ಚಿಕ್ಕಬಳ್ಳಾಪುರ: ನಗರದ ಸೇಂಟ್ ಜೋಸೆಫ್ ಶಾಲೆಯಲ್ಲಿ ಮಂಗಳವಾರ ಶಿಕ್ಷಣ ಇಲಾಖೆಯಿಂದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ನಡೆಯಿತು.

ತಾಲ್ಲೂಕಿನ 19 ಕ್ಲಸ್ಟರ್ಗಳಿಂದ 500ಕ್ಕೂ ಹೆಚ್ಚು ಮಕ್ಕಳು ಭಾಗವಹಿದ್ದರು. ಕಿರಿಯ, ಹಿರಿಯ ಮತ್ತು ಪ್ರೌಢ ಶಾಲಾ ವಿಭಾಗದಲ್ಲಿ ಒಟ್ಟು 45 ಸ್ವರ್ಧೆಗಳು ನಡೆದವು.

ಕಂಠಪಾಠ, ಚಿತ್ರಕಲೆ, ಜನಪದ ನೃತ್ಯ, ಅಭಿನಯ ಗೀತೆ, ಭಕ್ತಿಗೀತೆ, ಛದ್ಮವೇಷ, ಭಾಷಣ, ಚರ್ಚಾ ಸ್ವರ್ಧೆ, ರಸಪ್ರಶ್ನೆ, ಧಾರ್ಮಿಕ ಪಠಣ, ಸಂಸ್ಕೃತ ಪಠಣ ಸೇರಿ ಹಲವು ಸ್ವರ್ಧೆಗಳಲ್ಲಿ ಮಕ್ಕಳು ಭಾಗವಹಿಸಿದ್ದರು. ಮಕ್ಕಳಿಂದ ಮಣ್ಣಿನ ಮಾದರಿಯಲ್ಲಿ ಬಸವಣ್ಣ, ಮೊಸಳೆ, ಶಿವಲಿಂಗ, ಛದ್ಮವೇಷಗಳಲ್ಲಿ ಶಿಲಾಬಾಲಿಕೆ, ಪ್ರಕೃತಿ ಮಾತೆ, ಮಹಾಕಾಳಿ ದೇವರು ಸೇರಿದಂತೆ ಹಲವು ವೇಷಗಳು ನೋಡುಗರನ್ನು ರಂಜಿಸಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ಮಕ್ಕಳ ಕಲಿಕೆಯನ್ನು ಉತ್ತಮ ಪಡಿಸಲು ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಹೆಚ್ಚು ಸಹಕಾರಿ. ಪ್ರಾಥಮಿಕ ಶಾಲಾ ಹಂತದಲ್ಲಿ ಮಕ್ಕಳಿಗೆ ಸೂಕ್ತವಾದ ತರಬೇತಿ ನೀಡಿದರೆ ಅವರ ಪ್ರತಿಭೆ ಉತ್ತಮವಾಗುತ್ತದೆ ಎಂದು ಹೇಳಿದರು.

ಈ ವೇದಿಕೆಯ 45 ಸ್ವರ್ಧೆಗಳಲ್ಲಿ ಭಾಗವಹಿಸಿ ತಾಲ್ಲೂಕು ಹಂತಲ್ಲಿ ಗೆಲ್ಲುವ ಮಕ್ಕಳು ಜಿಲ್ಲಾ ಹಂತದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಎ.ನಾರಾಯಣ ಸ್ವಾಮಿ ಮಾತನಾಡಿ, ಮಕ್ಕಳು ಮೊದಲು ಇಂತಹ ಕಾರ್ಯಕ್ರಮಗಳಿಗೆ ಭಾಗವಹಿಸಬೇಕು. ಪೋಷಕರ ಮತ್ತು ಶಿಕ್ಷಕರ ಸಲಹೆ, ಪ್ರೋತ್ಸಾಹ ಅವಶ್ಯ ಎಂದು ಸಲಹೆ ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ, ಸ್ವರ್ಧೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ. ಭಾಗವಹಿಸಿ ಪ್ರತಿಭೆ ಅನಾವರಣ ಮಾಡುವುದು ಮುಖ್ಯ ಎಂದು ಹೇಳಿದರು.

ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಸುನೀಲ್, ಅಕ್ಷರ ದಾಸೋಹ ಅಧಿಕಾರಿ ಲಕ್ಷ್ಮಿದೇವಮ್ಮ, ಜಿಲ್ಲಾ ಖಾಸಗಿ ಶಾಲೆಗಳ ಅಧ್ಯಕ್ಷ ಶ್ರೀನಿವಾಸ್, ಅನುದಾನಿತ ಶಾಲೆಗಳ ಜಿಲ್ಲಾ ಅಧ್ಯಕ್ಷ ನಾರಾಯಣ ಸ್ವಾಮಿ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜೇಂದ್ರ ಪ್ರಸಾದ್, ತಾಲ್ಲೂಕು ಸಮನ್ವಯ ಅಧಿಕಾರಿ ಅರುಣ್ ಕುಮಾರ್, ಚಿತ್ರಕಲಾ ರಾಜ್ಯ ಕಾರ್ಯದರ್ಶಿ ಸಂತೋಷ್, ಪದವೀಧರ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ನರೇಶ್ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.