ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೀರಕ್ರಾಂತಿ ಹರಿಕಾರ ದಿ.ಎಂ.ವಿ.ಕೃಷ್ಣಪ್ಪ ಜಯಂತಿ

Published 1 ಜೂನ್ 2023, 14:07 IST
Last Updated 1 ಜೂನ್ 2023, 14:07 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ ಶಿಡ್ಲಘಟ್ಟ ಶಿಬಿರದ ಕಚೇರಿಯಿಂದ ವಿಶ್ವ ಹಾಲು ದಿನಾಚರಣೆ ಮತ್ತು ರಾಜ್ಯದ ಕ್ಷೀರ ಕ್ರಾಂತಿ ಹರಿಕಾರ ದಿ. ಎಂ.ವಿ. ಕೃಷ್ಣಪ್ಪ ಅವರ ಜಯಂತಿ ಕಾರ್ಯಕ್ರಮವನ್ನು ಗುರುವಾರ ಆಯೋಜಿಸಲಾಯಿತು. 

ಈ ವೇಳೆ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿನ ಒಳ ಹಾಗೂ ಹೊರ ರೋಗಿಗಳಿಗೆ ಗುಡ್‌ಲೈಫ್ ಹಾಲಿನ ಪಾಕೆಟ್‌ಗಳನ್ನು ವಿತರಿಸಲಾಯಿತು. ಈ ವೇಳೆ ಮಾತನಾಡಿದ, ‘ಮಕ್ಕಳಿಂದ ವೃದ್ಧರವರಿಗೆ ಹಾಲು ಉತ್ಕೃಷ್ಟ ಮತ್ತು ಪೌಷ್ಟಿಕ ಆಹಾರ’ ಎಂದು ತಿಳಿಸಿದರು. 

ಹಾಲಿನಲ್ಲಿ ಅಧಿಕ ಪ್ರೋಟಿನ್, ವಿಟಮಿನ್, ಕಾರ್ಬೋ ಹೈಡ್ರೈಟ್ಸ್, ಕ್ಯಾಲ್ಷಿಯಂ ಸೇರಿದಂತೆ ದೈಹಿಕ ಬೆಳವಣಿಗೆಗೆ ಅಗತ್ಯವಾದ ಎಲ್ಲ ಅಂಶಗಳು ಅಧಿಕ ಪ್ರಮಾಣದಲ್ಲಿ ಇರುತ್ತದೆ. ಹಾಗಾಗಿ 14 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಕಡ್ಡಾಯವಾಗಿ ಹಾಲು ಕೊಡಬೇಕು. ಎಲ್ಲ ವಯಸಿನವರೂ ನಿತ್ಯವೂ ಹಾಲು ಬಳಸುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು. 

ಕೋಚಿಮುಲ್ ಶಿಡ್ಲಘಟ್ಟ ಶಿಬಿರದ ಎಂ.ಡಿ.ರವಿಕಿರಣ್ ಮಾತನಾಡಿ, ‘ಪ್ರತಿ ವರ್ಷ ಜೂನ್ 1ರಂದು ವಿಶ್ವ ಹಾಲು ದಿನವನ್ನು ಆಚರಿಸಲಾಗುತ್ತಿದೆ. ತಾಲ್ಲೂಕಿನ ರೈತರು ಹೈನುಗಾರಿಕೆಯನ್ನೇ ಜೀವಾಳವಾಗಿಸಿಕೊಂಡಿದ್ದಾರೆ. ತಾಲ್ಲೂಕಿನಾದ್ಯಂತ 216 ಹಾಲು ಉತ್ಪಾದಕ ಸಹಕಾರ ಸಂಘಗಳು ಹಾಲು ಡೈರಿಗಳನ್ನು ಹೊಂದಿದ್ದು, ಒಕ್ಕೂಟಕ್ಕೆ ಪ್ರತಿ ನಿತ್ಯ 1.07 ಲಕ್ಷ ಲೀಟರ್ ಉತ್ತಮ ಹಾಲು ಸರಬರಾಜು ಮಾಡಲಾಗುತ್ತಿದೆ’ ಎಂದರು.

ನಮ್ಮ ಜಿಲ್ಲೆಯವರಾದ ಕರ್ನಾಟಕದ ಕ್ಷೀರ ಬ್ರಹ್ಮ ಎಂದೆ ಖ್ಯಾತರಾದ ಎಂ.ವಿ. ಕೃಷ್ಣಪ್ಪ ಅವರು ದೇಶ, ವಿದೇಶಗಳಲ್ಲಿ ಸುತ್ತಿ ಅಲ್ಲಿನ ಜನತೆ ಯಾವ ಉದ್ದಿಮೆಯಲ್ಲಿ ಮುಂದುವರೆಯುತ್ತಿದ್ದಾರೆ ಎಂದು ವೀಕ್ಷಿಸಿ, ವಿದೇಶಗಳಿಂದ ಹೆಚ್ಚು ಹಾಲು ಕರೆಯುವ ರಾಸುಗಳನ್ನು ತಂದು ಎರಡೂ ಜಿಲ್ಲೆಗಳಲ್ಲಿ ಕ್ಷೀರ ಕ್ರಾಂತಿಯನ್ನೇ ಮಾಡಿದರು. ಈ ಮೂಲಕ ಜಿಲ್ಲೆಯ ಜನತೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರಿಯಾಗಿದ್ದಾರೆ. ಇಂತಹ ಮಹಾ ಪುರುಷರ ಆದರ್ಶಗಳು ಮತ್ತು ವಿಚಾರದಾರಣೆಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದರು.

ಎಂ.ಡಿ.ಡಾ. ರವಿಕಿರಣ್, ಇಒ ಉಮೇಶ್‌ರೆಡ್ಡಿ, ಇಒ ಜಯಚಂದ್ರ, ಇಒ ಶಂಕರ್ ಕುಮಾರ್, ಇಒ ಮಂಜುನಾಥ, ಇಒ ಗುಲಾಬ್‌ಜಾನ್, ಸಿದ್ದೇಶ್, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಮಂಜು ನಾಯಕ್, ಆಸ್ಪತ್ರೆ ಸಿಬ್ಬಂದಿ ಅಕ್ಕಲರೆಡ್ಡಿ, ನಬೀಬುಲ್ಲಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT