ಗುರುವಾರ , ಮೇ 19, 2022
23 °C

ಚಿಂತಾಮಣಿ: ಕುರಿ ತೊಳೆಯುವಾಗ ಕೆರೆಯಲ್ಲಿ ಮುಳುಗಿ ಮೂವರು ಬಾಲಕರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ತಾಲ್ಲೂಕಿನ ಕೊಡದವಾಡಿ ಕೆರೆಯಲ್ಲಿ ಮುಳುಗಿ ಮಂಗಳವಾರ ಮೂವರು ಬಾಲಕರು ಮೃತಪಟ್ಟಿದ್ದಾರೆ.

ಕೊಡದವಾಡಿ ಗ್ರಾಮದ ಸೋದನ್ (15), ಸುದರ್ಶನ್(17) ಬಚ್ಚವಾರಹಳ್ಳಿಯ ಸತೀಶ್ (17) ಮೃತರು.

ಗ್ರಾಮದ ವಾಟರ್ ಮೆನ್ ಚೌಡಪ್ಪ ಅವರ ಮಕ್ಕಳಾದ ಸುದರ್ಶನ್, ಅರ್ಜುನ್ ಮತ್ತು ಅವರ ತಂಗಿಯ ಮಗ ಬಚ್ಚವಾರಹಳ್ಳಿ ಸತೀಶ್ ಹಾಗೂ ಗ್ರಾಮದ ಸುರೇಶ್ ಎಂಬುವವರ ಪುತ್ರ ಸೋದನ್ ಕೆರೆಯಲ್ಲಿ ಕುರಿಗಳನ್ನು ತೊಳೆಯಲು ಹೋಗಿದ್ದರು. ಅರ್ಜುನ್ ಕೆರೆಯ ದಡದಲ್ಲಿ ಕುಳಿತ್ತಿದ್ದ. ಉಳಿದವರು ಕೆರೆಗೆ ಇಳಿದಿದ್ದರು.

ಸೋದನ್ ಮತ್ತು ಸುದರ್ಶನ್ ನೀರಿನಲ್ಲಿ ಮುಳುಗುತ್ತಿದ್ದಾಗ ಸತೀಶ್ ಇವರ ರಕ್ಷಣೆಗೆ ಮುಂದಾಗಿದ್ದು ಮೂವರು ನೀರು ಪಾಲಾಗಿದ್ದಾರೆ.

ಬಾಲಕರ ಕುಟುಂಬದವರ ಆಕ್ರಂದನ ಮನಕಲಕುವಂತಿತ್ತು. ಸುತ್ತಮುತ್ತಲ ಗ್ರಾಮಗಳ ನೂರಾರು ಜನರು ಕೆರೆಯ ಬಳಿ ಜಮಾಯಿಸಿದ್ದರು. ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಸ್ಥಳಕ್ಕೆ ಭೇಟಿ ನೀಡಿದ್ದರು. ಬಾಲಕರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು