ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ (ಚಿಮುಲ್) ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎರಡು ಕ್ಷೇತ್ರಗಳಲ್ಲಿ ಯಾರು ಅಭ್ಯರ್ಥಿಗಳಾಗುವರು ಎನ್ನುವ ಚರ್ಚೆ ಈಗ ಭಾರಿ ಸದ್ದು ಮಾಡುತ್ತಿದೆ. ಪಕ್ಷ ಬದಲಿಸಿ ಕಣಕ್ಕೆ ಇಳಿಯುವರೇ, ಯಾರಿಗೆ ಒಳ ಏಟು, ಮತಕ್ಕೆ ಎಷ್ಟು ಹಣ, ‘ಕೈ’ ಕೊಡುವವರು ಯಾರು, ‘ಕೈ’ ಹಿಡಿಯುವವರು ಯಾರು ...ಹೀಗೆ ನಾನಾ ಚರ್ಚೆಗಳು ಜೋರಾಗಿವೆ.

ಫೆ.1ರಂದು ಚಿಮುಲ್ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಚಿಮುಲ್ ಅಸ್ತಿತ್ವಕ್ಕೆ ಬಂದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕರಾಗಿ ವೆಂಕಟೇಶ್ (ಭರಣಿ ವೆಂಕಟೇಶ್) ಗೆಲುವು ಸಾಧಿಸಿದ್ದರು.

ಈ ಹಿಂದೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದು ನಿರ್ದೇಶಕ ಸ್ಥಾನವಿತ್ತು. ಈಗ ಚಿಮುಲ್ ರಚನೆಯ ತರುವಾಯ ಎರಡು ನಿರ್ದೇಶಕ ಸ್ಥಾನಗಳು ಅಸ್ತಿತ್ವಕ್ಕೆ ಬಂದಿವೆ.

ಚಿಕ್ಕಬಳ್ಳಾಪುರದ ಜೊತೆಗೆ ಪೆರೇಸಂದ್ರ ಕ್ಷೇತ್ರವೂ ಅಸ್ತಿತ್ವ ಪಡೆದಿದೆ. ಜೊತೆಗೆ ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಡೇರಿಗಳು ಸೇರಿ ಮಂಚೇನಹಳ್ಳಿ ಕ್ಷೇತ್ರ ರಚನೆ ಆಗಿದೆ. ಆದರೆ ಈಗ ಹೆಚ್ಚು ಚರ್ಚೆ ನಡೆಯುತ್ತಿರುವುದು ಚಿಕ್ಕಬಳ್ಳಾಪುರ ಮತ್ತು ಪೆರೇಸಂದ್ರ ಕ್ಷೇತ್ರಗಳ ಬಗ್ಗೆ.

ಚಿಕ್ಕಬಳ್ಳಾಪುರ ಕ್ಷೇತ್ರದ ವ್ಯಾಪ್ತಿಗೆ ಪೋಶೆಟ್ಟಹಳ್ಳಿ, ಮುದ್ದೇನಹಳ್ಳಿ, ನಂದಿ,ಕುಪ್ಪಹಳ್ಳಿ, ದೊಡ್ಡಮರಳಿ, ಕೊಂಡೇನಹಳ್ಳಿ, ಅಗಲಗುರ್ಕಿ, ಅಜ್ಜವಾರ, ಹೊಸಹುಡ್ಯ, ಅಂಗರೇಖನಹಳ್ಳಿ ಪಂಚಾಯಿತಿಗಳು ಹಾಗೂ ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯ ಡೇರಿಗಳಿವೆ.

ಪೆರೇಸಂದ್ರ ಕ್ಷೇತ್ರ ವ್ಯಾಪ್ತಿಗೆ ತಿಪ್ಪೇನಹಳ್ಳಿ, ಪಟ್ರೇನಹಳ್ಳಿ, ಮಂಚನಬಲೆ, ಆವಲಗುರ್ಕಿ, ಎಸ್.ಗೊಲ್ಲಹಳ್ಳಿ, ದಿಬ್ಬೂರು, ದೊಡ್ಡಪೈಲಗುರ್ಕಿ, ಹಾರೋಬಂಡೆ, ಪೆರೇಸಂದ್ರ, ಅರೂರು, ಅಡ್ಡಗಲ್ಲು ಪಂಚಾಯಿತಿಯ ಡೇರಿಗಳು ಒಳಪಡುತ್ತವೆ.

ಸದ್ಯದ ಅರ್ಹ ಮತ್ತು ಅನರ್ಹ ಕರಡು ಮತದಾರರಪಟ್ಟಿಯಂತೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 83 ಮತ್ತು ಪೆರೇಸಂದ್ರ ಕ್ಷೇತ್ರದಲ್ಲಿ 82 ಡಿಲಿಗೇಟ್ಗಳು ಮತಚಲಾಯಿಸಲು ಅರ್ಹರಾಗಿದ್ದಾರೆ. ಸಹಕಾರ ಕ್ಷೇತ್ರ ರಾಜಕೀಯ ರಹಿತ ಎನಿಸಿದರೂ ‘ರಾಜಕೀಯ’ವೇ ಪ್ರಧಾನವಾಗುತ್ತದೆ. ಆಯಾ ಪಕ್ಷಗಳು ತಮ್ಮ ಬೆಂಬಲಿಗರನ್ನು ಕಣಕ್ಕೆ ಇಳಿಸುತ್ತವೆ.

ಪೆರೇಸಂದ್ರಕ್ಕೆ ಯಾರು: ಕೋಚಿಮುಲ್ ಮಾಜಿ ಅಧ್ಯಕ್ಷರೂ ಆದ ಜಿಲ್ಲೆಯ ಹಿರಿಯ ಸಹಕಾರ ಧುರೀಣ, ಬಿಜೆಪಿ ನಾಯಕ ಕೆ.ವಿ.ನಾಗರಾಜ್, ಎನ್ಡಿಎ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಆಕಾಂಕ್ಷೆ ಹೊಂದಿದ್ದಾರೆ. ನಾಗರಾಜ್ ಹಾಲು ಒಕ್ಕೂಟದ ಆಳ ಅಗಲವನ್ನು ಬಲ್ಲವರು.

ಸಂಸದ ಡಾ.ಕೆ.ಸುಧಾಕರ್ ಅವರ ಆಪ್ತರಾದ ಗರಗಿ ರೆಡ್ಡಿ ಅವರ ಹೆಸರೂ ಸಹ ಚಾಲ್ತಿಗೆ ಬಂದಿದೆ. ಕೆ.ವಿ.ನಾಗರಾಜ್ ಅವರ ವಿರುದ್ಧವಿರುವ ಬಿಜೆಪಿ ನಾಯಕರು ಗರಗಿರೆಡ್ಡಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕು ಎಂದು ತುದಿಗಾಲಿನಲ್ಲಿ ಇದ್ದಾರೆ.

ಕೆ.ವಿ.ನಾಗರಾಜ್ ಅವರು ಎನ್ಡಿಎ ಬೆಂಬಲಿತರಾಗಿ ಕಣಕ್ಕೆ ಇಳಿಯುವರೇ? ಗರಗಿರೆಡ್ಡಿ ಅವರಿಗೆ ಟಿಕೆಟ್ ದೊರೆಯುವುದೇ? ಒಂದು ವೇಳೆ ಗರಗಿರೆಡ್ಡಿ ಅಭ್ಯರ್ಥಿಯಾದರೆ ಹಿರಿಯ ಸಹಕಾರ ಧುರೀಣ ಕೆ.ವಿ.ನಾಗರಾಜ್ ಕಾಂಗ್ರೆಸ್ ಬೆಂಬಲಿತರಾಗಿ ಕಣಕ್ಕೆ ಧುಮುಕುವರೇ? ಸಂಸದರು ಯಾರ ಪರವಾಗಿ ಒಲವು ಹೊಂದಿದ್ದಾರೆ...ಹೀಗೆ ನಾನಾ ಚರ್ಚೆಗಳು ಬಿಜೆಪಿ, ಜೆಡಿಎಸ್ ಪಾಳಯದಲ್ಲಿವೆ.

ಯಲುವಳ್ಳಿ ರಮೇಶ್ ಕಣಕ್ಕೆ: ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಯಲುವಳ್ಳಿ ರಮೇಶ್ ಈಗಾಗಲೇ ಕೆಲವು ಡಿಲಿಗೇಟ್ಗಳಿಗೆ ಕರೆ ಮಾಡಿ ತಾವು ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಲಿದ್ದು ಬೆಂಬಲಿಸುವಂತೆ ಕೋರುತ್ತಿದ್ದಾರೆ. ಕೋಚಿಮುಲ್ ನಿರ್ದೇಶಕರಾಗಿದ್ದ ಎನ್.ಸಿ. ವೆಂಕಟೇಶ್ ಸಹ ‘ಕೈ’ ಅಭ್ಯರ್ಥಿ ಎಂದೇ ಮತ ಕೋರುತ್ತಿದ್ದಾರೆ.

ಎನ್.ಸಿ.ವೆಂಕಟೇಶ್ ಅವರ ಬದಲಿಗೆ ಯಲುವಳ್ಳಿ ರಮೇಶ್ ಅವರಿಗೆ ಟಿಕೆಟ್ ನೀಡುವ ಇರಾದೆ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಇದೆ ಎನ್ನುತ್ತವೆ ಕಾಂಗ್ರೆಸ್ ಮೂಲಗಳು. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ವಿಚಾರವಾಗಿ ಪಕ್ಷದೊಳಗೆ ಚರ್ಚೆಗಳು ನಡೆದಿವೆ. ಸಚಿವ ಡಾ.ಎಂ.ಸಿ.ಸುಧಾಕರ್ ಅವರ ನಿಲುವು ಇನ್ನೂ ಬಹಿರಂಗವಾಗಿಲ್ಲ.

ಎರಡೂ ಪಕ್ಷಗಳ ಪ್ರಮುಖ ನಾಯಕರು ಆಕಾಂಕ್ಷಿಗಳ ಜೊತೆ ಸಭೆ ನಡೆಸಿದ ನಂತರ ‘ಆಟ’ಗಳು ಬದಲಾಗಲಿವೆ ಎನ್ನುವ ಮಾತುಗಳು ಸಹ ಚಾಲ್ತಿಯಲ್ಲಿವೆ. ಸದ್ಯದ ಮಟ್ಟಿಗೆ ಚಿಮುಲ್ ಚುನಾವಣೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯವನ್ನು ಕಾವೇರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.