ಆಂಧ್ರದ ಜತೆ ಸರ್ಕಾರ ಚರ್ಚಿಸಲಿ
ಬಯಲುಸೀಮೆ ಬಾಗೇಪಲ್ಲಿಗೆ ಕೃಷ್ಣಾ ನದಿ ನೀರಿನ ಪಾಲನ್ನು ಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಆಂಧ್ರಪ್ರದೇಶ ಸರ್ಕಾರದ ಜೊತೆ ಚರ್ಚೆ ಮಾಡಬೇಕು. ಆಂಧ್ರಪ್ರದೇಶದ ದೇಮೆಕೇತೆಪಲ್ಲಿ ಗ್ರಾಮದ ಕಾಲುವೆಯಿಂದ ಬಯಲುಸೀಮೆ ತಾಲ್ಲೂಕುಗಳಿಗೆ ಕೃಷ್ಣಾ ನದಿಯ ನೀರು ಹರಿಸಬೇಕು ಎಂದು ಪ್ರಗತಿಪರ ರೈತ ಸೋಮಶೇಖರರೆಡ್ಡಿ ಸರ್ಕಾರಕ್ಕೆ ಒತ್ತಾಯಿಸಿದರು. 250 ಕಿ.ಮೀ. ದೂರದಲ್ಲಿರುವ ಕೃಷ್ಣಾ ನದಿಯಿಂದ ಕುಪ್ಪುಂಗೆ ನೀರು ಹರಿಸುವುದು ಆಂಧ್ರಪ್ರದೇಶ ಸರ್ಕಾರಕ್ಕೆ ಸಾಧ್ಯವಿರುವಾಗ ರಾಜ್ಯ ಸರ್ಕಾರಕ್ಕೆ ಈ ಯೋಜನೆ ಅನುಷ್ಠಾನ ಮಾಡಲು ಸಾಧ್ಯವಿಲ್ಲ ಏಕೆ ಎಂದು ಶಾಶ್ವತ ನೀರಾವರಿ ಹೋರಾಟಗಾರ ಡಾ. ಅನಿಲ್ ಕುಮಾರ್ ಪ್ರಶ್ನಿಸಿದರು. ಅತ್ಯಂತ ಕಡಿಮೆ ವೆಚ್ಚ ಮತ್ತು ಅವಧಿಯಲ್ಲಿ ತಾಲ್ಲೂಕಿಗೆ ಕೃಷ್ಣೆಯನ್ನು ಹರಿಸಲು ಸಾಧ್ಯವಿದೆ ಎಂದು ಅವರು ಪ್ರತಿಪಾದಿಸಿದರು.