ಬಾಗೇಪಲ್ಲಿ: ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮೀಸಲಾತಿ ಪ್ರಕಟವಾಗಿದೆ. ಚುನಾವಣೆ ದಿನಾಂಕ ಪ್ರಕಟಕ್ಕೆ ಕೆಲವೇ ದಿನಗಳು ಬಾಕಿ ಇರುವ ಬೆನ್ನಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರಲ್ಲಿ ಯಾರು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷದ ಪಟ್ಟ ಏರಲು ಕಸರತ್ತು ಶುರು ಆಗಿದೆ.

ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಈ ಹಿಂದೆಯೂ ಸಹ ಅಧ್ಯಕ್ಷ ಸ್ಥಾನದ ಮೀಸಲಾತಿ ಹಿಂದುಳಿದ ವರ್ಗ ಎ ಮೀಸಲಾತಿ ಪ್ರಕಟ ಆಗಿದೆ. ಇದೀಗ ಪುನಃ ಅಧ್ಯಕ್ಷ ಸ್ಥಾನ ಮೀಸಲಾತಿ ಹಿಂದುಳಿದ ವರ್ಗ ಎ ಮೀಸಲಾತಿ ಪ್ರಕಟvAಗಿದೆ. ಇದರಿಂದ ಹಿಂದೆ ಅಧಿಕಾರದ ವಂಚನೆ ಆದ ಪುರಸಭಾ ಸದಸ್ಯರು ತೆರೆಮೆರೆಯಲ್ಲಿ ಲಾಬಿ ಮಾಡಲು ಮುಂದಾಗಿದ್ದಾರೆ.

ಪುರಸಭೆಯ 23 ವಾರ್ಡ್‍ಗಳ ಸದಸ್ಯರ ಪೈಕಿ ಕಾಂಗ್ರೆಸ್ 13, ಸಿಪಿಎಂ 2, ಜೆಡಿಎಸ್ 2 ಹಾಗೂ ಪಕ್ಷೇತರರು 4 ಸದಸ್ಯರು ಇದ್ದಾರೆ. ಹಿಂದಿನ ಆಡಳಿತದ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯರು 13 ಸದಸ್ಯರಿಗೆ ಪಕ್ಷೇತರರು ಬೆಂಬಲಿಸಿದ್ದರು. ಇದರಿಂದ ಸಂಪೂರ್ಣವಾಗಿ ತಲಾ ಏರಡೂವರೆ ವರ್ಷದ ಅಧಿಕಾರದಲ್ಲಿ ಕಾಂಗ್ರೆಸ್‌ನ ಸದಸ್ಯರಾದ ಗುಲ್ನಾಜ್ ಬೇಗಂ ಹಾಗೂ ರೇಷ್ಮಾಬಾನು ಪುರಸಭೆ ಅಧ್ಯಕ್ಷರಾಗಿದ್ದರು. ಉಪಾಧ್ಯಕ್ಷರಾಗಿ ಕಾಂಗ್ರೆಸ್‌ನ ಸದಸ್ಯ ಎ.ಶ್ರೀನಿವಾಸ್ ಪೂರ್ಣ ಅವಧಿಯಲ್ಲಿದ್ದರು. ಉಳಿದಂತೆ 7ನೇ ವಾರ್ಡ್‍ನ ಕಾಂಗ್ರೆಸ್ ಸದಸ್ಯ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ 2 ಬಾರಿ ಆಯ್ಕೆಯಾಗಿದ್ದಾರೆ.

ಇದೀಗ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆ ಆಗಲು ಕಾಂಗ್ರೆಸ್‌ನ 13 ಮಂದಿ ಸದಸ್ಯರ ಸಂಖ್ಯಾಬಲ ಇದೆ. ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರಿಗೆ ಕೆಲ ಪಕ್ಷೇತರರು ಸಹ ಬೆಂಬಲಿಸುವ ಸಾಧ್ಯತೆ ಇದೆ. ಇದರಿಂದ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ ಮೀಸಲಾತಿ ಆಗಿರುವುದರಿಂದ, ಶ್ರೀನಾಥ್, ಎ.ಶ್ರೀನಿವಾಸ್, ಜಬೀವುಲ್ಲಾಖಾನ್, ಹಸೀನಾಮನ್ಸೂರ್, ಶಬಾನಾಪರ್ವಿನ್, ವಿ.ವನೀತಾದೇವಿ, ಗುಲ್ನಾಜ್ ಬೇಗಂ, ರೇಷ್ಮಾಬಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಉಳಿದಂತೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮೀಸಲಾತಿ ಇರುವುದರಿಂದ ಮಹಿಳಾ ಸದಸ್ಯರು ಸಹ ಆಕಾಂಕ್ಷಿಗಳಾಗಿದ್ದಾರೆ.

ಪುರಸಭಾ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ದಿನಾಂಕಕ್ಕೆ ಸದಸ್ಯರು ಜಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಏನಾದರೂ ಆಗಲಿ ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್‌ನ ಸದಸ್ಯರು ಮುಸ್ಲಿಂ ಹಾಗೂ ಈಡಿಗ ಹಾಗೂ ಕುರುಬ ಮುಖಂಡರಿಂದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿಗೆ ಒತ್ತಡ ಹಾಕಿಸುತ್ತಿದ್ದಾರೆ. ನಾಯಕರನ್ನು ಕರೆದುಕೊಂಡು ಬೆಂಗಳೂರಿನ ಶಾಸಕರ ಮನೆಗೆ ಭೇಟಿ ಮಾಡಿಸಿದ್ದಾರೆ. ಕೆಲ ಸದಸ್ಯರು ತೆರೆಮೆರೆಯಲ್ಲಿ ಶಾಸಕರ ಸಂಬಂಧಿಕರ ಸಂಪರ್ಕದಲ್ಲಿದ್ದು, ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಮಾಡಿಸಿಕೊಳ್ಳಲು ಕಸರತ್ತು ಆರಂಭಿಸಿದ್ದಾರೆ.

ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ಈ ಬಾರಿಯು ಸದಸ್ಯರ ನಡುವೆ ಹೆಚ್ಚಿನ ಪೈಪೋಟಿ ನಡೆಯುತ್ತಿದೆ. ಶಾಸಕ ಎಸ್.ಎನ್.ಸುಬ್ಬಾರೆಡ್ಡಿಗೆ ಆಪ್ತ ಕಾಂಗ್ರೆಸ್‌ನ ಸದಸ್ಯ ಎ.ಶ್ರೀನಿವಾಸ್ ಮೇಲೆ ಒಲವು ಇದೆ.

ಕಾಂಗ್ರೆಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ 3ನೇ ಬಾರಿ ಶಾಸಕರಾಗಿ ಆಯ್ಕೆ ಆಗಿರುವುದರಿಂದ, ಶಾಸಕರವೇ ಅಂತಿಮ ತೀರ್ಮಾನ ಮಾಡಲಿದ್ದಾರೆ. ಯಾವ ಸದಸ್ಯರಿಗೆ ಶಾಸಕರು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ಹೆಸರು ಸೂಚಿಸುತ್ತಾರೆ ಎಂಬುದು ನಿಗೂಢವಾಗಿ ಉಳಿದಿದೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಪಟ್ಟ ಕ್ಕೆ ಸದಸ್ಯರ ಲಾಬಿ ಜೋರಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.