ಮಂಗಳವಾರ, ಆಗಸ್ಟ್ 20, 2019
24 °C

ಶ್ರದ್ಧಾಭಕ್ತಿಯಿಂದ ನಾಗರ ಪಂಚಮಿ ಆಚರಣೆ

Published:
Updated:
Prajavani

ಚಿಕ್ಕಬಳ್ಳಾಪುರ: ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿಯನ್ನು ಜಿಲ್ಲೆಯಾದ್ಯಂತ ಸೋಮವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಬೆಳಿಗ್ಗೆಯೇ ಜನರು ನಾಗರ ಕಲ್ಲುಗಳಿಗೆ ಪೂಜೆ ಸಲ್ಲಿಸಿ ಹಾಲು ಎರೆಯುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂತು.

ನಗರದ ಎಚ್‌.ಎಸ್‌.ಗಾರ್ಡನ್‌ನಲ್ಲಿರುವ ಸಾಯಿಬಾಬಾ, ಸುಬ್ರಹ್ಮಣ್ಯೇಶ್ವರ ಮತ್ತು ಶನೈಶ್ವರ ದೇವಸ್ಥಾನ, ಗಾಂಧಿಕೊಳಾಯಿ ರಸ್ತೆಯಲ್ಲಿರುವ ಈಶ್ವರ ದೇವಾಲಯ, ಜೀವಾಂಜನೇಯ ದೇವಸ್ಥಾನ, ಪೇಟೆ ಆಂಜನೇಯ ದೇವಾಲಯ, ಸುಬ್ಬರಾಯನಪೇಟೆಯಲ್ಲಿರುವ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನ, ನಗರದ ಹೊರವಲದ ರೈಲ್ವೆ ಗೇಟ್‌ ಬಳಿ ಇರುವ ನಾಗಲ ಮುದ್ದಮ್ಮ ದೇವಸ್ಥಾನ ಸೇರಿದಂತೆ ಪ್ರಮುಖ ದೇವಸ್ಥಾನ ಬಳಿ ಪಂಚಮಿ ಹಬ್ಬದ ಆಚರಣೆಗಳು ಗೋಚರಿಸಿದವು.

ಮಹಿಳೆಯರು ಶ್ರದ್ಧಾಭಕ್ತಿಯಿಂದ ನಾಗರ ಕಲ್ಲುಗಳಿಗೆ ಮತ್ತು ಹುತ್ತಗಳಿಗೆ ವಿಶೇಷ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿ, ಹಾಲು ಎರೆದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಿದ್ದರು.

Post Comments (+)