ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇಳೂರು | ಬೆಳೆಗೆ ಬೆಂಕಿ: ಮಹಿಳೆಗೆ ಪ್ರಾಣ ಬೆದರಿಕೆ

Published 29 ಮಾರ್ಚ್ 2024, 13:44 IST
Last Updated 29 ಮಾರ್ಚ್ 2024, 13:44 IST
ಅಕ್ಷರ ಗಾತ್ರ

ಚೇಳೂರು: ಹಳೇ ದ್ವೇಷದಿಂದ ಜೋಳದ ಬೆಳೆಗೆ ಬೆಂಕಿ ಹಾಕಿ ಮಾಲೀಕರ ಮೇಲೆ ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿರುವ ಘಟನೆ ಚೇಳೂರು ಸಮೀಪದ ಗೆರಿಗಿರೆಡ್ಡಿಪಾಳ್ಯ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ.

ಗ್ರಾಮದ ಪರಿಶಿಷ್ಟ ಜಾತಿಯ ವೆಂಕಟರವಣಮ್ಮ ಅವರಿಗೆ ಷೇರ್‌ಖಾನ್ ಕೋಟೆ ಗ್ರಾಮದಲ್ಲಿ ಸರ್ಕಾರಿ ಜಮೀನು ಮಂಜೂರಾಗಿದೆ. ಇದೇ ಜಮೀನಿನಲ್ಲಿ ಬೆಳೆ ಬೆಳೆದು ಜೀವನ ಸಾಗಿಸುತ್ತಿದ್ದು, ಹಳೆ ದ್ವೇಷದ ಹಿನ್ನೆಲೆಯಲ್ಲಿ ಗ್ರಾಮದ ಪಿ.ಎ.ಮುರಳಿಕೃಷ್ಣ, ಜಿ.ಲೋಕೇಶ, ಆಂಜನೇಯಪ್ಪ, ನಾರಾಯಣಮ್ಮ ಸೇರಿದಂತೆ ಇತರರು ದೌರ್ಜನ್ಯ ನಡಸಿದ್ದಾರೆ. ₹60 ಸಾವಿರ ಬೆಲೆ ಬಾಳುವ ಮುಸುಕಿನ ಜೋಳ, ತೆಂಗಿನ ಮರಕ್ಕೆ ಬೆಂಕಿ ಹಾಕಿ ನಾಶ ಮಾಡಿದ್ದಾರೆ ಎಂದು ವೆಂಕಟರವಣಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ವಿಷಯ ತಿಳಿದ ಗಂಡ ಕೆ.ವಿ.ವೆಂಕಟರವಣಪ್ಪ ಅಡ್ಡ ಹೋದಾಗ ಆತನ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ವೆಂಕಟರವಣಮ್ಮ ಚೇಳೂರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT