ಚಿಂತಾಮಣಿ: ಮುಂಬರುವ ಹೋಳಿ, ಯುಗಾದಿ, ರಂಜಾನ್ ಸರಣಿ ಹಬ್ಬಗಳನ್ನು ಹಿಂದೂ, ಮುಸ್ಲಿಂ ಸಮುದಾಯದವರು ಭಾವೈಕ್ಯತೆಯಿಂದ, ಶಾಂತಿಯುತವಾಗಿ ಆಚರಿಸಬೇಕು ಎಂದು ಡಿವೈಎಸ್ಪಿ ವಿ.ಮುರಳೀಧರ್ ಮನವಿ ಮಾಡಿದರು.

ಹಬ್ಬಗಳ ಹಿನ್ನೆಲೆಯಲ್ಲಿ ಭಾನುವಾರ ನಗರದ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದರು.

ಹೋಳಿ ದಿನ ಬಣ್ಣ ಎರಚುವುದು ರೂಡಿಯಲ್ಲಿದೆ. ಯಾರಿಗೂ ತೊಂದರೆ ಆಗದ ರೀತಿಯಲ್ಲಿ ಆಚರಿಸಬೇಕು. ರಂಜಾನ್ ಹಬ್ಬದ ಉಪವಾಸ ಬಿಡುವ ಸಮಯದಲ್ಲಿ ಸಂಚಾರಿ ವ್ಯವಸ್ಥೆಯನ್ನು ಕಾಪಾಡಲು ಮಸೀದಿಗಳ ಬಳಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗುತ್ತದೆ ಎಂದರು.

ರಂಜಾನ್ 26ನೇ ದಿನ ಜಾಗರಣೆ ಇರುತ್ತಾರೆ. ರಾತ್ರಿ ವೀಲಿಂಗ್, ತ್ರಿಬಲ್ ರೈಡಿಂಗ್, ರಸ್ತೆಗಳಲ್ಲಿ ಕೂಗಾಡುವುದು, ಲೈಟ್ಗಳನ್ನು ಒಡೆಯುವುದು ಮುಂತಾದ ಕೆಲಸಗಳನ್ನು ಮಾಡಬಾರದು ಎಂದು ಮಸೀದಿಗಳಲ್ಲಿ ಸೂಚನೆ ನೀಡಿ ಜಾಗೃತಿಗೊಳಿಸಬೇಕು. ಅಂತಹ ಘಟನೆಗಳು ಕಂಡುಬಂದರೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುದು ಎಂದು ಎಚ್ಚರಿಸಿದರು.

ಸಂಚಾರ ನಿಯಮ, ಅಪರಾಧ ತಡೆ ನಿಯಂತ್ರಣದ ಕುರಿತು ಎಷ್ಟು ಹೇಳಿದರೂ ಸಾಕಾಗುತ್ತಿಲ್ಲ. ಹೆಲ್ಮೆಟ್ ಧರಿಸದಿರುವುದು, ಸಂಚಾರ ನಿಯಮಗಳ ಉಲ್ಲಂಘನೆ, ತ್ರಿಬಲ್ ರೈಡಿಂಗ್ ಮತ್ತಿತರ ಅಪರಾಧಗಳನ್ನು ತೀವ್ರವಾಗಿ ಪರಿಗಣಿಸಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು ಹಾಕುವ ಕುರಿತು ಸಾಕಷ್ಟು ಬಾರಿ ಎಚ್ಚರಿಕೆ ವಹಿಸಬೇಕು. ನಿಜವೇ, ಸುಳ್ಳೆ ಎಂದು ಪರಿಗಣಿಸಿ ಪೊಲೀಸ್ ಇಲಾಖೆಯೊಂದಿಗೆ ಸಂಪರ್ಕ ಬೆಳೆಸಬೇಕು ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.