ಶನಿವಾರ, ಮಾರ್ಚ್ 6, 2021
28 °C

ಚೌಡಯ್ಯ ಜಯಂತ್ಯುತ್ಸವ ಸರಳ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬೆಸ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ಅಂಬಿಗರ ಚೌಡಯ್ಯ ಜಯಂತಿಯನ್ನು ಜಿಲ್ಲಾಡಳಿತ ಭವನದಲ್ಲಿ ಗುರುವಾರ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಣುಕಾ, ‘ಅಂಬಿಗರ ಚೌಡಯ್ಯ ಅವರು ತನ್ನ ಅನುಭವ ಮಂಟಪದಲ್ಲಿ ತನ್ನದೆ ಆದ ಚಾಪು ಮೂಡಿಸಿದಂತಹ ಮಹನೀಯರು. ಹೆಣ್ಣು ಮಕ್ಕಳ ಬಗ್ಗೆ ಅಪಾರವಾಗಿ ಗೌರವಿಸುವ ನಿಷ್ಠಾವಂತರಾಗಿದ್ದರು. ಚೌಡಯ್ಯ ಅವರ ವಚನಗಳು ಒಂದು ಸಂಘ-ಸಮುದಾಯಕ್ಕೆ ಸೀಮಿತವಾದುದಲ್ಲ. ಅವರ ವಚನಗಳಲ್ಲಿ ಸಮಾನತೆ, ಸಾಮರಸ್ಯದ ಸಾರ ಅಡಗಿದ್ದು, ಹಾಗಾಗಿ ಪ್ರತಿಯೊಬ್ಬರೂ ಅವರ ಆದರ್ಶಗಳನ್ನು ಪಾಲಿಸುವಂತಾಗಬೇಕು’ ಎಂದರು.

ಉಪನ್ಯಾಸಕ ಪ್ರಕಾಶ್‌ ಮಾತನಾಡಿ, ‘ಆತ್ಮವಿಶ್ವಾಸವಿರುವ 50 ಜನರು, ಆತ್ಮವಿಶ್ವಾಸವಿಲ್ಲದ ಸಾವಿರ ಜನರಿಗೆ ಸಮಾನ ಎಂದು ವಿವೇಕಾನಂದರು ಹೇಳಿದ್ದಾರೆ. ಅದರಂತೆ ಎಲ್ಲರೂ ಸಮಾನತೆಯಿಂದ ಬಾಳಿ ಬದುಕಬೇಕು. ಅವರ ವಚನಗಳನ್ನು ಮೊದಲು ತಮ್ಮ ತಮ್ಮ ಕುಟುಂಬದ ಸದಸ್ಯರಿಗೆ ತಿಳಿಸುವುದರಿಂದ ಸಮಾಜಕ್ಕೆ ಒಳಿತಾಗುತ್ತದೆ. ವಿಶ್ವದಲ್ಲಿಯೇ ನಮ್ಮ ಭಾರತ ದೇಶವು ಹಲವಾರು ಮಹಾನ್ ವ್ಯಕ್ತಿಗಳು, ಚಿಂತಕರು, ಕ್ರಾಂತಿಕಾರರು ಹಾಗೂ ಸಾಧು ಸಂತರನ್ನು ಹೊಂದಿದ ಹೆಗ್ಗಳಿಕೆ ಪಡೆದಿದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಉತ್ತಮ ಶಿಕ್ಷಣದ ಮೂಲಕ ವಿಶ್ವದಲ್ಲಿಯೇ ನಮ್ಮ ದೇಶವನ್ನು ಜ್ಞಾನದ ಗುರು ಎಂದು ಕರೆಯುವಂತೆ ಶ್ರಮ ವಹಿಸಬೇಕು’ ಎಂದು ಹೇಳಿದರು.

‘ಗಂಡ-ಹೆಣ್ಣಿನ ಮನಸ್ಸು ಒಂದಾದರೇ ದೇವರ ನಂದಾದೀವಿಗೆ ಮೂಡಿಸಿದ ಹಾಗೇ. ಅದೇ ಗಂಡ-ಹೆಣ್ಣಿನ ಮನಸ್ಸು ಬೇರೆಯಾದರೇ ಗಂಜಲದೊಳಗಿನ ಹಂದಿಯು ಹೊರಳಾಡಿ ಒಂದನ್ನೊಂದು ಮೂಸಿ ಬದುಕಿದ ಹಾಗೇ ಇರುತ್ತದೆ’ ಎಂದು ವಚನಗಳ ಮೂಲಕ ಸವಿಸ್ತಾರವಾಗಿ ತಿಳಿಸಿಕೊಟ್ಟರು.

ಗಾ.ನ.ಅಶ್ವಥ್ ಅವರು ಅಂಬಿಗರ ಚೌಡಯ್ಯ ಅವರ ವಚನಗಳನ್ನು ಹಾಗೂ ವಿಚಾರಗಳನ್ನು ಹಾಡಿನ ಮೂಲಕ ಪ್ರಸ್ತುತಪಡಿಸಿದರು.

ಜಿಲ್ಲಾ ಬೆಸ್ತರ ಸಂಘದ ಅಧ್ಯಕ್ಷರಾದ ಎಂ.ಜಯರಾಮ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಿ.ಎಚ್.ನಾಗರಾಜ್, ಚಿಕ್ಕಬಳ್ಳಾಪುರ ತಾಲ್ಲೂಕು ಅಧ್ಯಕ್ಷ ರವಿಕುಮಾರ್, ಶಿಡ್ಲಘಟ್ಟ ತಾಲ್ಲೂಕಿನ ಅಧ್ಯಕ್ಷ ಶಿವಣ್ಣ, ಸಮುದಾಯದ ಮುಖಂಡರು, ಸದಸ್ಯರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು