ಗುರುವಾರ , ಜುಲೈ 7, 2022
25 °C

ಖವ್ವಾಲಿ ಸಂಸ್ಕೃತಿ ಬೆಳೆಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಾತಪಾಳ್ಯ: ‘ದೇಶದ ಒಳಿತಿಗಾಗಿ ಮುಸ್ಲಿಂ ಬಾಂಧವರಿಂದ ನಡೆಯುತ್ತಿರುವ ಖವ್ವಾಲಿ ಸಂಸ್ಕೃತಿ ಮತ್ತಷ್ಟು ಬೆಳೆಯಬೇಕು’ ಎಂದು ಬಾಗೇಪಲ್ಲಿಯ ಡಾ.ಅನಿಲ್ ಕುಮಾರ್ ಹೇಳಿದರು.

ಪಾತಪಾಳ್ಯ ಹೋಬಳಿಯ ನಾರೇಮದ್ದೇಪಲ್ಲಿ ಗ್ರಾಮದಲ್ಲಿ ಹಿಂದೂ- ಮುಸ್ಲಿಂಮರ ಏಕತೆಗೆ ಶ್ರಮಿಸಿದ ಅವಧೂತ ಸಯ್ಯದ್ ಮಹಬೂಬ್ ಷಾ ಖಾದ್ರಿ ಕಾಮಸಾನ್ ಪಲ್ಲಿ (ಮುರ್ಕ್ಷಿದ್) ಪ್ರೇರಣೆಯಿಂದ ಹಜರತ್ ಮಜಬುಬ್ ಸುಬಹಾನಿ (ರ.ಅ.ಸೊ) ಗ್ಯಾರಿ ಶರೀಫ್ 10ನೇ ಉರುಸ್ ಅಂಗವಾಗಿ ಏರ್ಪಡಿಸಿದ್ದ ಗಂಧೋತ್ಸವದಲ್ಲಿ ಅವರು ಮಾತನಾಡಿದರು.

ಭಾರತ ಭಿನ್ನ ಸಂಸ್ಕೃತಿ ಮತ್ತು ಧರ್ಮಗಳ ತವರೂರು. ಯಾವುದೇ ಧರ್ಮದವರು ಮಾಡುವ ಆಚರಣೆಗಳು ದೇಶದ ಹಿತ ಮತ್ತು ಜನರ ಒಳಿತನ್ನು ಬಯಸುತ್ತವೆ. ಎಲ್ಲಾ ಧರ್ಮಗಳ ಸಂಸ್ಕೃತಿ ಮತ್ತು ಆಚರಣೆಯನ್ನು ಪ್ರತಿಯೊಬ್ಬರು ಗೌರವಿಸಿ ಬೆಳೆಸಬೇಕು ಎಂದರು.

ಜೋಟಿ ಶಬ್ನಂ ಕೊಲಾಪುರ ಮತ್ತು ಹಬ್ಬಳಿ ಶಹಬಾಜ್ದ್ ರಾಜ್ ಚಿಷ್ಠಿ ಜುಗಲ್‌ ತಂಡಗಳು ಸೆಣಸಾಟಕ್ಕೆ ಇಳಿದಂತೆ ಹಾಡುಗಾರಿಕೆ ನಡೆಸಿಕೊಟ್ಟವು. ಹಜರತ್ ಇಮಾಮ್ ಸಾಬ್, ಪೊಲೀಸ್ ಮಹಬೂಬ್ ಬಾಷಾ, ಎನ್.ಎಫ್. ಇನಾಯತ್‌ ಉಲ್ಲಾ, ಎನ್.ಎಂ. ಮಬ್ಬಾಷ , ಅನ್ವರ್ ಸಾಬ್, ಹಮೀದ್ ಸಾಬ್, ಟಿಪಿಎಸ್ ಮಾಜಿ ಅಧ್ಯಕ್ಷೆ ಸುಜಾತಮ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಬಿಕಾ ಪ್ರಶಾಂತ್, ಪಾಪಿರೆಡ್ಡಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು