ಕೊಳ್ಳೇಗಾಲ: ವಿಶ್ವಕರ್ಮ ಸಮಾಜದ ವತಿಯಿಂದ 38ನೇ ವಿಶ್ವಕರ್ಮ ಪೂಜಾ ಮಹೋತ್ಸವ ವಿಜೃಂಭಣೆಯಿಂದ ಬುಧವಾರ ನಡೆಯಿತು.

ನಗರದ ಕಾವೇರಿ ರಸ್ತೆ ಕಾಳಿಕಾಂಬ ಕಮಠೇಶ್ವರ ದೇವಸ್ಥಾನದ ಮುಂದೆ ಅಲಂಕೃತ ಶ್ರೀವಿರಾಟ್ ವಿಶ್ವಕರ್ಮ ರಥಕ್ಕೆ ಪೂಜೆ ಸಲ್ಲಿಸಿ ಬಳಿಕ ಮೆರವಣಿಗೆ ಮಾಡಿದರು.

ಕಾಳಿಕಾಂಬ ದೇವಸ್ಥಾನದಿಂದ ಹೊರಟ ಮೆರವಣಿಗೆ ಲಕ್ಷ್ಮೀ ನಾರಾಯಣಸ್ವಾಮಿ ದೇವಸ್ಥಾನ ರಸ್ತೆ, ಕಾವೇರಿ ರಸ್ತೆ, ಮಸೀದಿ ವೃತ್ತ, ರಾಜ್ ಕುಮಾರ್ ರಸ್ತೆ, ಜಯ ಇನ್ಸ್ಟಿಟ್ಯೂಟ್ ರಸ್ತೆ, ದೇವಾಂಗಪೇಟೆ ಬಡಾವಣೆಗಳಲ್ಲಿ ಮೆರವಣಿಗೆ ನಡೆಸಿದರು.
ಮೆರವಣಿಗೆಯಲ್ಲಿ ಡೊಲ್ಲು, ತಮಟೆ ಶಬ್ಧಕ್ಕೆ ನೆರೆದಿದ್ದ ಯುವಕರು, ಮುಖಂಡರು ಕುಣಿದು ಕುಪ್ಪಳಿಸಿದರು.

ಬೆಳಿಗ್ಗೆ ಕಾಳಿಕಾಂಬ ಕಮಠೇಶ್ವರ ದೇವಸ್ಥಾನದಲ್ಲಿ ನವಗ್ರಹ ವಿಶ್ವಕರ್ಮ ಪೂಜೆ, ಹೋಮ ಹವನ ಹಾಗೂ ವಿಶೇಷ ಪೂಜೆ ನಡೆಸಿದರು. ಮಧ್ಯಾಹ್ನ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಉಪಹಾರ ವ್ಯವಸ್ಥೆ ಮಾಡಿದರು. ಎಲ್ಲಾ ಪೂಜಾ ಕೈಕರ್ಯವನ್ನು ಆಗಮಿಕರಾದ ಶ್ರೀಕಂಠ ಶರ್ಮ, ಜುಂಜರಾಜಾರ್ಯರು, ಸೋಮಾಚಾರ್, ಪ್ರಕಾಶ್ ರಾವ್ ನಡೆಸಿಕೊಟ್ಟರು.

ಈ ಮೆರವಣಿಗೆಯಲ್ಲಿ ವಿಶ್ವಕರ್ಮ ಸಮಾಜದ ಅಧ್ಯಕ್ಷ ಕೆ.ಪಿ.ಸಿದ್ದಪ್ಪಾಜಿ, ಉಪಾಧ್ಯಕ್ಷ ಎಸ್.ಶಿವಶಂಕರ್, ಕಾರ್ಯದರ್ಶಿ ಪಿ.ಸಿದ್ದಪ್ಪಾಜಿ, ಸಹ ಕಾರ್ಯದರ್ಶಿ ಸೂರ್ಯಪ್ರಕಾಶ್, ಪಿ.ರಾಜೇಶ್, ಖಜಾಂಚಿ ಸಂಪತ್ ಕುಮಾರ್, ಸಹಖಜಾಂಚಿ ವೈ.ಎನ್.ಯೋಗೇಶ್ ಹಾಗೂ ಸಮಾಜದ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.