ಕಣ್ಣೂರು/ಬೆಂಗಳೂರು:  ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಕೇರಳದ ಮೊದಲ ಕ್ರೀಡಾಪಟು, ಹಾಕಿ ಆಟಗಾರ ಮ್ಯಾನುಯೆಲ್ ಫ್ರೆಡೆರಿಕ್ (78) ಅವರು ಇಂದು (ಶುಕ್ರವಾರ) ಬೆಳಿಗ್ಗೆ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಬೆಂಗಳೂರಿನ ಆಸ್ಪತ್ರೆಯಲ್ಲಿ ಅವರು ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿದ್ದರು. ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಕೇರಳದ ಕಣ್ಣೂರು ಜಿಲ್ಲೆಯವರಾದ ಫ್ರೆಡೆರಿಕ್, 1972ರ ಮ್ಯೂನಿಚ್ ಒಲಿಂಪಿಕ್ಸ್ ಹಾಕಿ ಕ್ರೀಡೆಯಲ್ಲಿ ಹಾಲೆಂಡ್ ಅನ್ನು ಸೋಲಿಸುವ ಮೂಲಕ ಕಂಚಿನ ಪದಕ ಗೆದ್ದ ಭಾರತೀಯ ತಂಡದ ಗೋಲ್ಕೀಪರ್ ಆಗಿದ್ದರು.

ಏಳು ವರ್ಷಗಳ ಕಾಲ ಭಾರತ ತಂಡದ ಪರ ಆಡಿದ್ದರು. ಕ್ರೀಡೆಗೆ ಅವರು ನೀಡಿದ ಕೊಡುಗೆಗಳಿಗಾಗಿ 2019ರಲ್ಲಿ ಧ್ಯಾನ್ ಚಂದ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

ಟೈಬ್ರೇಕರ್ಗಳಲ್ಲಿ 16 ರಾಷ್ಟ್ರೀಯ ಚಾಂಪಿಯನ್ಶಿಪ್ಗಳನ್ನು ಗೆಲ್ಲಲು ಸಹಾಯ ಮಾಡಿದ ಗೋಲ್ಕೀಪರ್ ಎಂಬ ಹೆಗ್ಗಳಿಕೆಯೂ ಅವರಿಗಿದೆ.

ಫ್ರೆಡೆರಿಕ್ ಫುಟ್ಬಾಲ್ನಲ್ಲಿ ಸ್ಟ್ರೈಕರ್ ಆಗಿ ಮತ್ತು ಹಾಕಿಯಲ್ಲಿ ಗೋಲ್ಕೀಪರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಕಣ್ಣೂರಿನ ಸೇಂಟ್ ಮೈಕೆಲ್ಸ್ ಶಾಲಾ ತಂಡದ ಮೂಲಕ ಅವರು ಹಾಕಿಯಲ್ಲಿ ಸಕ್ರಿಯರಾಗಿದ್ದರು.

ಅಕ್ಟೋಬರ್ 20, 1947 ರಂದು ಜನಿಸಿದ ಫ್ರೆಡೆರಿಕ್ ತಮ್ಮ 17ನೇ ವಯಸ್ಸಿನಲ್ಲಿ ಬಾಂಬೆ ಗೋಲ್ಡ್ ಕಪ್ನಲ್ಲಿ ಆಡಿದ್ದರು. ಬಳಿಕ  1971ರಲ್ಲಿ ಭಾರತೀಯ ತಂಡದ ಭಾಗವಾಗಿ ಅವರು ತಮ್ಮ ಮೊದಲ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.