ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ: ಶಾಲಾ ಆವರಣದಲ್ಲಿ ಪಕ್ಷಿಗಳಿಗೆ ಕಾಳು, ನೀರು

ಬಾಗೇಪಲ್ಲಿ ಸರ್ಕಾರಿ ಶಾಲೆ ಮಕ್ಕಳ ಕಾರ್ಯಕ್ಕೆ ಪ್ರಶಂಸೆ
Published 21 ಮಾರ್ಚ್ 2024, 12:54 IST
Last Updated 21 ಮಾರ್ಚ್ 2024, 12:54 IST
ಅಕ್ಷರ ಗಾತ್ರ

ಬಾಗೇಪಲ್ಲಿಯ ಬಾಲಕರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಬೇಸಿಗೆಯಲ್ಲಿ ಪಕ್ಷಿಗಳ ದಾಹ, ಹಸಿವು ತಣಿಸಲು ಶಾಲೆಯ ಆವರಣದಲ್ಲಿ ಗಿಡ, ಮರಗಳಿಗೆ ಪ್ಲಾಸ್ಟಿಕ್‌ ಬಾಟಲಿಗಳನ್ನು ಕಟ್ಟಿ ನೀರು, ಧಾನ್ಯ ಇಡುತ್ತಿದ್ದಾರೆ.

ಮಾರ್ಚ್ ಮಧ್ಯಕ್ಕೆ ತಾಪಮಾನ 38 ಡಿಗ್ರಿ ಸೆಲ್ಸಿಯಷ್ ತಲುಪಿದೆ. ಬಿಸಿಲಿನ ತಾಪದಿಂದ ಬಳಲಿ ನೀರು ಅರಿಸಿಕೊಂಡು ಶಾಲಾ ಆವರಣಕ್ಕೆ ಬರುವ ಪಕ್ಷಿಗಳು ನೀರಿಲ್ಲದೆ ಪರಿತಪಿಸುತ್ತಿವೆ.   

ಇದನ್ನು ಕಂಡ ಪ್ರೌಢಶಾಲೆಯ ಸಂಗೀತ ಶಿಕ್ಷಕಿ ಕೀರ್ತಿ ಬಸಪ್ಪ ಲಗಳಿ ಹಾಗೂ ವಿದ್ಯಾರ್ಥಿಗಳೊಂದಿಗೆ ಪಕ್ಷಿಗಳ ಬಾಯಾರಿಕೆ, ಹಸಿವು ನೀಗಿಸಲು ಏನಾದರೂ ಮಾಡಲು ಯೋಚಿಸಿದ್ದಾರೆ. ಊರಲ್ಲಿ ಮನೆ, ಮನೆ ತಿರುಗಿ ಪ್ಲಾಸ್ಟಿಕ್ ಬಾಟಲಿ ಸಂಗ್ರಹಿಸಿದ್ದಾರೆ. ವಿಶ್ವ ಗುಬ್ಬಚ್ಚಿಗಳ ದಿನದಂದು ಶಾಲಾ ವರಣದ ಗಿಡ, ಮರಗಳಿಗೆ 50ಕ್ಕೂ ಹೆಚ್ಚು ಬಾಟಲಿ ಕತ್ತರಿಸಿ ಕಟ್ಟಿಸಿದ್ದಾರೆ.

ಅದರಲ್ಲಿ ನೀರು ಮತ್ತು ಧಾನ್ಯ ಹಾಕಿಡುತ್ತಾರೆ. ಬಾಯಾರಿದ ಗುಬ್ಬಚ್ಚಿಗಳು, ಕಾಗೆ, ಪಾರಿವಾಳ ಸೇರಿದಂತೆ ವಿವಿಧ ಪಕ್ಷಿಗಳು ಇಲ್ಲಿಗೆ ನೀರು ಹುಡುಕಿಕೊಂಡು ಬರುತ್ತಿವೆ. ಮಕ್ಕಳ ಈ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. 

ಈಗ ಶಾಲೆಯ ಆವರಣದಲ್ಲಿ ಪಕ್ಷಿಗಳ ಕಲರವ ಹೆಚ್ಚಾಗಿದೆ ಎನ್ನುತ್ತಾರೆ ಶಿಕ್ಷಕಿ ಕೀರ್ತಿ ಲಗಳಿ. ಬಿಸಿಲಿನ ತಾಪ ಹೆಚ್ಚಾಗಿದೆ. ಪಕ್ಷಿಗಳಿಗೆ ಆಹಾರ, ನೀರು ಸಿಗದೆ ನರಳುತ್ತಿವೆ. ಮನೆ, ಶಾಲೆ, ಸರ್ಕಾರಿ ಕಚೇರಿ, ಖಾಲಿ ನಿವೇಶನಗಳಲ್ಲಿ ಪ್ರಾಣಿಗಳಿಗೆ ನೀರು ಇಡುವ ಮೂಲಕ  ಗುಬ್ಬಚ್ಚಿಗಳ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವಂತಾಗಲಿ ಎನ್ನುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT