ಮಹದೇಶ್ವರ ಬೆಟ್ಟ: ಮಲೆ ಮಹದೇಶ್ವರ ಬೆಟ್ಟದಲ್ಲಿ ದೇವರ ದರ್ಶನವನ್ನು ಮಾಡಿಕೊಂಡು ಸ್ವಗ್ರಾಮಕ್ಕೆ ತೆರಳುವ ವೇಳೆ ಈ ಘಟನೆ ಸಂಭವಿಸಿದ್ದು, ವಿನೋದ (45) ಎಂಬ ಮಹಿಳೆಯೇ ಸಾವಿಗೀಡಾದ ದುರ್ದೈವಿ.
ಮದ್ದೂರು ತಾಲೂಕಿನ ಕರಡಕೆರೆ ಗ್ರಾಮದಿಂದ ತನ್ನ ಪತಿ ರಾಜುವಿನೊಂದಿಗೆ ಮಾದೇಶ್ವರ ಸ್ವಾಮಿ ದೇವಾಲಯಕ್ಕೆ ಬಂದಿದ್ದ ದಂಪತಿ ದೇವರ ಧರ್ಶನವನ್ನು ಪಡೆದುಕೊಂಡು ಕೆಎಸ್ಆರ್‌ಟಿಸಿ ಕೆಎ 57 ಎಫ್ 3962 ನಂಬರಿನ ವಾಹನದಲ್ಲಿ ಸ್ವ ಗ್ರಾಮಕ್ಕೆ ತೆರಳುವ ವೇಳೆ ವಾಹನದ ಬಾಗಿಲು ಹಾಕದಿದ್ದ ಕಾರಣ ಬಾಗಿಲಿನ ಎದುರಿನ ಆಸನದಲ್ಲಿ ಕುಳಿತಿದ್ದ ಈಕೆ, ಮಹದೇಶ್ವರ ಬೆಟ್ಟದಿಂದ ತಾಳುಬೆಟ್ಟದ ಮಾರ್ಗ ಮಧ್ಯೆ 25 ನೇ ತಿರುವಿನಲ್ಲಿ ರಭಸವಾಗಿ ಬಸ್ ತಿರುಗಿದ್ದರಿಂದ ಆಸನದಲ್ಲಿ ಕುಳಿತಿದ್ದ ಮಹಿಳೆ ರಸ್ತೆಗೆ ಉರುಳಿ ಬಿದ್ದಿದ್ದು, ತಲೆಗೆ ತೀವ್ರವಾಗಿ ಪೆಟ್ಟಾಗಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.
ಹನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತ ದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.
ಈ ಪ್ರಕರಣ ಮಲೆ ಮಹದೇಶ್ವರ ಬೆಟ್ಟ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.