ಬಾಗೇಪಲ್ಲಿ: ಚಿಕ್ಕಬಳ್ಳಾಪುರದಿಂದ ಬಾಗೇಪಲ್ಲಿ ಮೂಲಕ ಪ್ರಶಾಂತಿ ನಿಲಯಕ್ಕೆ ರೈಲು ಮಾರ್ಗದ ಕಾಮಗಾರಿಯನ್ನು ಶೀಘ್ರವೇ ಘೋಷಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಪದಾಧಿಕಾರಿಗಳು ಬುಧವಾರ ರಾತ್ರಿ ಸಾರಿಗೆ ಬಸ್ ನಿಲ್ದಾಣದಲ್ಲಿ ಪಂಜಿನ ಮೆರವಣಿಗೆ ನಡೆಸಿದರು.

ಪಟ್ಟಣದ ಡಾ.ಎಚ್.ಎನ್.ವೃತ್ತದಿಂದ ಹೊರಟ ಪ್ರತಿಭಟನಾಕಾರರು ಡಿವಿಜಿ ಮುಖ್ಯ ರಸ್ತೆಯಲ್ಲಿ ಬೈಕ್ ರ್ಯಾಲಿ ಮಾಡಿದರು.

ಕರವೇ ತಾಲ್ಲೂಕು ಅಧ್ಯಕ್ಷ ಕೆ.ಎನ್.ಹರೀಶ್ ಮಾತನಾಡಿ, 2009 ರಲ್ಲಿ ಪುಟ್ಟಪರ್ತಿಯಿಂದ ಚಿಕ್ಕಬಳ್ಳಾಪುರ ರೈಲು ಯೋಜನೆ ಘೋಷಣೆ ಆಗಿದೆ. ಸರ್ವೆ ಕಾರ್ಯ ಮುಗಿದಿದೆ. ನಂತರ ರೈಲು ಕಾಮಗಾರಿ ಇದುವರಿಗೂ ಮಾಡಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಭಾಗದ ಜನರಿಗೆ ರೈಲು ಸೇವೆ ಮಾಡಿಲ್ಲ. ಕೇಂದ್ರ ಬಜೆಟ್ ನಲ್ಲಿ ಈ ಯೋಜನೆ ಬಗ್ಗೆ ಮಾತನಾಡಿಲ್ಲ. ಸಂಸದ ಡಾ.ಸುಧಾಕರ್ ಈ ರೈಲು ಯೋಜನೆ ಬಗ್ಗೆ ಮಾತಾಡಿಲ್ಲ ಎಂದು ಆರೋಪಿಸಿದರು.

ನಮ್ಮನ್ನ ಆಳ್ವಿಕೆ ಮಾಡುವ ಸರ್ಕಾರಗಳು ಪದೇಪದೇ ಜನರನ್ನ ವಂಚನೆ ಮಾಡುತ್ತಿವೆ. ಈ ಭಾಗದ ಕನ್ನಡಿಗರಿಗೆ ಮಾಡುತ್ತಿರುವ ಅನ್ಯಾಯ ಆಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಚಿಕ್ಕಬಳ್ಳಾಪುರಕ್ಕೆ ಘೋಷಣೆ ಆಗಿರುವಂತ ರೈಲ್ವೆ ಯೋಜನೆಯನ್ನ ಈ ಕೂಡಲೇ ಅನುಷ್ಠಾನಕ್ಕೆ ತರಬೇಕು. ಈ ಭಾಗದ ಆಂಧ್ರಪ್ರದೇಶ ಮತ್ತು ಸ್ಥಳೀಯ ಕೂಲಿ ಕಾರ್ಮಿಕರಿಗೆ, ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ರೈಲು ಯೋಜನೆಯನ್ನು ಜಾರಿ ಮಾಡಿ, ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಮಹಿಳಾ ಅಧ್ಯಕ್ಷೆ ಸುಜಾತಮ್ಮ ತಾಲೂಕು ಉಪಾಧ್ಯಕ್ಷ ಅಲೀಮ್ , ಚಿನ್ನು , ಶಂಕರ್ , ರಘು ಕೆ , ಮಂಜುನಾಥ್ , ರಾಧಿಕ , ಗಣೇಶ್, ಜಿಲ್ಲಾ ಸಂಚಾಲಕ ನರಸಿಂಹ ಮೂರ್ತಿ , ವಿದ್ಯಾರ್ಥಿ ಘಟಕದ ಗಂಗರಾಜು , ರಾಮಾಂಜಿ , ಕೃಷ್ಣಪ್ಪ , ನಾರಾಯಣ ಸ್ವಾಮಿ , ಶಾಂತ ಕುಮಾರ್ , ಜಾನಿ , ಬಾಬಾ ಮತ್ತಿತರರು ಇದ್ದರು.