ಕೊಳ್ಳೇಗಾಲ: ಪ್ರೇಮಿಗಳ ದಿನದ ಅಂಗವಾಗಿ ಐದು ದಿನಗಳ ಕಾಲ ರಜೆ ಕೊಡಬೇಕು ಎಂದು ಮನವಿ ಮಾಡಿ ಕೊಳ್ಳೇಗಾಲದ ವಿದ್ಯಾರ್ಥಿಯೊಬ್ಬ ಪ್ರಾಂಶುಪಾಲರಿಗೆ ಬರೆದಿದ್ದಾನೆ ಎನ್ನಲಾದ ರಜಾ ಅರ್ಜಿಯೊಂದು ವಾಟ್ಸ್ಆ್ಯಪ್ನಲ್ಲಿ ವೈರಲ್ ಆಗಿದೆ.

ನಗರದ ಮಹದೇಶ್ವರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರನ್ನು ಉದ್ದೇಶಿಸಿ ಬರೆಯಲಾದ ರಜಾ ಅರ್ಜಿ ಇದಾಗಿದ್ದು, ಅದರಲ್ಲಿ ಪ್ರಾಂಶುಪಾಲರ ಮೊಹರು ಹಾಗೂ ಹಸಿರು ಶಾಯಿಯಲ್ಲಿ ಮಾಡಿರುವ ಸಹಿಯೂ ಇದೆ. ಈ ರಜಾ ಅರ್ಜಿಯ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಕಾಲೇಜಿನ ಪ್ರಾಂಶುಪಾಲ ಸೀಗನಾಯಕ ಅವರು ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.

ಕಾಲೇಜಿನಲ್ಲಿ ಎರಡನೇ ವರ್ಷದ ಬಿಕಾಂನಲ್ಲಿ ಓದುತ್ತಿರುವ ಶಿವರಾಜು ಎಸ್ ಎಂಬ ವಿದ್ಯಾರ್ಥಿಯ ಹೆಸರಿನಲ್ಲಿ ಇದೇ 9ರಂದು ರಜೆಯ ಅರ್ಜಿ ಬರೆಯಲಾಗಿದೆ.

‘ಪ್ರೇಮಿಗಳ ದಿನದ ಪ್ರಯುಕ್ತ ಐದು ದಿನಗಳ ಕಾಲ ರಜೆಯನ್ನು ಕೋರಿ’ ಎಂದು ವಿಷಯವನ್ನು ಉಲ್ಲೇಖಿಸಲಾಗಿದೆ.

ಪತ್ರದಲ್ಲೇನಿದೆ:? ‘ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆದೇಶದಾದ್ಯಂತ ಆಚರಿಸುತ್ತಿರುವ ಪ್ರೇಮಿಗಳ ದಿನಾಚರಣೆಯಲ್ಲಿ ಹುಡುಗಿಯರ ಕಾಟವನ್ನು ತಡೆಯಲಾರದೆ 5 ದಿನಗಳವರೆಗೆ (14.02.2021) ರಜೆ ಕೊಡಬೇಕೆಂದು ಪ್ರಾಂಶುಪಾಲರಲ್ಲಿ ಕೇಳಿಕೊಳ್ಳುತ್ತೇನೆ’ ಎಂದು ಅರ್ಜಿಯಲ್ಲಿ ಬರೆಯಲಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಕಾಲೇಜಿನ ಪ್ರಾಂಶುಪಾಲ ಸೀಗನಾಯಕ ಅವರು ‘ಈ ವಿಷಯ ನನಗೆ ತಿಳಿದಿಲ್ಲ. ಅರ್ಜಿಯನ್ನು ಗಮನಿಸಿದ್ದೇನೆ. ನಮ್ಮ ಕಾಲೇಜಿನ ಮೊಹರು ಇದೆ. ಸಹಿಯನ್ನೂ ನಕಲು ಮಾಡಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಅರ್ಜಿಯ ಸತ್ಯಾಸತ್ಯತೆ ಪರಿಶೀಲನೆ ಮಾಡಲಾಗುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.