ಯಳಂದೂರು: ‘ಬಡಾವಣೆಗಳಲ್ಲಿ ಪ್ರತಿಭಾವಂತ ಮಕ್ಕಳನ್ನು ಗೌರವಿಸುವ ಕೆಲಸವನ್ನು ಹಿರಿಯರು ಮುಂದುವರಿಸಲಿ’ ಎಂದು ಬಿಳಿಗಿರಿ ರಂಗನ ಬೆಟ್ಟದ ದೇಗುಲ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜೆ.ಶ್ರೀನಿವಾಸ್ ಹೇಳಿದರು.

ಪಟ್ಟಣಲ್ಲಿ ಶ್ರೀಭಗವಾನ್ ಬುದ್ಧ ಸೇವಾ ಸಂಸ್ಥೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಸರ್ಕಾರಿ ನೌಕರರ ಅಭಿನಂದನ ಸಮಾರಂಭದಲ್ಲಿ ಅವರು ಮಾತನಾಡಿದರು. ಪಿ.ಯು. ನಂತರ ಮಕ್ಕಳಲ್ಲಿ ಸಾಧನೆಯ ಬಗ್ಗೆ ನಿರ್ದಿಷ್ಟ ಗುರಿ ಇರಬೇಕು. ಸಾಧಕರ ಮಾರ್ಗದರ್ಶನ ಪಡೆಯಬೇಕು. ಗುರು ಹಿರಿಯರ ಹಾದಿಯಲ್ಲಿ ತೆರಳುವ ಮನಸ್ಥಿತಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.

ನಿವೃತ್ತ ನೌಕರ ಜೆ.ನಾಗರಾಜು ಮಾತನಾಡಿ, ‘ಮಕ್ಕಳು ಮೊಬೈಲ್ ಗೀಳಿನಿಂದ ಹೊರ ಬರಬೇಕು. ಸಾಮಾಜಿಕ ಜಾಲತಾಳಗಳಲ್ಲಿ ದಿನ ಕಳೆಯದೆ, ಪತ್ರಿಕೆ, ಪುಸ್ತಕಗಳನ್ನು ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ಈ ದೆಸೆಯಲ್ಲಿ ಪೋಷಕರ ಪಾತ್ರವೂ ಮುಖ್ಯವಾಗಿದೆ’ ಎಂದರು.

ಸಂಸ್ಥೆಯ ಅಧ್ಯಕ್ಷ ಎಸ್.ಪುಟ್ಟರಾಜು, ಗೌರವಾಧ್ಯಕ್ಷ ಸಿ.ಬಸವರಾಜ, ಎನ್.ರಾಮಯ್ಯ ಮುಖಂಡರಾದ ಸವಿತಾ ಬಸವರಾಜು, ನಂಜುಂಡಸ್ವಾಮಿ, ಯಜಮಾನರಾದ ನಾಗರಾಜು, ಮಹೇಶ್, ಪುಟ್ಟಸ್ವಾಮಿ, ನಂಜುಂಡಯ್ಯ, ಶ್ಯಾಮ್ಸುಂದರ್, ಬಿ.ಮಲ್ಲಿಕಾರ್ಜುನ, ಎಂ..ಮಲ್ಲಿಕಾರ್ಜುನ, ಎ.ಎನ್.ನಾಗೇಂದ್ರ ಎಂ.ಶಶಿಧರ್, ಕೃಷ್ಣಯ್ಯ, ಎಂ. ಶಶಿಧರ್, ಎಸ್. ಗುರುಲಿಂಗಯ್ಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.