ಚಿಂತಾಮಣಿ: ನಗರದ ಗ್ರಂಥಾಲಯ ಪಕ್ಕದಲ್ಲಿ ಸೋಮವಾರ ನೂತನ ತಾಲ್ಲೂಕು ಕುಂಬಾರರ ಕ್ಷೇಮಾಭಿವೃದ್ಧಿ ಸಂಘದ ಕಚೇರಿಯನ್ನು ಸಂಘದ ಪದಾಧಿಕಾರಿಗಳು ವಿಶೇಷ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿದರು.

ತಾಲ್ಲೂಕು ಅಧ್ಯಕ್ಷ ಆರ್. ವೆಂಕಟಚಲಪತಿ ಮಾತನಾಡಿ, ಕುಂಬಾರರು ಸಮಾಜದ ಮುಖ್ಯ ವಾಹಿನಿಗೆ ಬರಲು ಸಂಘಟನೆ ಮುಖ್ಯ. ಸರ್ಕಾರದ ಸೌಲಭ್ಯ ಪಡೆಯಲು ಮತ್ತು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಒಗ್ಗಟ್ಟು ಅಗತ್ಯ ಎಂದರು.

2019ರಲ್ಲೇ ಕುಂಬಾರರ ಕ್ಷೇಮಾಭಿವೃದ್ಧಿ ಸಂಘ ಮಾಡಲಾಗಿತ್ತು, ಕಾರಣಾಂತರಗಳಿಂದ ಉದ್ಘಾಟನೆಗೆ ಅವಕಾಶ ಕೂಡಿಬಂದಿರಲಿಲ್ಲ. ಕುಂಬಾರ ಸಮುದಾಯದ ಪ್ರತಿಯೊಬ್ಬರೂ ಸಂಘದ ಸದಸ್ಯತ್ವ ಪಡೆದುಕೊಳ್ಳಬೇಕು ಎಂದರು.

ಕುಂಬಾರ ಭವನ ನಿರ್ಮಾಣಕ್ಕೆ ತಾಲ್ಲೂಕಿನ ದೊಡ್ಡಹಳ್ಳಿ ಸರ್ವೆ ಸಂಖ್ಯೆ 13ರಲ್ಲಿ 3 ಗುಂಟೆ ಜಮೀನು ಮಂಜೂರು ಆಗಿದೆ. ಸಮುದಾಯದ ಕಟ್ಟಕಡೆ ವ್ಯಕ್ತಿಗೆ ಸರ್ಕಾರಿ ಸೌಲಭ್ಯಗಳು ಸಿಗುವಂತಹ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಗೌರವಾಧ್ಯಕ್ಷ ಕೆ.ಎಂ. ರೆಡ್ಡಪ್ಪ ಮಾತನಾಡಿ, ಸಮುದಾಯದ ಜನರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು. ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸಬೇಕು. ಉನ್ನತ ಶಿಕ್ಷಣ ಪಡೆದರೆ ಮಾತ್ರ ಸಮಾಜದಲ್ಲಿ ಉತ್ತಮ ಸ್ಥಾನಮಾನ ದೊರೆಯುತ್ತದೆ ಎಂದರು.

ಉಪಾಧ್ಯಕ್ಷ ಗೋವಿಂದ, ಕಾರ್ಯದರ್ಶಿ ಚಂದ್ರಶೇಖರ್, ಜಂಟಿ ಕಾರ್ಯದರ್ಶಿ ಶಿವಶಂಕರ್, ಖಜಾಂಚಿ ಗೋವಿಂದರಾಜು, ಜಂಟಿ ಖಜಾಂಚಿ ಕೆ. ನಾಗೇಶ್, ಮಂಜುನಾಥ್, ಕೇಬಲ್ ನಾರಾಯಣ್, ವೆಂಕಟಸ್ವಾಮಿ, ವೆಂಕಟಲಕ್ಷ್ಮಮ್ಮ, ಮುನಿಸ್ವಾಮಿ, ರಮೇಶ್, ವೆಂಕಟಸ್ವಾಮಿ, ಶ್ರೀನಿವಾಸ್, ನಾಗಪ್ಪ, ಸೀನಪ್ಪ, ಆರ್. ಮಂಜು, ಮುರಳಿ, ಎನ್. ಅಂಬರೀಶ್, ಶಿವರಾಂ, ಕೃಷ್ಣಪ್ಪ, ತಿಮ್ಮಯ್ಯ ,ನಾರಾಯಣಸ್ವಾಮಿ, ಶ್ರೀರಾಮ್, ಗೋಪಾಲಕೃಷ್ಣಪ್ಪ, ಅಶ್ವಥ್ ನಾರಾಯಣ, ರಾಮಪ್ಪ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.