ಯಳಂದೂರು: ಪಟ್ಟಣದಲ್ಲಿ ಬುಧವಾರ ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕರ ಕುಂದು ಕೊರತೆ ಆಲಿಸಿ, ಅಹವಾಲು ಅರ್ಜಿ ಸ್ವೀಕರಿಸಿದರು.
ಸಮಸ್ಯೆಗಳಿದ್ದರೆ ಸಾರ್ವಜನಿಕರು ದೂರು ಸಲ್ಲಿಸಬಹುದು. ಪರಿಹರಿಸಲು ಕ್ರಮವಹಿಸಲಾಗುವುದು ಎಂದು ಲೋಕಾಯುಕ್ತ ಡಿವೈಎಸ್ಪಿ ಮ್ಯಾಥೀವ್ ಥಾಮಸ್ ಹೇಳಿದರು. ಸಾರ್ವಜನಿಕರಿಂದ 12 ಅರ್ಜಿಗಳನ್ನು ಸ್ವೀಕರಿಸಿದರು.
ಎಎಸ್ಐ ಮಹದೇವಪ್ಪ, ಲೋಕಾಯುಕ್ತ ಸಬ್‌ಇನ್‌ಸ್ಪೆಕಟರ್ ಲೋಹಿತ್ ಕುಮಾರ್ ಶಶಿಕುಮಾರ್, ಅಧಿಕಾರಿಗಳಾದ ಇಒ ಆರ್.ಉಮೇಶ್, ಸಿಡಿಪಿಒ ಸಕಲೇಶ್ವರ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೇಶವಮೂರ್ತಿ, ಕೃಷಿ ಇಲಾಖೆಯ ಅಮೃತೇಶ್ವರ, ಪ. ಪಂ. ಸದಸ್ಯ ಮಹೇಶ್ ಹಾಗೂ ತೋಟಗಾರಿಕಾ ಇಲಾಖೆ ಶಿವರಂಜನಿ ಭಾಗವಹಿಸಿದ್ದರು.