ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷೇಧವಿದ್ದರೂ ನಂದಿಬೆಟ್ಟಕ್ಕೆ ಬಂದ ಪ್ರವಾಸಿಗರ ದಂಡು

Last Updated 19 ಜುಲೈ 2021, 3:57 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಪ್ರಸಿದ್ಧ ನಂದಿಗಿರಿಧಾಮಕ್ಕೆ ವಾರಾಂತ್ಯದಲ್ಲಿ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿದೆ. ಕೋವಿಡ್ ಮುನ್ನೆಚ್ಚರಿಕೆ ಅಂಗವಾಗಿ ಶುಕ್ರವಾರ ಸಂಜೆ 6ರಿಂದ ಸೋಮವಾರ ಬೆಳಿಗ್ಗೆ 6ರವರೆಗೆ ಜಿಲ್ಲಾಡಳಿತ ಪ್ರವೇಶಕ್ಕೆ ನಿಷೇಧ ವಿಧಿಸಿದೆ. ಹೀಗಿದ್ದರೂ ಭಾನುವಾರ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ನಂದಿಬೆಟ್ಟದತ್ತ ಧಾವಿಸಿದರು.

ಶನಿವಾರ ರಾತ್ರಿ ಉತ್ತಮ ಮಳೆ ಸುರಿದಿತ್ತು. ನಂದಿ ಬೆಟ್ಟದ ರಸ್ತೆಯಲ್ಲಿ ಮರಗಳು ಸಹ ಬಿದ್ದಿದ್ದವು. ಈ ಅಡೆತಡೆಗಳನ್ನು ದಾಟಿಕೊಂಡೇ ಪ್ರವಾಸಿಗರು ಬೆಳಿಗ್ಗೆಯೇ ಬೆಟ್ಟದತ್ತ ಧಾವಿಸಿದರು. ಆದರೆ, ಬೆಟ್ಟದ ಆರಂಭದಲ್ಲಿಯೇ ಪೊಲೀಸರು ಬ್ಯಾರಿಕೇಡ್‌ಗಳನ್ನು ಇರಿಸಿದ್ದರು. ಚೆಕ್‌ಪೋಸ್ಟ್‌ ಸಹ ಬಂದ್ ಆಗಿತ್ತು. ನಿಷೇಧವಿರುವುದನ್ನು ತಿಳಿದು ಬೆಟ್ಟದ ಸುತ್ತಲಿನ ತಪ್ಪಲು, ಪ್ರಾಕೃತಿಕವಾಗಿ ಸುಂದರವಾಗಿ ಕಾಣುವ ಪ್ರದೇಶಗಳತ್ತ ತೆರಳಿದರು.

ಬೆಟ್ಟದ ಬುಡದಲ್ಲಿ ಗುಂಪು ಗೂಡಿದ್ದರು. ಅಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ನಂತರ ಬೆಟ್ಟದ ತಪ್ಪಲು, ಬಯಲು ಹೀಗೆ ವಿವಿಧ ಕಡೆಗಳಿಗೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT