ಯಳಂದೂರು: ತಾಲ್ಲೂಕಿನಲ್ಲಿ ರಾಗಿ ಬೆಳೆಯುವ ಸಾಗುವಳಿದಾರರನ್ನು ಉತ್ತೇಜಿಸಲು ಕೃಷಿ ಇಲಾಖೆ ಬಿತ್ತನೆ ರಾಗಿಯನ್ನು ಕೆಜಿಯೊಂದಕ್ಕೆ ರೂ 1 ಬೆಲೆಯಲ್ಲಿ ವಿತರಿಸುತ್ತಿದೆ. ಕಾಡಂಚಿನ ಕೃಷಿಕರು ಮತ್ತು ಸೋಲಿಗ ರೈತರು ಬೀಜ ಕೊಳ್ಳಲು ಆಸಕ್ತಿ ತೋರಿದ್ದಾರೆ. ಬಯಲು ಸೀಮೆಯ ಹಿಡುವಳಿದಾರರಿಗೆ ತೊಗರಿ ನಾಟಿಗೆ ಒಲವು ತೋರಿದ್ದಾರೆ.

ಪ್ರಸಕ್ತ ಕೃಷಿ ಹಂಗಾಮಿನಲ್ಲಿ ಕಬ್ಬು ನಾಟಿ ಚಟುವಟಿಕೆ ಬಿರುಸು ಪಡೆದಿದೆ. ಭತ್ತದ ಕಟಾವು ನಡೆಯುತ್ತಿದ್ದು, ಬಿಳಿಜೋಳ ಮತ್ತು ಗೋವಿನ ಜೋಳ ಕೊಯ್ಲಿಗೆ ಬಂದಿದೆ. ಉದ್ದು ಮತ್ತು ಹೆಸರು ಕೊನೆಯ ಹಂತ ಮುಟ್ಟಿದ್ದು, ಮಾಗಿ ಉಳುಮೆಗೆ ರೈತರು ಚಿತ್ತ ಹರಿಸಿದ್ದಾರೆ. ತುಂತುರು ಮಳೆ ಕಾಡುತ್ತಿದ್ದು, ಕಾಲುವೆ ನೀರು ಬಳಸಿಕೊಂಡು ಸಿರಿಧಾನ್ಯ ಬಿತ್ತನೆ ಮಾಡುವತ್ತಲೂ ಅನ್ನದಾತ ಸಿದ್ಧತೆ ನಡೆಸಿದ್ದಾರೆ. ಈ ನಡುವೆ ಕಡಿಮೆ ನೀರು ಬೇಡುವ ರಾಗಿ ಮತ್ತು ನವಣೆ ವಿಸ್ತೀರ್ಣ ಹೆಚ್ಚಿಸುವತ್ತಲೂ ಬೇಸಾಯಗಾರರು ಮುಂದಾಗಿದ್ದು, ಬಿತ್ತನೆ ರಾಗಿಗೆ ಬೇಡಿಕೆ ತಂದಿತ್ತಿದೆ.

ರಾಗಿ ಬರದ ಬೆಳೆ. ಕಡಿಮೆ ಖರ್ಚಿನಲ್ಲಿ, ಸುಲಭವಾಗಿ ನಿರ್ವಹಣೆ ಮಾಡಬಹುದು. ಹಟ್ಟಿಗೊಬ್ಬರ ಬಳಸಿದರೆ ಉತ್ತಮ ಇಳುವರಿ ನಿರೀಕ್ಷಿಸಬಹುದು. ವರ್ಷಪೂರ್ತಿ ಕುಟುಂಬದ ಆಹಾರದ ಸಮಸ್ಯೆ ನೀಗುತ್ತದೆ. ರಾಸುಗಳಿಗೆ ಉತ್ತಮ ಮೇವು ಸಂಗ್ರಹಿಸಬಹುದು. ಹಾಗಾಗಿ, ಕಾಡಂಚಿನ ರೈತರು ರಾಗಿ ಬಿತ್ತನೆಗೆ ಒಲವು ತೋರಿದ್ದಾರೆ ಎಂದು ದೇವರಹಳ್ಳಿ ಗ್ರಾಮದ ಕೃಷಿಕ ಚನ್ನಂಜೆಗೌಡ ಹೇಳಿದರು.

ಎರಚು ಬಿತ್ತನೆ: ಬೆಟ್ಟದ ಸುತ್ತಲ ಕೃಷಿಕರು 5 ಕೆ.ಜಿ. ತೂಗುವ ಮಿನಿಕಿಟ್ ರಾಗಿಯನ್ನು 1 ಎಕೆರೆಗೆ ಎರಚು ಬಿತ್ತನೆ ಮಾಡುತ್ತಾರೆ. ಅಲ್ಪ ಮಳೆಗೂ ಈ ರಾಗಿ ಬೇರು ಬಿಡುತ್ತದೆ. ಬಹುಬೇಗ ಕಟಾವಿಗೆ ಬರಲಿದೆ. ಬಹುತೇಕರು ಸಾವಯವ ವಿಧಾನದಲ್ಲಿ ಬೆಳೆಯುವುದರಿಂದ ರಾಗಿಗೆ ಬೇಡಿಕೆ ತಂದುಕೊಡುತ್ತದೆ. ರಾಗಿ ನಡುವೆ ತೊಗರಿಯನ್ನು ಸಾಲು ಬಿತ್ತನೆ ಮಾಡುತ್ತೇವೆ ಎಂದು ಸೋಲಿಗ ರೈತ ಬಸವೇಗೌಡ ತಿಳಿಸಿದರು.

ಬೀಜ ಹಂಚಿಕೆ: ಪ್ರತಿವರ್ಷ ರಾಗಿ ಮತ್ತು ಸಿರಿಧಾನ್ಯ ಬಿತ್ತನೆ ಪ್ರದೇಶ ಕಡಿಮೆಯಾಗುತ್ತ ಸಾಗಿದೆ. ಆಹಾರ ಧಾನ್ಯಗಳ ಬದಲಾಗಿ ವಾಣಿಜ್ಯ ಬೆಳೆಗಳತ್ತ ವ್ಯವಸಾಯಗಾರರು ಒಲವು ತೋರಿದ್ದಾರೆ. ಹಾಗಾಗಿ, ರೈತರಿಗೆ 120 ದಿನಗಳಲ್ಲಿ ಕಟಾವಿಗೆ ಬರುವ ಹೈಬ್ರಿಡ್ ರಾಗಿಯನ್ನು ಕೆಜೆಗೆ ರೂ 1 ದರದಲ್ಲಿ ವಿತರಿಸಲಾಗುತ್ತಿದ್ದು, ಆದಿವಾಸಿಗಳು ನಾಟಿಗೆ ಹೆಚ್ಚಿನ ಒಲವು ತೋರಿದ್ದಾರೆ ಎಂದು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಎ. ವೆಂಕಟರಂಗಶೆಟ್ಟಿ ಮಾಹಿತಿ ನೀಡಿದರು.

‘ಆಹಾರ ಭದ್ರತಾ ಯೋಜನೆ’

‘ತಾಲ್ಲೂಕು 10.5 ಸಾವಿರ ಹೆಕ್ಟೇರ್ ಸಾಗುವಳಿ ಪ್ರದೇಶ ಹೊಂದಿದೆ. ಅರ್ಧಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಕಬ್ಬು ಮೆಕ್ಕೆಜೋಳ ಬೆಳೆಯಲಾಗುತ್ತಿದೆ. ಆಹಾರ ಬೆಳೆಗಳಾದ ರಾಗಿ ಬಿಳಿಜೋಳ ಎಳ್ಳು ಸೂರ್ಯಕಾಂತಿ ಹಾಗೂ ದ್ವಿದಳ ಧಾನ್ಯ ವಿಸ್ತೀರ್ಣ ಕಡಿಮೆಯಾಗುತ್ತಿದೆ. ಹಾಗಾಗಿ ಸರ್ಕಾರ ಆಹಾರ ಭದ್ರತಾ ಯೋಜನೆಯಲ್ಲಿ ಕೃಷಿಕರಿಗೆ ರಾಗಿ ಮತ್ತು ತೊಗರಿಯನ್ನು ಉಚಿತವಾಗಿ ನೀಡುತ್ತಿದೆ. 50 ಹೆಕ್ಟೇರ್ ಭೂ ಪ್ರದೇಶದಲ್ಲಿ ರಾಗಿ ಬೆಳೆ ಉತ್ತೇಜಿಸಲು 1 ಕೆಜಿಗೆ ₹1 ದರದಲ್ಲಿ ವಿತರಿಸಲಾಗುತ್ತಿದೆ. ತೊಗರಿಯನ್ನು ಉಚಿತವಾಗಿ ಪಡೆಯಬಹುದು’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅಮೃತೇಶ್ವರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.