ಶುಕ್ರವಾರ, ಅಕ್ಟೋಬರ್ 30, 2020
26 °C

ಜಿಲ್ಲೆಯಲ್ಲಿ 7,606 ಕ್ಕೇರಿದ ಕೋವಿಡ್ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಶುಕ್ರವಾರ 106 ಹೊಸ ಕೋವಿಡ್‌-19 ಪ್ರಕರಣಗಳು ವರದಿಯಾಗಿದ್ದು, ಇದರಿಂದ ಸೋಂಕಿತರ ಸಂಖ್ಯೆ 7,606ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಪೈಕಿ ಈವರೆಗೆ 86 ಮಂದಿ ಮೃತಪಟ್ಟಿದ್ದು, 5,851 ಮಂದಿ ಚಿಕಿತ್ಸೆಯಿಂದ ಗುಣಮುಖರಾಗಿದ್ದು, ಶುಕ್ರವಾರ 25 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಪ್ರಸ್ತುತ 1,668 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಕಳೆದ ಎರಡು ವಾರಗಳಿಂದ ಕೋವಿಡ್ 19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಅಧಿಕಾರಿಗಳು ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಆದರೂ ಕೂಡ ನಾಗರಿಕರು ಹೆಚ್ಚಿನ ಮುಂಜಾಗ್ರತಾ ‌ಕ್ರಮಗಳನ್ನು ಪಾಲಿಸಿ ಕಡ್ಡಾಯವಾಗಿ ನಡುವಿನ ಅಂತರವನ್ನು ಕಾಪಾಡಿ, ಮಾಸ್ಕ್‌‌ ಧರಿಸಬೇಕಾಗಿದೆ’ ಎಂದು ಅಧಿಕಾರಿಗಳು ಎಚ್ಚರಿಸುತ್ತಿದ್ದಾರೆ.

ಜಿಲ್ಲೆಯ ವಿವಿಧ ತಾಲ್ಲೂಕಿನಲ್ಲಿ ಕೋವಿಡ್ ಸೋಂಕಿತರ ಜತೆಗೆ ಸಾವಿನ ಪ್ರಕರಣಗಳೂ ಕೂಡ ಉಲ್ಬಣಗೊಳ್ಳುತ್ತಿವೆ. ಇದರಿಂದ ಸ್ಥಳೀಯ ‌ಜನತೆ ಭಯದ ವಾತಾವರಣದಲ್ಲಿ ಬದುಕುವಂತಾಗಿದ್ದಾರೆ.

ಪಟ್ಟಿ..

ಜಿಲ್ಲೆಯಲ್ಲಿ ತಾಲ್ಲೂಕುವಾರು ಕೋವಿಡ್‌ ಪ್ರಕರಣಗಳ ವಿವರ

ತಾಲ್ಲೂಕು; ಅಕ್ಟೋಬರ್–2; ಒಟ್ಟು; ಬಿಡುಗಡೆ; ಒಟ್ಟು ಬಿಡುಗಡೆ; ಸಕ್ರಿಯ ಪ್ರಕರಣ; ಸಾವು

ಚಿಕ್ಕಬಳ್ಳಾಪುರ;50;2403;0;1873;497;32

ಬಾಗೇಪಲ್ಲಿ;16;1010;0;720;281;9

ಚಿಂತಾಮಣಿ;23;1314;0;1028;264;22

ಗೌರಿಬಿದನೂರು;9;1714;23;1263;435;16

ಗುಡಿಬಂಡೆ;0;340;2;271;68;1

ಶಿಡ್ಲಘಟ್ಟ;8;825;0;696;123;6

ಒಟ್ಟು;106;7606;25;5851;1668;86

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು