ಶ್ರಮಿಕರು ಕೂಲಿ ಕಾರ್ಮಿಕರನ್ನು ಕೇಂದ್ರ ಸರ್ಕಾರ ಶ್ರೀಮಂತರಿಗೆ ಅಡವಿಟ್ಟಿದೆ. ಈಗ ಎಚ್ಚೆತ್ತುಕೊಳ್ಳದಿದ್ದರೆ ಮಾರುತ್ತಾರೆ. ಹಳ್ಳಿಗಳು ಕೂಲಿ ಕಾರ್ಮಿಕರ ಉಳಿವಿಗೆ ಈ ಸಂಗ್ರಾಮ ಅನಿವಾರ್ಯ
ರಣದೀಪ್‌ಸಿಂಗ್ ಸುರ್ಜೇವಾಲ ರಾಜ್ಯ ಕಾಂಗ್ರೆಸ್ ಉಸ್ತುವಾರಿ
ನರೇಗಾದಿಂದ ಕೆಲಸ ಮಾಡಿಕೊಡುವರು ಎಂದು ಪಂಚಾಯಿತಿ ಸದಸ್ಯರಿಗೆ ಕಿಮ್ಮತ್ತು ಇತ್ತು. ಈಗ ಕೇಂದ್ರ ಸರ್ಕಾರ ಪಂಚಾಯಿತಿ ಸದಸ್ಯರಿಗೆ ಕಿಮ್ಮತ್ತು ದೊರೆಯದಂತೆ ಮಾಡಿದೆ
ಕೃಷ್ಣಬೈರೇಗೌಡ ಸಚಿವ
ಎಲ್ಲ ಗ್ರಾ.ಪಂ ಹೆಸರಿನ ಮುಂದೆ ‘ಮಹಾತ್ಮ ಗಾಂಧಿ’ ಹೆಸರು
ಮನರೇಗಾ ಹೆಸರು ಬದಲಾಯಿಸಿದ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಹೊಸ ತಂತ್ರ ರೂಪಿಸಿದೆ. ‘ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳ ಹೆಸರಿನ ಮುಂದೆ ‘ಮಹಾತ್ಮ ಗಾಂಧಿ’ ಅವರ ಹೆಸರು ಸೇರಿಸಲು ತೀರ್ಮಾನಿಸಿದ್ದೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.