ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ 27,971 ಮತದಾರರ ಹೆಚ್ಚಳ

2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ 9,97,677 ಮತದಾರು; ಈಗ 10,25,648 ಮತದಾರರು
Last Updated 11 ಜನವರಿ 2023, 7:25 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: 2023ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಂತಿಮ ಮತದಾರರ ಪಟ್ಟಿಯನ್ನು ಜಿಲ್ಲಾಡಳಿತ ಇತ್ತೀಚೆಗೆ ಬಿಡುಗಡೆಗೊಳಿಸಿದೆ. ಆ ಪ್ರಕಾರ ‌ಜಿಲ್ಲೆಯ 5 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 10,25,648 ಮತದಾರರು ಇದ್ದಾರೆ. ಈ ಪೈಕಿ 5,08,550 ಪುರುಷರು ಹಾಗೂ 5,17,098 ಮಹಿಳೆಯರಾಗಿದ್ದಾರೆ.

2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿನ ಅಂತಿಮ ಮತದಾರರ ಪಟ್ಟಿಗೆ ಮತ್ತು ಇಂದಿನ ಮತದಾರರ ಪಟ್ಟಿಗೆ ಹೋಲಿಸಿದರೆ 2023ರ ಪಟ್ಟಿಯಲ್ಲಿ ಜಿಲ್ಲೆಯಲ್ಲಿ 27,971 ಮತದಾರರು ಹೆಚ್ಚಳವಾಗಿದ್ದಾರೆ.

2018ರಲ್ಲಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 9,97,677 ಮತದಾರರು ಇದ್ದರು. ಇವರಲ್ಲಿ 4,99,572 ಪುರುಷ, 4,98,105 ಮಹಿಳಾ ಮತ್ತು 92 ಇತರೆ ಮತದಾರರು ಇದ್ದರು. 2018ರ ಮತ್ತು 2023ರ ಮತದಾರರ ಪಟ್ಟಿಯನ್ನು ತುಲನೆ ಮಾಡಿದರೆ ಜಿಲ್ಲೆಯಲ್ಲಿ 8,978 ಪುರುಷ ಮತ್ತು 18,993 ಮಹಿಳಾ ಮತದಾರರು ಈ ಬಾರಿ ಹೆಚ್ಚಿದ್ದಾರೆ.

2018ರಲ್ಲಿ ಎಷ್ಟು ಹೊಸ ಸೇರ್ಪಡೆ, ಈ ಬಾರಿ ಎಷ್ಟು: 14,148 ಪುರುಷ, 15,773 ಮಹಿಳೆಯರು ಸೇರಿದಂತೆ ಒಟ್ಟು 29,921 ಹೊಸ ಅರ್ಹ ಮತದಾರರು ಸೇರ್ಪಡೆಗೊಂಡಿದ್ದರು. ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ಒಟ್ಟು 23,597 ಜನರ ಹೆಸರು ಕೈಬಿಡಲಾಗಿತ್ತು. ವಿಳಾಸ, ಭಾವಚಿತ್ರ ಇತರೆ ಮಾಹಿತಿ ಬದಲಾವಣೆ ಕೋರಿ ಸಲ್ಲಿಸಿದ್ದ 7,876 ತಿದ್ದುಪಡಿ, 3,962 ವರ್ಗಾವಣೆ ಅರ್ಜಿಗಳನ್ನು ಪುರಸ್ಕರಿಸಗಿತ್ತು.

2023ರ ಪಟ್ಟಿಯ ಪ್ರಕಾರ ಜಿಲ್ಲೆಯಲ್ಲಿ 26,187 ಮಂದಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆ ಆಗಿದ್ದಾರೆ. ಈ ಬಾರಿ 11,234 ಮತದಾರರನ್ನು ಜಿಲ್ಲೆಯಲ್ಲಿ ಕೈಬಿಡಲಾಗಿದೆ. 19,601 ತಿದ್ದುಪಡಿಗಳನ್ನು ಮಾಡಲಾಗಿದೆ.

ಚಿಕ್ಕಬಳ್ಳಾಪುರ, ಚಿಂತಾಮಣಿ ಹೆಚ್ಚು: ಜಿಲ್ಲೆಯಲ್ಲಿ ಗೌರಿಬಿದನೂರು ಮತ್ತು ಚಿಂತಾಮಣಿ ಕ್ಷೇತ್ರಗಳಲ್ಲಿ ಕಳೆದ ಚುನಾವಣೆಯಲ್ಲಿಯೇ ಮತದಾರರು ಎರಡು ಲಕ್ಷ ದಾಟಿದ್ದರು. ಈ ಎರಡೂ ಕ್ಷೇತ್ರಗಳು ಜಿಲ್ಲೆಯಲ್ಲಿ ಗರಿಷ್ಠ ಮತದಾರರನ್ನು ಹೊಂದಿರುವ ಕ್ಷೇತ್ರಗಳು ಎನಿಸಿವೆ.

ಕಳೆದ ವಿಧಾನಸಭಾ ಚುನಾವಣೆ ಮತ್ತು 2023ರ ಚುನಾವಣೆಯ ಅಂತಿಮ ಮತದಾರರ ಪಟ್ಟಿಯನ್ನು ಹೋಲಿಕೆ ಮಾಡಿದರೆ ಈ ಬಾರಿ ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿ ಕ್ಷೇತ್ರದಲ್ಲಿ ಹೆಚ್ಚು ಮತದಾರರು ಹೊಸದಾಗಿ ಸೇರ್ಪಡೆ ಆಗಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ 8,415 ಮತ್ತು ಚಿಂತಾಮಣಿಯಲ್ಲಿ 8,796 ಮತದಾರರು ಹೆಚ್ಚಳವಾಗಿದ್ದಾರೆ. ಬಾಗೇಪಲ್ಲಿ ಕ್ಷೇತ್ರದಲ್ಲಿ 2,121 ಮತದಾರರು ಹೆಚ್ಚಳವಾಗಿದ್ದು ಕಡಿಮೆ ಸಂಖ್ಯೆಯಲ್ಲಿ ಹೆಚ್ಚಳ ಕಂಡ ಕ್ಷೇತ್ರ ಇದಾಗಿದೆ.

ಮಹಿಳೆಯರ ಮೇಲುಗೈ: ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ 2018 ಮತ್ತು 2023ರ ಹೋಲಿಕೆ ಗಮನಿಸಿದರೆ ಹೊಸದಾಗಿ ಪುರುಷ ಮತದಾರರ ಸೇರ್ಪಡೆಯ ಪ್ರಮಾಣಕ್ಕಿಂತ ಮಹಿಳಾ ಮತದಾರರ ಸೇರ್ಪಡೆ ಪ್ರಮಾಣವೇ ಹೆಚ್ಚಿದೆ.

ಈ ಹಿಂದಿನ ಚುನಾವಣೆಗೆ ಹೋಲಿಸಿದರೆ ಈ ಬಾರಿ ಗೌರಿಬಿದನೂರು ಕ್ಷೇತ್ರದಲ್ಲಿ 3,562 ಮಹಿಳಾ ಮತದಾರರು, ಬಾಗೇಪಲ್ಲಿಯಲ್ಲಿ 1,452, ಚಿಕ್ಕಬಳ್ಳಾಪುರದಲ್ಲಿ 5,569, ಶಿಡ್ಲಘಟ್ಟದಲ್ಲಿ 2,474 ಮತ್ತು ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ 5,933 ಮಹಿಳಾ ಮತದಾರ ಸಂಖ್ಯೆ ಹೆಚ್ಚಳವಾಗಿದೆ.

***

ಪಟ್ಟಿಗೆ

ವಿಧಾನಸಭಾ ಕ್ಷೇತ್ರವಾರು 2018 ಮತ್ತು 2023ರ ನಡುವಿನ ಅಂತಿಮ ಮತದಾರರ ಪಟ್ಟಿಯಲ್ಲಿನ ವ್ಯತ್ಯಾಸ

ವಿಧಾನಸಭಾಕ್ಷೇತ್ರ;2018ರ ಮತದಾರರು;2023ರ ಮತದಾರರು;ಹೆಚ್ಚಳ
ಗೌರಿಬಿದನೂರು;2,00,924;2,06,162;5,238
ಬಾಗೇಪಲ್ಲಿ;1,94,764;1,96,885;2,121
ಚಿಕ್ಕಬಳ್ಳಾಪುರ;1,95,808;2,04,223;8,415
ಶಿಡ್ಲಘಟ್ಟ;1,95,546;1,98,947;3,401
ಚಿಂತಾಮಣಿ;2,10,635;2,19,431;8,796
ಒಟ್ಟು;9,97,677;10,25,648;27,971

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT