ಚಿಂತಾಮಣಿ: ತಾಲ್ಲೂಕಿನ ಉಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬರಿ ಗ್ರಾಮದಲ್ಲಿ ಆಫ್ರಿಕನ್ ಹಂದಿ ಜ್ವರದಿಂದ ಸತ್ತ 100ಕ್ಕೂ ಹೆಚ್ಚು ಹಂದಿಗಳನ್ನು ಸಾರ್ವಜನಿಕ ಕೆರೆಗೆ ಬಿಸಾಡಿರುವ ಹಂದಿ ಫಾರ್ಮ್ ಮಾಲೀಕರ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎರಡು ದೂರು ದಾಖಲಾಗಿದೆ.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಿಂದ ಒಂದು ದೂರು ದಾಖಲಾಗಿದೆ. ಪಶುಪಾಲನೆ ಮತ್ತು ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕರು ಒಂದು ದೂರನ್ನು ಸಲ್ಲಿಸಿದ್ದಾರೆ.

ಹಂದಿಜ್ವರದಿಂದ ಸತ್ತ ಹಂದಿಗಳನ್ನು ಗುಣಿತೋಡಿ ಮಣ್ಣಿನಲ್ಲಿ ಹೂಳಬೇಕು ಎಂದು ಪಶುವೈದ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದರೂ ಫಾರ್ಮ್ ಮಾಲೀಕ ವೆಂಕಟರೆಡ್ಡಿ ಬೇಜವಾಬ್ದಾರಿಯಿಂದ ವರ್ತಿಸಿ ಸಾರ್ವಜನಿಕರ ಮತ್ತು ಪ್ರಾಣಿ ಪಕ್ಷಿಗಳ ಆರೋಗ್ಯಕ್ಕೆ ತೊಂದರೆ ಮಾಡಿದ್ದಾನೆ ಎಂದು ದೂರಲಾಗಿದೆ.

ಸುಮಾರು 100 ಸತ್ತ ಹಂದಿಗಳನ್ನು ಸಾರ್ವಜನಿಕ ಕೆರೆಗೆ ಎಸೆದಿರುವುದು ಅಕ್ಷಮ್ಯ ಅಪರಾಧ. ಕೆರೆಗೆ ಎಸೆಯುತ್ತಿರುವ ಬಗ್ಗೆ ಕೆಲವರು ಪ್ರಶ್ನೆ ಮಾಡಿದಾಗ ‘ಏನು ಮಾಡುತ್ತಾರೋ ಮಾಡಿಕೊಳ್ಳಲಿ’ ಎಂದು ಮಾಲೀಕ ವೆಂಕಟರೆಡ್ಡಿ ಅಹಂಕಾರದಿಂದ ವರ್ತಿಸಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ತಾಲ್ಲೂಕು ಆಡಳಿತ ಎಚ್ಚೆತ್ತುಕೊಂಡು ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ತಾಲ್ಲೂಕು ವೈದ್ಯಾಧಿಕಾರಿ, ಪಶುವೈದ್ಯಕೀಯ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲೆ ಮೊಕ್ಕಾಂ ಮಾಡಿದ್ದರು. ಗ್ರಾಮ ಪಂಚಾಯಿತಿ ಸಿಬ್ಬಂದಿ ಎರಡು ಯಂತ್ರ, ಒಂದು ಟ್ರ್ಯಾಕ್ಟರ್ ಮೂಲಕ ಕೆರೆಯಲ್ಲಿ ತೇಲಾಡುತ್ತಿದ್ದ ಹಂದಿಯ ಕಳೆಬರವನ್ನು ತೆಗೆದು ಮಣ್ಣಿನಲ್ಲಿ ಹೂತು ಹಾಕಿದರು.

ಹೆಬ್ಬರಿ ಮತ್ತು ದಂಡುಪಾಳ್ಯದ ಮಧ್ಯದಲ್ಲಿ ರಸ್ತೆಗೆ ಹೊಂದಿಕೊಂಡು ಕೆರೆ ಇದೆ. ದಂಡುಪಾಳ್ಯದ ಜನರು ಬಟ್ಟೆಗಳನ್ನು ಇಲ್ಲಿ ಒಗೆಯುತ್ತಿದ್ದರು. ಜನಜಾನುವಾರುಗಳು ಕೂಡಾ ಇದೇ ಕೆರೆಯ ನೀರು ಕುಡಿಯುತ್ತಿದ್ದವು. ಕೆರೆಯ ಒಂದು ಭಾಗ ಮರಗಳಿಂದ ಮರೆಯಾಗಿದ್ದು ಆ ಭಾಗದಲ್ಲಿ ಹಂದಿಗಳನ್ನು ಎಸೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ನೀರಿಗೆ ಬ್ಲೀಚಿಂಗ್ ಪೌಡರ್ ಹಾಕಿ ಸಾಧ್ಯವಾದಷ್ಟು ಸ್ವಚ್ಛಗೊಳಿಸಲಾಗಿದೆ. ನೀರಿನ ಮಾದರಿಯನ್ನು ಪರೀಕ್ಷಿಸಲಾಗಿದೆ. 8-10 ದಿನಗಳ ನಂತರ ಮತ್ತೊಮ್ಮೆ ಪರೀಕ್ಷೆ ಮಾಡಿಸಲಾಗುವುದು. ಸದ್ಯಕ್ಕೆ ಮೀನುಗಳಾಗಲಿ, ಬಾತುಗಳಾಗಲಿ ಸತ್ತಿಲ್ಲ. ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್ ‘ಪ್ರಜಾವಾಣಿ’ ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.