ಬಾಗೇಪಲ್ಲಿ: ಕೇಂದ್ರ ಕಾರ್ಮಿಕ ಸಂಘಟನೆಗಳು ಮತ್ತು ರೈತ ಸಂಘಟನೆಗಳ ಸಂಯುಕ್ತ ಕಿಸಾನ್ ಮೋರ್ಚಾ ಬುಧವಾರ ಕರೆ ನೀಡಿದ್ದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ತಾಲ್ಲೂಕಿನ ಕೃಷಿಕೂಲಿಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳೆಯರು, ಅಕ್ಷರದಾಸೋಹ ಸಂಘಟನೆಯಿಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ಕೆಲ ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.

ನಾಲ್ಕು ಕಾರ್ಮಿಕ ಕೋಡ್ಗಳ ಜಾರಿ ನಿಲ್ಲಿಸಬೇಕು. ದುಡಿಯುವ ಕಾರ್ಮಿಕರಿಗೆ ನ್ಯಾಯಬದ್ಧವಾದ ಹಕ್ಕು ಕಲ್ಪಿಸಬೇಕು. ರೈತರ ಭೂಮಿ ಸ್ವಾಧೀನಕ್ಕೆ ವಿರೋಧಿಸಿ, ಬೆಲೆ ಏರಿಕೆ ನಿಯಂತ್ರಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ, ಗರಿಷ್ಠ ₹35 ಸಾವಿರ ವೇತನ ನೀಡಬೇಕು. ವಿದ್ಯುತ್ ತಿದ್ದುಪಡಿ ಮಸೂದೆ 2022 ವಾಪಸ್ ಪಡೆಯಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಲಾಯಿತು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪಟ್ಟಣದ ಡಾ.ಎಚ್.ಎನ್.ವೃತ್ತದಿಂದ ಬಸ್ ನಿಲ್ದಾಣದ ಡಿವಿಜಿ ಮುಖ್ಯರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಿದರು. ಸಾರಿಗೆ ಬಸ್ ನಿಲ್ದಾಣದ ಮುಂದೆ ಎಲ್ಲಾ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಮಾನವ ಸರಪಳಿ ರಚಿಸಿದರು.

ಪ್ರಾಂತ ಕೃಷಿಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ, ‘ಕಾರ್ಪೋರೇಟ್ ಹಾಗೂ ಶ್ರೀಮಂತರ ಕಂಪನಿಗಳಲ್ಲಿ ದಿನಗೂಲಿ, ಹೊರಗುತ್ತಿಗೆ, ಗುತ್ತಿಗೆ ಆಧಾರದಲ್ಲಿ 12 ಗಂಟೆ ಕಾರ್ಮಿಕರನ್ನು ದುಡಿಯಲು ಕಾನೂನು ಮಾಡಲು ಹೊರಟಿದ್ದಾರೆ. ದೇಶದಲ್ಲಿ ಅತಿಹೆಚ್ಚು ಅಸಂಘಟಿತ, ಅನೌಪಚಾರಿಕ ಕಾರ್ಮಿಕರನ್ನು ಕಾನೂನುಗಳ ಅಡಿಯಲ್ಲಿ ತರಬೇಕು. ₹600 ದಿನ ವೇತನ ನಿಗದಿ ಮಾಡಬೇಕು ಎಂಬ ಕೇಂದ್ರ ಕಾರ್ಮಿಕರ ಸಂಘಟನೆಗಳ ಬೇಡಿಕೆಯನ್ನು ಕೇಂದ್ರ ಸರ್ಕಾರ ತಿರಸ್ಕಾರ ಮಾಡಿದೆ. ಕಾರ್ಮಿಕರು ತಮ್ಮ ಹಕ್ಕುಗಳನ್ನು ಪಡೆಯಲು ಬೇಡಿಕೆಗಳ ಪಟ್ಟಿ ಸಲ್ಲಿಸುವಂತಿಲ್ಲ. ಮುಷ್ಕರದ ನೋಟಿಸ್ ನೀಡುವಂತಿಲ್ಲ. ಮುಷ್ಕರ ಬೆಂಬಲಿಸಿದವರನ್ನು ಜೈಲಿಗೆ, ಜಾಮೀನುರಹಿತ ಪ್ರಕರಣ, ದಂಡ ಮಾಡುವ ಹಕ್ಕುನ್ನು ಮತ್ತು ಕಾರ್ಮಿಕರ ಸಂಘದ ನೊಂದಾವಣಿ ರದ್ದುಗೊಳಿಸುವ ಅಂಶಗಳನ್ನು ಸಂಹಿತೆಯಲ್ಲಿ ತರಲಾಗಿದೆ’ ಎಂದು ಆರೋಪಿಸಲಾಗಿದೆ.

ಸಂವಿಧಾನದಲ್ಲಿ ಕಾರ್ಮಿಕರು ತಮ್ಮ ಹಕ್ಕುಗಳು ನ್ಯಾಯಯುತವಾಗಿ ಪಡೆಯಬಹುದು ಎಂದು ಇದೆ. ಆದರೆ ಕೇಂದ್ರ ಬಿಜೆಪಿ ಸರ್ಕಾರ ಕಾರ್ಮಿಕ ಹಕ್ಕುಗಳಿಗೆ ತಿದ್ದುಪಡಿ, ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಳ್ಳಲು ಪ್ರಯತ್ನ ಮಾಡುತ್ತಿದೆ. ದೇಶದ ಅಂಗನವಾಡಿ, ಆಶಾ, ಅಕ್ಷರದಾಸೋಹ ಸೇರಿದಂತೆ ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ ₹35 ಸಾವಿರ ವೇತನ ನೀಡಬೇಕು ಎಂದು ಬೀದಿಗಿಳಿದು ಪ್ರತಿಭಟನೆ ಮಾಡಿದರೂ ಸರ್ಕಾರ ಜಾಣಕುರುಡತನ ಪ್ರದರ್ಶಿಸಿದೆ ಎಂದು ದೂರಿದರು.

ಕೃಷಿಕೂಲಿಕಾರ್ಮಿಕರಿಗೆ ಬೆಂಬಲ ಬೆಲೆ, ಕನಿಷ್ಠ ವೇತನ ನೀಡಲು, ರೈತರ ಸಾಲ ಮನ್ನಾ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬಳಿ ಹಣ ಇಲ್ಲ. ಆದರೆ ಶ್ರೀಮಂತರ, ಕಾರ್ಪೋರೇಟ್ ಕಂಪನಿಗಳ ಸಾಲ ಮನ್ನಾ ಮಾಡಲು ಹಣ ಇದೆ. ರಾಜ್ಯ ಸರ್ಕಾರದ ಶಾಸಕರ ಪ್ರತಿ ತಿಂಗಳ ವೇತನ ಹೆಚ್ಚಳ ಮಾಡಲು ಹಣ ಇದೆಯೇ? ಎಂದು ಪ್ರಶ್ನಿಸಿದರು.

ಸಿಐಟಿಯು ತಾಲ್ಲೂಕು ಕಾರ್ಯದರ್ಶಿ ಜಿ.ಮುಸ್ತಾಫ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮೀಕರ ವಿರೋಧಿ ನೀತಿಗಳನ್ನು ಅನುಸರಿಸಿದೆ. ದಿನದ ಕೆಲಸದ ಅವಧಿ 12 ಗಂಟೆಗೆ ವಿಸ್ತರಣೆ, ರಾತ್ರಿ ಪಾಳಿಯಲ್ಲಿ ಮಹಿಳಾ ಕಾರ್ಮಿಕರ ದುಡಿಮೆಗೆ ಅವಕಾಶ ನೀಡಿ ಕೈಗಾರಿಕಾ ಕಾಯ್ದೆಗೆ ಮಾಡಿರುವ ತಿದ್ದುಪಡಿ ನಿಶ್ಚಿತ ಕಾಲಾವಧಿ ಕಾರ್ಮಿಕರ ನೇಮಕಕ್ಕೆ ಅವಕಾಶ ನೀಡುವ ಆದೇಶಗಳ ತಿದ್ದುಪಡಿಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಬೇಕು ಎಂದರು.

ಕಾರ್ಮಿಕರ ನಿವೃತ್ತಿ ವಯಸ್ಸು 60 ವರ್ಷವನ್ನು ಸಮರ್ಪಕವಾಗಿ ಜಾರಿ ಮಾಡಬೇಕು. ಎಲ್ಲಾ ವಿಭಾಗದ ದುಡಿಯುವ ಮಹಿಳೆಗೆ ವಾರ್ಷಿಕ 12 ದಿನ ವೇತನ ಸಹಿತ ಮುಟ್ಟಿನ ರಜೆ ನೀಡಬೇಕು. ಆಶಾ, ಅಂಗನವಾಡಿ, ಬಿಸಿಊಟ ಸೇರಿದಂತೆ ಎಲ್ಲಾ ವರ್ಗದ ಅಸಂಘಟಿತ ಕಾರ್ಮಿಕರು ತಮ್ಮ ಹಕ್ಕುಗಳನ್ನು ಪಡೆಯಲು ಬಲಿಷ್ಠ ಚಳವಳಿಗೆ ಮುಂದಾಗಬೇಕು ಎಂದು ಕರೆ ನೀಡಿದರು.

ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣ್ಣಯ್ಯ ಬಣ)ದ ಜಿಲ್ಲಾ ಅಧ್ಯಕ್ಷ ಟಿ.ಕ್ಷ್ಮಿನಾರಾಯಣರೆಡ್ಡಿ ಮಾತನಾಡಿ, ಕೃಷಿಕೂಲಿಕಾರ್ಮಿರ, ಮಹಿಳೆಯರ, ವಿದ್ಯಾರ್ಥಿಗಳ, ಯುವಜನರ ಸಮಸ್ಯೆಗಳ ವಿರುದ್ಧ ವಿಧಾನಸೌಧದಲ್ಲಿ, ಹೊರಗೆ ಧ್ವನಿಯಾಗಿ ನಿಂತಿದ್ದ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿರವರಂತೆ ಹಸಿರು, ಕೆಂಪು, ನೀಲಿ ಬಣ್ಣಗಳ ಸಂಘಟನೆಗಳ ನಾಯಕತ್ವದಲ್ಲಿ ಬಲಿಷ್ಠ ಚಳವಳಿಗೆ ಎಲ್ಲಾ ಮುಖಂಡರು ಒಂದಾಗಬೇಕು ಎಂದರು.

ಪ್ರಾಂತ ರೈತ ಸಂಘ ಮತ್ತು ಹಸಿರುಸೇನೆ ನಾರಾಯಣಬಣದ ತಾಲ್ಲೂಕು ಅಧ್ಯಕ್ಷ ಎಚ್.ಎನ್.ಗೋವಿಂದರೆಡ್ಡಿ, ಪ್ರಾಂತ ರೈತ ಸಂಘದ ಚನ್ನರಾಯಪ್ಪ, ಡಿ.ಟಿ.ಮುನಿಸ್ವಾಮಿ, ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ಎ.ಸೋಮಶೇಖರ, ದಲಿತ ಹಕ್ಕುಗಳ ಸಮಿತಿ ತಾಲ್ಲೂಕು ಕಾರ್ಯದರ್ಶಿ ಜಿ.ಕೃಷ್ಣಪ್ಪ, ಮಹಿಳಾ ಮುಖಂಡ ಸಿ.ಉಮಾ ಮಾತನಾಡಿದರು.

ಮುಖಂಡ ಎಚ್.ಎ.ರಾಮಲಿಂಗಪ್ಪ, ಪ್ರಾಂತ ಕೃಷಿಕೂಲಿಕಾರರ ಸಂಘದ ರಾಜ್ಯ ಸಹಕಾರ್ಯದರ್ಶಿ ಬಿಳ್ಳೂರುನಾಗರಾಜ್, ಕಿಸಾನ್ ಸಭಾದ ಅಧ್ಯಕ್ಷ ಕೆ.ವಿ.ರಾಮಚಂದ್ರ, ಎಂ.ಎನ್.ರಘುರಾಮರೆಡ್ಡಿ, ಕೆ.ಮುನಿಯಪ್ಪ, ಈಶ್ವರರೆಡ್ಡಿ, ಲಕ್ಷ್ಮಣರೆಡ್ಡಿ, ಸುರೇಶ್, ಬಿ.ಎಚ್.ರಫೀಕ್, ರಶೀದ್ಖಾನ್, ಇಮ್ರಾನ್, ರವಣಪ್ಪ, ಸಿಐಟಿಯು ಅಕ್ಷರ ದಾಸೋಹ, ಟೋಲ್ಗೇಟ್, ಕಟ್ಟಡ ಕಾರ್ಮಿಕರ ಸಂಘಟನೆಗಳ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.