ಸೋಮವಾರ, ಜನವರಿ 17, 2022
18 °C
ವಾಹನಗಳಿಗೆ ಇಂಧನ ತುಂಬಿಸಲು ನೂಕುನುಗ್ಗಲು

ಪೆಟ್ರೋಲ್, ಡೀಸೆಲ್‌ಗಾಗಿ ಆಂಧ್ರದ ಜನ ಬಾಗೇಪಲ್ಲಿಗೆ ಲಗ್ಗೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ: ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 7ರ ಇಂಧನದ ಬಂಕ್‌ಗಳಿಂದ ಆಂಧ್ರಪ್ರದೇಶದ ಜನರು ವಾಹನಗಳಿಗೆ ಇಂಧನ ತುಂಬಿಕೊಂಡು ಹೋಗುತ್ತಿದ್ದಾರೆ.

ಬಾಗೇಪಲ್ಲಿ ತಾಲ್ಲೂಕಿನ ಗಡಿ ಪ್ರದೇಶಕ್ಕೆ ಆಂಧ್ರಪ್ರದೇಶದ ಗಡಿ ಕೇವಲ 3 ಕಿ.ಮೀ ದೂರ ಇದೆ. ರಾಷ್ಟ್ರೀಯ ಹೆದ್ದಾರಿ-7 ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಸಂಪರ್ಕ ಹೊಂದಿದೆ. ಆಂಧ್ರಪ್ರದೇಶದ ಗಡಿಯಲ್ಲಿ ಪೆಟ್ರೋಲ್ ₹110.17 ಹಾಗೂ ಡೀಸೆಲ್ ₹96.28 ಇದೆ. ಬಾಗೇಪಲ್ಲಿಯಲ್ಲಿ ಪೆಟ್ರೋಲ್-₹100.62 ಹಾಗೂ ಡೀಸೆಲ್ ₹85.06 ಇದೆ.

ಆಂಧ್ರಪ್ರದೇಶದ ಚೆಕ್‌ಪೋಸ್ಟ್, ಕೊಡೂರು, ಚಿಲಮತ್ತೂರು, ಲೇಪಾಕ್ಷಿ, ಗೋರಂಟ್ಲ ಸೇರಿದಂತೆ ವಿವಿಧ ಕಡೆಯ ಗ್ರಾಮೀಣ ಪ್ರದೇಶಗಳ ಜನರು ದ್ವಿಚಕ್ರ, ಆಟೊ, ಕಾರು, ಟೆಂಪೋ, ಲಾರಿಗಳಲ್ಲಿ ಹಾಗೂ ಕ್ಯಾನುಗಳಲ್ಲಿ ಇಂಧನ ತುಂಬಿಸಿಕೊಂಡು ಹೋಗುತ್ತಿದ್ದಾರೆ.

ಆಂಧ್ರಪ್ರದೇಶದ ಗಡಿಗೆ ಹಾಗೂ ಬಾಗೇಪಲ್ಲಿಯಲ್ಲಿ ಇಂಧನ ದರದಲ್ಲಿ ₹10 ರಷ್ಟು ವ್ಯತ್ಯಾಸ ಇದೆ. ಇದರಿಂದ ಆಂಧ್ರಪ್ರದೇಶದ ಜನರು ಆಗಮಿಸಿ ಪೆಟ್ರೋಲ್, ಡೀಸೆಲ್ ತುಂಬಿಕೊಂಡು ಹೋಗುತ್ತಿದ್ದಾರೆ ಎಂದು ಪೆಟ್ರೋಲ್ ಬಂಕ್ ಮಾಲೀಕ ರಮೇಶ್ ರೆಡ್ಡಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು