ಬುಧವಾರ, ಅಕ್ಟೋಬರ್ 16, 2019
28 °C

ಬೆಸ್ಕಾಂ ಎಂಜಿನಿಯರ್ ಎಸಿಬಿ ಬಲೆಗೆ

Published:
Updated:

ಚಿಕ್ಕಬಳ್ಳಾಪುರ: ಸುಟ್ಟ ಟ್ರಾನ್ಸಫಾರ್ಮರ್ ಬದಲಾಯಿಸಲು ರೈತರೊಬ್ಬರಿಂದ ಲಂಚ ಪಡೆಯುತ್ತಿದ್ದ ಬೆಸ್ಕಾಂ ಗ್ರಾಮೀಣ ವಿಭಾಗದ ಕಿರಿಯ ಎಂಜಿನಿಯರ್ ಮಂಜುನಾಥ್ ಅವರನ್ನು ಎಸಿಬಿ ಅಧಿಕಾರಿಗಳು ಗುರುವಾರ ಮಧ್ಯಾಹ್ನ ಬಂಧಿಸಿದ್ದಾರೆ.

ತಾಲ್ಲೂಕಿನ ದೊಡ್ಡ ಕಿರುಗಂಬಿಯ ರೈತ ಮಲ್ಲೇಶ್ ಕುಮಾರ್ ಅವರಿಗೆ ಸುಟ್ಟ ಟ್ರಾನ್ಸಫಾರ್ಮರ್ ಬದಲಿಸಲು ಮಂಜುನಾಥ್ ಅವರು ₹3,000ಕ್ಕೆ ಬೇಡಿಕೆ ಇಟ್ಟಿದ್ದರು. ಆ ಪೈಕಿ ₹1,000 ಮುಂಗಡ ಕೊಟ್ಟಿದ್ದ ಮಲ್ಲೇಶ್‌ ಕುಮಾರ್‌ ಅವರು ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು.

ಎಸಿಬಿ ಅಧಿಕಾರಿಗಳ ಸೂಚನೆ ಮೆರೆಗೆ ಗುರುವಾರ ಮಧ್ಯಾಹ್ನ 3.45ರ ಸುಮಾರಿಗೆ ನಗರದಲ್ಲಿರುವ ಬೆಸ್ಕಾಂ ಕಚೇರಿಗೆ ತೆರಳಿದ್ದ ಮಲ್ಲೇಶ್ ಕುಮಾರ್ ಅವರಿಂದ ಮಂಜುನಾಥ್‌ ಅವರು ₹2,000 ಪಡೆಯುತ್ತಿದ್ದ ವೇಳೆ ಎಸಿಬಿ ಡಿವೈಎಸ್ಪಿ ವೆಂಕಟೇಶ್ ನಾಯ್ಡು ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.

Post Comments (+)