ಡಿ.ಎಂ.ಕುರ್ಕೆ ಪ್ರಶಾಂತ್

ಚಿಕ್ಕಬಳ್ಳಾಪುರ: ಜಿಲ್ಲೆಯ ಬಹುತೇಕ ಐತಿಹಾಸಿಕ ದೇಗುಲಗಳು, ವೀರಗಲ್ಲುಗಳು, ಶಾಸನಗಳು ಇಂದಿಗೂ ಅನಾಥವಾಗಿವೆ. ಇವುಗಳರನ್ನು ಸಂರಕ್ಷಿಸಬೇಕು. ಅಧ್ಯಯನಕ್ಕೆ ಆಕರವಾಗಿಸಬೇಕು ಎಂದು ಪ್ರಜ್ಞಾವಂತರು ಈ ಹಿಂದಿನಿಂದಲೂ ಆಗ್ರಹಿಸುತ್ತಿದ್ದರು.

ಆ ಆಗ್ರಹಕ್ಕೆ ಈಗ ಬಲ ದೊರೆಯುತ್ತಿದೆ. ವೀರಗಲ್ಲುಗಳು, ಶಾಸನಗಳು, ಐತಿಹಾಸಿಕ ಸ್ಮಾರಕಗಳ ರಕ್ಷಣೆಗೆ ಜಿಲ್ಲಾ ಪಂಚಾಯಿತಿ ಮೊದ ಹೆಜ್ಜೆ ಇಟ್ಟಿದೆ. ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ವೈ.ನವೀನ್ ಭಟ್ ಅವರ ಆಸಕ್ತಿಯ ಫಲವಾಗಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ವೀರಗಲ್ಲುಗಳು, ಶಾಸನಗಳ ರಕ್ಷಣೆಗೆ ಅಡಿ ಇಡಲಾಗಿದೆ.

ಆಯಾ ಗ್ರಾಮಗಳ ದೇಗುಲಗಳು, ಸರ್ಕಾರಿ ಶಾಲೆಗಳು ಅಥವಾ ಪಂಚಾಯಿತಿ ಕಚೇರಿಯ ಆವರಣದಲ್ಲಿ ವೀರಗಲ್ಲುಗಳು, ಶಾಸನಗಳು ಮತ್ತು ಅನಾಥವಾಗಿರುವ ಐತಿಹಾಸಿಕ ದೇಗುಲಗಳ ಮೂರ್ತಿಗಳನ್ನ ಸಂರಕ್ಷಿಸಿ ಅಲ್ಲಿ ಉದ್ಯಾನಗಳನ್ನು ರೂಪಿಸಲು ಜಿಲ್ಲಾ ಪಂಚಾಯಿತಿ ಮುಂದಾಗಿದೆ.

ಜಿಲ್ಲೆಯ ಮಂಚೇನಹಳ್ಳಿಯವರಾದ ಶಾಸನ ತಜ್ಞ ಧನಪಾಲ್ ಈ ಬಗ್ಗೆ ಜಿ.ಪಂ ಸಿಇಒ ಅವರಿಗೆ ಮನವಿ ಸಲ್ಲಿಸಿದ್ದಾರೆ. ಮೊದಲ ಹಂತವಾಗಿ ಶಿಡ್ಲಘಟ್ಟ ತಾಲ್ಲೂಕಿನ ಗೆಜ್ಜಗಾನಹಳ್ಳಿ, ಕೊತ್ತನೂರು, ನಾಗಮಂಗಲ ಮಳ್ಳೂರು ಮುತ್ತೂರು, ಮಳ್ಳೂರು, ಆನೂರು, ಹೊಸಪೇಟೆ (ಭದ್ರನಕೆರೆ), ಸಾದಲಿ, ಭಕ್ತರಹಳ್ಳಿ, ಹಂಡಿಗನಾಳ ಗ್ರಾಮದಲ್ಲಿರುವ ವೀರಗಲ್ಲುಗಳು ಮತ್ತು ಶಾಸನ, ಸ್ಮಾರಕಗಳನ್ನು ಸಂರಕ್ಷಿಸಬೇಕು ಎಂದು ಕೋರಿದ್ದಾರೆ. ಇದಕ್ಕೆ ಸಿಇಒ ಅವರಿಗೆ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ.

ನೆರೆಯ ಕೋಲಾರ ಜಿಲ್ಲೆಯ 3 ಗ್ರಾಮಗಳಲ್ಲಿ ನರೇಗಾ ಯೋಜನೆಯಡಿ ತಲಾ ₹ 10 ಲಕ್ಷ ವೆಚ್ಚದಲ್ಲಿ ವೀರಗಲ್ಲು ಉದ್ಯಾನ ನಿರ್ಮಿಸಲಾಗಿದೆ. ಜಿಲ್ಲೆಯಲ್ಲಿ ಏಕೆ ಈ ರೀತಿಯಲ್ಲಿ ವೀರಗಲ್ಲು ಉದ್ಯಾನ ನಿರ್ಮಿಸಬಾರದು ಎಂದು ಜಿಲ್ಲೆಯಲ್ಲಿ ಶಾಸನಗಳು, ವೀರಗಲ್ಲುಗಳ ಅಧ್ಯಯನದಲ್ಲಿ ತೊಡಗಿರುವವರು, ಇತಿಹಾಸ ಆಸಕ್ತರು ಆಗ್ರಹಿಸುತ್ತಿದ್ದರು.

ಜಿಲ್ಲೆಯ ಬಹುತೇಕ ಕಡೆಗಳಲ್ಲಿ ದೊಡ್ಡ ಮಟ್ಟದಲ್ಲಿ ವೀರಗಲ್ಲುಗಳು ಪತ್ತೆಯಾಗಿವೆ. ಇಂದಿಗೂ ಪತ್ತೆಯಾಗುತ್ತಿವೆ. ಶಾಸನ ತಜ್ಞರು, ಇತಿಹಾಸ ಆಸಕ್ತರು ಈ ವೀರಗಲ್ಲುಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ಬಹಳಷ್ಟು ಕಡೆಗಳಲ್ಲಿ ದೇಗುಲಗಳು, ಖಾಸಗಿ ಜಮೀನುಗಳಲ್ಲಿ ವೀರಗಲ್ಲುಗಳಿವೆ.

ಬಲಿದಾನಗಳು, ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತಿತರ ಐತಿಹಾಸಿಕ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತವೆ. ವೀರಗಲ್ಲುಗಳು ಅಂದಿನ ರಾಜರ ಆಡಳಿತದ ಮಾಹಿತಿ ನೀಡುವ ಅಕರಗಳಾಗಿವೆ. ಇಂತಹ ಮಹತ್ವದ ಐತಿಹಾಸಿಕ ಆಕರಗಳನ್ನು ಸಂರಕ್ಷಿಸಲಾಗುತ್ತಿದೆಯೇ ಎಂದರೆ ನಿರಾಸೆ ಎದ್ದು ಕಾಣುತ್ತದೆ. ಈ ಕಾರಣದಿಂದ ಜಿಲ್ಲೆಯಲ್ಲಿಯೂ ವೀರಗಲ್ಲು ಉದ್ಯಾನಗಳು ನಿರ್ಮಾಣವಾಗಬೇಕು ಎಂದು ಆಗ್ರಹ ವ್ಯಕ್ತವಾಗುತ್ತಿತ್ತು. ಈ ಆಗ್ರಹಕ್ಕೆ ಈಗ ಬಲ ದೊರೆತಿದೆ.

ವೀರಗಲ್ಲುಗಳ ನೆಲ: ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಸುತ್ತಮುತ್ತ 30ಕ್ಕೂ ಹೆಚ್ಚು ವೀರಗಲ್ಲುಗಳಿವೆ. ಸಾದಲಮ್ಮ ದೇವಸ್ಥಾನ, ಸಾದಲಿ ಕ್ರಾಸ್, ಕೋಟಗಲ್ ಬೆಟ್ಟದ ಹೀಗೆ ಸಾದಲಿ ಆಸುಪಾಸಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ವೀರಗಲ್ಲುಗಳಿವೆ.

ಬಾಗೇಪಲ್ಲಿ ತಾಲ್ಲೂಕಿನ ಆಚೆಪಲ್ಲಿ, ಗುಮ್ಮನಾಯಕನಪಾಳ್ಯ, ದೇವಿಕುಂಟೆ ಗ್ರಾಮದ ಅಕ್ಕಮ್ಮಗಾರಿ ಬೆಟ್ಟ, ಶಿಡ್ಲಘಟ್ಟ ತಾಲ್ಲೂಕಿನ ಸುಂಡ್ರಹಳ್ಳಿ, ಮಲ್ಲಿಶೆಟ್ಟಿಪುರ, ಭಕ್ತರಹಳ್ಳಿ, ಗೌರಿಬಿದನೂರು ತಾಲ್ಲೂಕಿನ ನಗರಗೆರೆಯ ಕೋಡೀರ್ಲಪ್ಪ ದೇಗುಲ, ಜೀಲಾಕುಂಟೆ, ಮೇಳ್ಯದ ದೇವಾಲಯ, ಚಿಗಟಗೆರೆ, ಚಿಂತಾಮಣಿ ತಾಲ್ಲೂಕಿನ ಆನೂರು, ನಗರದ ನೆಕ್ಕುಂದಿಪೇಟೆ, ಕೆ.ಎಂ.ಡಿ ಕಲ್ಯಾಣಮಂಟಪದ ಬಳಿಯ ನಾಗರಕಲ್ಲುಗಳ ಬಳಿ, ಕನಂಪಲ್ಲಿಯ ಆಂಜನೇಯಸ್ವಾಮಿ ದೇವಸ್ಥಾನದ ಬಳಿ, ಯರೈಗಾರಹಳ್ಳಿ, ಆಲಂಬಗಿರ, ಕೈವಾರ, ಬನಹಳ್ಳಿ, ಸಂತೆಕಲ್ಲಹಳ್ಳಿ, ಬಸವಾಪರ, ಕೃಷ್ಣಮ್ಮನ ಹೊಸಹಳ್ಳಿ, ಯಗವಕೋಟೆ, ಸಂತೆಕಲ್ಲಹಳ್ಳಿ, ಚಾಂಡ್ರಹಳ್ಳಿ, ಚಿಕ್ಕಬಳ್ಳಾಪುರ ತಾಲ್ಲೂಕಿನ ಮನ್ನಾರ್ಪುರ, ಕೊತ್ತೂರು ಹೀಗೆ ವಿವಿಧ ಕಡೆಗಳಲ್ಲಿ ವೀರಗಲ್ಲುಗಳು ಪತ್ತೆಯಾಗಿವೆ. ಬಾಗೇಪಲ್ಲಿ ತಾಲ್ಲೂಕಿನ ಕೊಂಡಂವಾರಿಪಲ್ಲಿ ಗ್ರಾಮದಲ್ಲಿ ವೀರಗಲ್ಲನ್ನು ಮನೆ ಕಟ್ಟಲು ಬಳಸಿಕೊಳ್ಳುತ್ತಿದ್ದರು ಇದನ್ನು ರಕ್ಷಣೆ ಸಹ ಮಾಡಲಾಗಿತ್ತು.

ಜಿಲ್ಲೆಯ ವಿವಿಧ ಕಡೆಗಳಲ್ಲಿ ಶಾಸನಗಳು ಮತ್ತು ವೀರಗಲ್ಲುಗಳನ್ನು ಧನಪಾಲ್ ಮತ್ತಿತರ ಶಾಸನ ತಜ್ಞರು ಮತ್ತು ಶಾಸನಗಳ ಬಗ್ಗೆ ಆಸಕ್ತಿಯುಳ್ಳವರು ಅಧ್ಯಯನ ನಡೆಸುತ್ತಿದ್ದಾರೆ.

ಮಹತ್ವದ ಕೆಲಸ

‘ಶಾಸನಗಳು ಮತ್ತು ವೀರಗಲ್ಲುಗಳ ಸಂರಕ್ಷಣೆ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಮನವಿ ಮಾಡಿದ್ದೆವು. ಅವರು ಸ್ಪಂದಿಸಿದ್ದಾರೆ. ಮಾಹಿತಿ ನೀಡುವಂತೆ ತಿಳಿಸಿದ್ದಾರೆ’ ಎಂದು ಶಾಸನ ತಜ್ಞ ಧನಪಾಲ್ ‘ಪ್ರಜಾವಾಣಿ’ಗೆ ತಿಳಿಸಿದರು. ಮೊದಲ ಹಂತದಲ್ಲಿ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸಂರಕ್ಷಣಾ ಕೆಲಸಗಳು ನಡೆಯಲಿವೆ. ನಂತರ ಇತರೆ ತಾಲ್ಲೂಕುಗಳಲ್ಲಿಯೂ ರಕ್ಷಣಾ ಕಾರ್ಯಗಳನ್ನು ಮಾಡಲಾಗುವುದು. ಶಾಸನ ಮತ್ತು ವೀರಗಲ್ಲುಗಳ ರಕ್ಷಣೆಯ ಜೊತೆಗೆ ಅದರಲ್ಲಿರುವ ವಿವರಗಳನ್ನೂ ಫಲಕದಲ್ಲಿ ಪ್ರಕಟಿಸಲಾಗುವುದು ಎಂದರು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇದು ಮಹತ್ವದ ಕೆಲಸ. ದೇಗುಲ ಶಾಲೆ ಅಥವಾ ಪಂಚಾಯಿತಿ ಬಳಿ ಕಟ್ಟೆಗಳನ್ನು ನಿರ್ಮಿಸಿ ಅಲ್ಲಿ ವೀರಗಲ್ಲು ಶಾಸನಗಳನ್ನು ಇರಿಸಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.