ಚಿಕ್ಕಬಳ್ಳಾಪುರ: ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಸೋಮವಾರ ನವರಾತ್ರಿ ಉತ್ಸವಕ್ಕೆ ಚಾಲನೆ ದೊರೆಯಿತು.

ನವರಾತ್ರಿ ಉತ್ಸವದ ಮೊದಲ ದಿನ ಅತಿ ರುದ್ರ ಮಹಾ ಯಜ್ಞವು ಸಡಗರ ಸಂಭ್ರಮ ಹಾಗೂ ವೈಭವದಿಂದ ಆರಂಭವಾಯಿತು. ಸದ್ಗುರು ಮಧುಸೂದನ ಸಾಯಿ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಚಾಲನೆ ನೀಡಿದರು.

ಶೃಂಗೇರಿ ಹಾಗೂ ವಿವಿಧ ಭಾಗಗಗಳಿಂದ ಬಂದಿರುವ 121 ಪುರೋಹಿತರು ಮಂತ್ರ ಪಠಣಗಳೊಂದಿಗೆ ಶಾಸ್ತ್ರೋಕ್ತವಾಗಿ ಅತಿ ರುದ್ರ ಮಹಾ ಯಜ್ಞದ ವಿಧಿ ವಿಧಾನಗಳನ್ನು ಆರಂಭಿಸಿದರು. ಗಣಪತಿ ಪೂಜೆಯೊಂದಿಗೆ ಯಾಗವನ್ನು ಆರಂಭಿಸಲಾಯಿತು.

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಸದ್ಗುರು ಮಧುಸೂದನ ಸಾಯಿ, ಲೋಕಕಲ್ಯಾಣಕ್ಕಾಗಿ ಯಾಗಗಳನ್ನು ಮಾಡುತ್ತಿದ್ದೇವೆ. ಇದರಲ್ಲಿ ಬೇರೆ ಯಾವುದೇ ಉದ್ದೇಶವಿಲ್ಲ. ಜಗತ್ತಿನಲ್ಲಿ ಸಮೃದ್ಧಿ ಮತ್ತು ಶಾಂತಿ ನೆಲೆಸಬೇಕು ಎನ್ನುವುದೇ ನಮ್ಮ ಪ್ರಾರ್ಥನೆ. ಇದಕ್ಕಾಗಿ ಅತಿ ರುದ್ರ ಮಹಾ ಯಜ್ಞವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.

ಈ ಯಾಗವು ಜಗತ್ತಿಗೆ ಸಮೃದ್ಧಿ ತರಲಿದೆ. ಲೋಕ ಹಿತ, ಲೋಕ ಕಲ್ಯಾಣ ಹಾಗೂ ಪರಹಿತಕ್ಕಾಗಿ ಮಾಡುತ್ತಿದ್ದೇವೆ. ಇವುಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಪೂಜೆ ಮಾಡಿದಾಗ ಎಲ್ಲ ದೇವತೆಗಳ ಆಶೀರ್ವಾದ ಖಂಡಿತ ಸಿಗುತ್ತದೆ ಎಂದರು.

ಭಗವಾನ್ ಸತ್ಯ ಸಾಯಿ ಬಾಬಾ ಅವರ ಇಡೀ ಜೀವನದಲ್ಲಿ ಪ್ರೀತಿ ಮತ್ತು ಸೇವೆ ವ್ಯಾಪಿಸಿಕೊಂಡಿದ್ದರು. ಅವರನ್ನು ಶಿವಶಕ್ತಿ ಎಂದು ನಂಬಿ ಪೂಜಿಸಲಾಗುತ್ತಿದೆ. ಜಗತ್ತಿನಾದ್ಯಂತ ಎಲ್ಲ ಭಕ್ತರಿಗೆ ನಮ್ಮ ಪ್ರೀತಿ ಮತ್ತು ಸೇವೆ ಯಾವಾಗಲೂ ಇರುತ್ತದೆ. 2015 ರಲ್ಲಿ ಅತಿ ರುದ್ರ ಮಹಾ ಯಾಗ ನಡೆಸುವಂತೆ ಸತ್ಯ ಸಾಯಿ ಬಾಬಾ ಹೇಳಿದ್ದರು. ಅದರಂತೆ ಯಾಗವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಅತಿ ರುದ್ರ ಮಹಾ ಯಾಗ ಆರಂಭಿಸಿದ ನಂತರ ಈ ಭಾಗದಲ್ಲಿ ಮಳೆ ಉತ್ತಮವಾಯಿತು. ದೇವರ ಅನುಗ್ರಹದಿಂದ ಕಳೆದ 10 ವರ್ಷಗಳಿಂದ ಈ ಪ್ರದೇಶದಲ್ಲಿ ನೀರಿಗೆ ಕೊರತೆಯಾಗಿಲ್ಲ. ಯಜ್ಞಗಳು ಮಳೆ ಬರಲು ಸಹಕಾರಿ ಎಂದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಸರ್ ಎಂ. ವಿಶ್ವೇಶ್ವರಯ್ಯ ಅವರ ಹುಟ್ಟಿದ ಸ್ಥಳದಿಂದಾಗಿ ಗುರುತಿಸಿಕೊಂಡಿದ್ದ ಮುದ್ದೇನಹಳ್ಳಿಯು ಇದೀಗ ಸಾಮಾಜಿಕ ಮತ್ತು ಧಾರ್ಮಿಕ ಸೇವೆಗಳಿಂದ ಗುರುತಿಸಿಕೊಳ್ಳುತ್ತಿದೆ. ಸದ್ಗುರು ಮಧುಸೂದನ ಸಾಯಿ ಅವರು ಮುದ್ದೇನಹಳ್ಳಿಯನ್ನು ಸಂಪೂರ್ಣವಾಗಿ ಬದಲಾಯಿಸಿದ್ದಾರೆ. ಸದ್ಗುರು ಅವರು ಈ ಸ್ಥಳವನ್ನು ಸ್ವರ್ಗವನ್ನಾಗಿ ಬದಲಾಯಿಸಿದ್ದಾರೆ. ಅವರಿಗೆ ಧನ್ಯವಾದ ಹೇಳುತ್ತೇನೆ ಎಂದರು.

ದೇಶದಲ್ಲೇ ಅತ್ಯುತ್ತಮ ಆಸ್ಪತ್ರೆ ನಿರ್ಮಿಸಿ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಮತ್ತು ಪೌಷ್ಟಿಕ ಆಹಾರ ನೀಡುತ್ತಿದ್ದಾರೆ. ಒಂದು ಹೊಸ ಜಗತ್ತನ್ನು ನಿರ್ಮಾಣ ಮಾಡಬೇಕೆಂಬ ಸದ್ಗುರು ಅವರ ಸಂಕಲ್ಪಕ್ಕೆ ನಾವೆಲ್ಲರೂ ಕೈಜೋಡಿಸಬೇಕು. ಅವರ ಸಂಕಲ್ಪ ತುಂಬಾ ದೊಡ್ಡದಾಗಿದ್ದು, ನಾವೆಲ್ಲರೂ ಅವರೊಂದಿಗೆ ನಿಲ್ಲೋಣ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.