ಬಾಗೇಪಲ್ಲಿ: 2024-25ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪಟ್ಟಣದ ಯಂಗ್ ಇಂಡಿಯಾ ಶಾಲೆಯ ವಿದ್ಯಾರ್ಥಿನಿ ಎಸ್.ನಾಗಶ್ರೀ, ನ್ಯೂ ಹೂರೈಜಾನ್ ಶಾಲೆಯ ವಿದ್ಯಾರ್ಥಿ ಜಸ್ವಂತ್ 625 ಕ್ಕೆ 624 ಅಂಕ ಪಡೆದು ರಾಜ್ಯ ಮಟ್ಟದಲ್ಲಿ 2ನೇ ಸ್ಥಾನ, ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಪಟ್ಟಣದ 7ನೇ ವಾರ್ಡ್ ನಿವಾಸಿ ಜಿ.ಶಂಕರರೆಡ್ಡಿ ಹಾಗೂ ಬೇಬಿ ದಂದರ್ಗಿ ಪುತ್ರಿ ಎಸ್.ನಾಗಶ್ರೀ ಕನ್ನಡ 125, ಇಂಗ್ಲಿಷ್ 100, ಹಿಂದಿ 100, ಗಣಿತ 99, ವಿಜ್ಞಾನ 100, ಸಮಾಜವಿಜ್ಞಾನ 100 ಅಂಕ ಪಡೆದಿದ್ದಾರೆ. 23ನೇ ವಾರ್ಡ್ ನಿವಾಸಿ ಉತ್ತಮರೆಡ್ಡಿ ಹಾಗೂ ಸುಶೀಲಮ್ಮರ ಪುತ್ರ ಯು.ಜಸ್ವಂತ್ 625 ಕ್ಕೆ 624 ಅಂಕ ಪಡೆದು ಶೇ 99.8 ರಷ್ಟು ಫಲಿತಾಂಶ ಗಳಿಸಿದ್ದಾರೆ. ಕನ್ನಡ 124, ಇಂಗ್ಲಿಷ್ 100, ಹಿಂದಿ 100, ಗಣಿತ 100, ವಿಜ್ಞಾನ 100 ಹಾಗೂ ಸಮಾಜವಿಜ್ಞಾನದಲ್ಲಿ 100 ಅಂಕ ಗಳಿಸಿ ರಾಜ್ಯ ಮಟ್ಟದಲ್ಲಿ 2ನೇ ಸ್ಥಾನ ಪಡೆದಿದ್ದಾರೆ.

ರಾಜ್ಯ ಮಟ್ಟದಲ್ಲಿ 2ನೇ ಸ್ಥಾನ ಪಡೆದ ಎಸ್.ನಾಗಶ್ರೀ, ಯು.ಜಸ್ವಂತ್ ಅವರಿಗೆ ಪೋಷಕರು, ಕುಟುಂಬಸ್ಥರು ಸಿಹಿ ತಿನ್ನಿಸಿ ಸಂಭ್ರಮಿಸಿದರು.

ಶಾಸಕ, ತಾಲ್ಲೂಕು ಆಡಳಿತದಿಂದ ಗೌರವ: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ತಹಶೀಲ್ದಾರ್ ಮನೀಷಾ ಎನ್.ಪತ್ರಿ, ಇಒ ಜಿ.ವಿ.ರಮೇಶ್, ತಾಲ್ಲೂಕು ಕ್ಷೇತ್ರಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ, ತಾಲ್ಲೂಕು ಸಮನ್ವಯಾಧಿಕಾರಿ ವೆಂಕಟರಾಮಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಹನುಮಂತರೆಡ್ಡಿ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಪ್ರತಿಭಾನ್ವಿತರ ಮನೆಗೆ ಭೇಟಿ ನೀಡಿ ಗೌರವಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.