ಚೇಳೂರು: ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಎಸ್‌ಎಚ್‌ಡಿಪಿ) ಅಡಿಯಲ್ಲಿ ₹20 ಕೋಟಿ ಅನುದಾನದಲ್ಲಿ ಚೇಳೂರಿನ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಮತ್ತು ಭೂಮಿಪೂಜೆಯನ್ನು ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಭಾನುವಾರ ನೆರವೇರಿಸಿದರು.
‘ಬಾಗೇಪಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿನ ಜನರು ಗ್ರಾಮೀಣ ಪ್ರದೇಶದಲ್ಲಿನ ಹದಗೆಟ್ಟಿರುವ ರಸ್ತೆಗಳ ಬಗ್ಗೆ ತಿಳಿಸಿದ್ದರು. ಮುಂದಿನ ಆರು ತಿಂಗಳೊಳಗೆ ಚೇಳೂರು ತಾಲ್ಲೂಕಿನಲ್ಲಿ ರಸ್ತೆಗಳು ಟಾರ್ ರಸ್ತೆಗಳಾಗಿ ಕಾಣುತ್ತವೆ. ತಾಲ್ಲೂಕಿಗೆ ಮುಂದಿನ ವರ್ಷದಲ್ಲಿ ಪ್ರಜಾಸೌಧ ಮಂಜೂರಾತಿ ಮಾಡಿಸಿಕೊಡಿಸಲು ಮುಖ್ಯಮಂತ್ರಿ ಆಶ್ವಾಸನೆ ನೀಡಿದ್ದಾರೆ’ ಎಂದರು.
ಚೇಳೂರಿನಿಂದ-ಚಿಲಕಲನೇರ್ಪು ತನಕ ₹10 ಕೋಟಿ ವೆಚ್ಚದ ರಸ್ತೆ ಉದ್ಘಾಟನೆ ಮಾಡಲಾಯಿತು. ₹10 ಕೋಟಿ ವೆಚ್ಚದ ಚೇಳೂರಿನಿಂದ-ಷೇರ್‌ಖಾನ್‍ಕೋಟೆ ರಸ್ತೆಗೆ ಭೂಮಿಪೂಜೆ ನೆರವೇರಿಸಲಾಯಿತು.
‘ಚೇಳೂರು ತಾಲ್ಲೂಕಿನ 17 ಕಂದಾಯ ವೃತ್ತ ಗ್ರಾಮಗಳ ನೊಂದಣಿ ಸ್ಥಗಿತಗೊಂಡಿದ್ದು ಶೀಘ್ರವೇ ನೊಂದಣಿ ಪ್ರಕ್ರಿಯೆಗೆ ಅನುಕೂಲ ಮಾಡುತ್ತೇನೆ’ ಎಂದರು.