ಬುಧವಾರ, ಅಕ್ಟೋಬರ್ 21, 2020
25 °C

ಸರ್ಕಾರಿ ಶಾಲೆಗೆ ದಾಖಲಿಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ‘ದೂರದ ಖಾಸಗಿ ಶಾಲೆಗಳಿಗೆ ಬದಲಾಗಿ ಸ್ವಗ್ರಾಮದ ಸರ್ಕಾರಿ ಶಾಲೆಗಳಿಗೆ ದಾಖಲಿಸುವುದು ಉತ್ತಮ’ ಎಂದು ದಾನಿ ಟಿ.ಎನ್.ಚಂದ್ರಶೇಖರರೆಡ್ಡಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬುರುಡಗುಂಟೆ ಕ್ಲಸ್ಟರ್‌ನ ತುಳವನೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶನಿವಾರ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಿಸಿ ಅವರು ಮಾತನಾಡಿದರು.

‘ಮಕ್ಕಳ ವಿದ್ಯಾಭ್ಯಾಸಕ್ಕಿಂತ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ಪೋಷಕರು ಹೊಂದಿರಬೇಕು. ದಿನೇ ದಿನೇ ಕೊರೊನಾ ವೈರಸ್ ನಿಯಂತ್ರಣ ಮೀರಿ ವೇಗವಾಗಿ ಹರಡುತ್ತಿದೆ. ಇಂತಹ ಸಂದರ್ಭದಲ್ಲಿ ಮಕ್ಕಳನ್ನು ದೂರದ ಶಾಲೆಗಳಿಗೆ ಅಥವಾ ವಸತಿ ಶಾಲೆಗಳಿಗೆ ದಾಖಲಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ’ ಎಂದರು.

ಮುಖ್ಯ ಶಿಕ್ಷಕ ಮೂಡಲಗೊಲ್ಲಹಳ್ಳಿ ಕೆ.ನರಸಿಂಹಪ್ಪ ಮಾತನಾಡಿ, ‘ಕೋವಿಡ್-19 ನಡುವೆಯೂ ವಿದ್ಯಾರ್ಥಿಗಳಿಗೆ ವಿದ್ಯಾಗಮದ ಮೂಲಕ ಕಲಿಕೆಯಾಗುತ್ತಿದೆ. ಮಳೆ, ಗಾಳಿ ಬಂದರೆ ಮಕ್ಕಳನ್ನು ಸಂರಕ್ಷಿಸಲು ಕಷ್ಟ
ವಾಗುತ್ತದೆ. ಸಂಕಷ್ಟಗಳ ನಡುವೆಯೂ ಮಕ್ಕಳ ಕಲಿಕೆ ನಿರಂತರವಾಗಿ ನಡೆಯುತ್ತಿದೆ’ ಎಂದರು.

ಸಹಶಿಕ್ಷಕ ಸಿ.ವೆಂಕಟರಮಣ, ವಿ.ಆಂಜನೇಯ ಪೋಷಕರಾದ ವೆಂಕಟರಮಣಪ್ಪ, ರಾಮಾಂಜಿ, ಆಂಜನೇಯ, ರತ್ನಮ್ಮ, ಶ್ಯಾಮಲ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.