ್ರವಾರ 228 ಮಂದಿ ಗುಣಮುಖರಾಗಿದ್ದಾರೆ. 160 ಹೊಸ ಪ್ರಕರಣಗಳು ದೃಢಪಟ್ಟಿವೆ.

ಆರು ಮಂದಿ ಮೃತಟ್ಟಿದ್ದಾರೆ. ಮೂವರು ಕೋವಿಡ್‌ನಿಂದ, ಉಳಿದ ಮೂವರು ಕೋವಿಡ್‌ಯೇತರ ಕಾರಣಕ್ಕೆ ಮೃತಪಟ್ಟಿದೆ.

ಐಸಿಯು ರೋಗಿಗಳ ಸಂಖ್ಯೆ ಕುಸಿತ: ಸದ್ಯ ಜಿಲ್ಲೆಯಲ್ಲಿ 1,329ರ ಸೋಂಕಿತರಲ್ಲಿ 49 ಮಂದಿ ಐಸಿಯುನಲ್ಲಿದ್ದಾರೆ. ದಿನದಿಂದ ದಿನಕ್ಕೆ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ. 61 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. ಉಳಿದವರು ಆಸ್ಪತ್ರೆ, ಕೋವಿಡ್‌ ಕೇರ್ ಸೆಂಟರ್‌ಗಳಲ್ಲಿದ್ದಾರೆ.

ಭಾನುವಾರದ ಅಂಕಿ ಅಂಶಗಳೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ವರದಿಯಾದ ಪ್ರಕರಣಗಳ ಸಂಖ್ಯೆ 29,503ಕ್ಕೆ ಏರಿದೆ. ಗುಣಮುಖರ ಸಂಖ್ಯೆ 27,692ಕ್ಕೆ ತಲುಪಿದೆ.

ಭಾನುವಾರ 1,791 ಕೋವಿಡ್‌ ಪರೀಕ್ಷಾ ವರದಿಗಳು ಬಂದಿದ್ದು, 1,631 ವರದಿಗಳು ನೆಗೆಟಿವ್‌ ಬಂದಿವೆ. 160 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ.

ದೃಢಪಟ್ಟ 160 ಪ್ರಕರಣಗಳಲ್ಲಿ ಚಾಮರಾಜನಗರ ತಾಲ್ಲೂಕಿನ 66, ಗುಂಡ್ಲುಪೇಟೆ ತಾಲ್ಲೂಕಿನ 19, ಕೊಳ್ಳೇಗಾಲ ತಾಲ್ಲೂಕಿನ 30, ಹನೂರಿನ 29, ಯಳಂದೂರು ತಾಲ್ಲೂಕಿನ 14 ಹಾಗೂ ಹೊರ ಜಿಲ್ಲೆಗಳ ಎರಡು ಪ್ರಕರಣಗಳು ಸೇರಿವೆ.

ಗುಣಮುಖರಾದ 238 ಮಂದಿಯಲ್ಲಿ ಎಂಟು ಮಂದಿ ಆಸ್ಪತ್ರೆಯಲ್ಲಿದ್ದರು. 217 ಮಂದಿ ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಹಾಗೂ 13 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು