ಚಿಂತಾಮಣಿ: ತಾಲ್ಲೂಕಿನ ಮುಂಗಾನಹಳ್ಳಿ ಹೋಬಳಿಯ ಎಸ್.ರಾಗುಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬುಜರಂಗರಾಯನಕೋಟೆ ಗ್ರಾಮದಲ್ಲಿ ಶನಿವಾರ ವಿದ್ಯುತ್ ಶಾಕ್ನಿಂದ ರೈತರೊಬ್ಬರು ಮೃತಪಟ್ಟಿದ್ದಾರೆ.

ಗ್ರಾಮದ ಶಂಕರರೆಡ್ಡಿ (45) ಮೃತಪಟ್ಟವರು. ಗ್ರಾಮದ ಹೊರವಲಯದಲ್ಲಿರುವ ದಾಳಿಂಬೆ ತೋಟಕ್ಕೆ ನೀರು ಹಾಯಿಸಲು ಅವರು ತನ್ನ ಪತ್ನಿ ಜತೆ ಹೋಗಿದ್ದರು. ಪಂಪ್ ಪ್ಯಾನಲ್ ಬೋರ್ಡ್ನ ಸ್ವಿಚ್ ಹಾಕುವಾಗ ವಿದ್ಯುತ್ ಶಾಕ್ ತಗುಲಿದೆ.

ಪತ್ನಿ ತಕ್ಷಣ ಸ್ಥಳಕ್ಕೆ ಬಂದು ವಿದ್ಯುತ್ ಪ್ರವಹಿಸಿರುವುದನ್ನು ಕಂಡು ಕೂಗಿಕೊಂಡಿದ್ದಾರೆ. ಪಕ್ಕದ ತೋಟದಲ್ಲಿದ್ದ ರೈತ ಮಹೇಶ್ ಮತ್ತು ಮಲ್ಲಿರೆಡ್ಡಿ ಸ್ಥಳಕ್ಕೆ ಆಗಮಿಸಿ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದರು. ಗಾಯಾಳುವನ್ನು ಬಟ್ಲಹಳ್ಳಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ನಂತರ ಅಲ್ಲಿಂದ ನಗರದ ಡೆಕ್ಕನ್ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ.

ಪತ್ನಿ ಕೆ.ಸೌಭಾಗ್ಯ ನೀಡಿದ ದೂರಿನ ಮೇರೆಗೆ ಬಟ್ಲಹಳ್ಳಿ ಪೊಲೀಸರು ಆಗಮಿಸಿದರು. ಶವವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ. ಬಟ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.