ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟ: ಇ-ಬೈಕ್ ತಯಾರಿಸಿದ ಯುವಕ, ಲಾಕ್‌ಡೌನ್‌ ಅವಧಿ ಸದುಪಯೋಗ

Last Updated 20 ಜೂನ್ 2020, 3:16 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಎರಡೂವರೆ ತಿಂಗಳ ಲಾಕ್‌ಡೌನ್ ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಯುವಕನಲ್ಲಿ ಅನ್ವೇಷಕ ಮನೋಭಾವ ಸೃಜಿಸಿದೆ. ಪೆಟ್ರೋಲ್‌ನಲ್ಲಿ ಚಲಿಸುವ ದ್ವಿಚಕ್ರ ವಾಹನವನ್ನು ಎಲೆಕ್ಟ್ರಿಕ್ ಬೈಕ್‌ ಆಗಿ ಪರಿವರ್ತಿಸಿದ್ದಾನೆ.

ಅಪ್ಪೇಗೌಡನಹಳ್ಳಿಯ ಎಂ. ಅಪ್ಪಾಜಿಗೌಡ ಮತ್ತು ತಾರಾ ದಂಪತಿಯ ಮಗ ಎ.ಹರ್ಷನ್ ಗೌಡ, ಅಕ್ಷರ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿ.

ಕಳೆದ ವರ್ಷ ಸೈಕಲ್‌ಗೆ ಬ್ಯಾಟರಿ ಅಳವಡಿಸುವಲ್ಲಿ ಯಶಸ್ವಿಯಾಗಿದ್ದ ಈ ಯುವಕ, ಈಗ ಹಳೆಯ ಬೈಕ್‌ ಖರೀದಿಸಿ ಅದನ್ನು ಇ-ಬೈಕ್‌ ಆಗಿಸಿದ್ದಾನೆ.

‘ಮೊದಲು ಸೈಕಲ್‌ಗೆ ಬ್ಯಾಟರಿ ಅಳವಡಿಸಿದ್ದೆ. ಅದನ್ನು ದ್ವಿಚಕ್ರ ವಾಹನಕ್ಕೆ ಅಳವಡಿಸಬೇಕೆಂಬ ಆಲೋಚನೆ ಬಂತು. ಆರು ತಿಂಗಳಿನಿಂದ ಈ ಕುರಿತು ಸದಾ ಆಲೋಚಿಸುತ್ತಿದ್ದೆ. ₹ 4,500ಕ್ಕೆ ಹಳೇ ಬೈಕ್‌ ಖರೀದಿಸಿದ್ದೆ. ಲಾಕ್‌ಡೌನ್ ಅವಧಿಯನ್ನು ಸಂಪೂರ್ಣವಾಗಿ ಸದುಪಯೋಗ ಮಾಡಿಕೊಂಡು ಪೆಟ್ರೊಲ್‌ ಎಂಜಿನನ್ನು ಎಲೆಕ್ಟ್ರಿಕ್ ಎಂಜಿನ್‌ಗೆ ಬದಲಾಯಿಸಿದೆ’ ಎನ್ನುತ್ತಾರೆ ಎ. ಹರ್ಷನ್ ಗೌಡ.

‘ಈ ಇ–ಬೈಕ್‌ ಗಂಟೆಗೆ 40ರಿಂದ 45 ಕಿ.ಮೀ ವೇಗವಾಗಿ ಚಲಿಸುತ್ತದೆ. ಸ್ಕೂಟಿಯಂತೆ ಗೇರಿಲ್ಲದೆ ಚಲಿಸುವ ಇದು, ಎಕ್ಸಲೇಟರ್ ಮತ್ತು ಬ್ರೇಕ್ ಹೊಂದಿದೆ. ಮುಂದೆ ಲೈಟ್ ಕೂಡ ಹಾಕಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಇಂಡಿಕೇಟರ್, ಹಾರ್ನ್, ಬ್ರೇಕ್ ಲೈಟ್ ಕೂಡ ಕೆಲಸ ಮಾಡುತ್ತದೆ. ಪರಿಸರ ಮಾಲಿನ್ಯ ತಪ್ಪಿಸಲು ನಮಗೆ ಈ ರೀತಿಯ ವಾಹನಗಳು ಅತ್ಯಗತ್ಯ’ ಎನ್ನುವುದು ಅವರ ಅಭಿಪ್ರಾಯ.

ಇನ್ನೂ ಪ್ರಯೋಗಗಳನ್ನು ಮಾಡಬೇಕಿದೆ. ಬ್ಯಾಟರಿ ಸ್ವಯಂ ಚಾರ್ಜ್ ಆಗುವಂತೆ ಮಾಡುವುದು. ನೋಡಲು ಮತ್ತಷ್ಟು ಆಕರ್ಷಕವಾಗಿಸುವ ಅಗತ್ಯವಿದೆ. ಮೊದಲ ಪ್ರಯೋಗವಾದ್ದರಿಂದ ನನಗೆ ಈಗ ₹ 24 ಸಾವಿರ ಖರ್ಚಾಗಿದೆ. ಮುಂದಿನ ಪ್ರಯೋಗದಲ್ಲಿ ಕಡಿಮೆ ಖರ್ಚಿನಲ್ಲಿಯೇ ಸಿದ್ಧಪಡಿಸುತ್ತೇನೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT