ತಮ್ಮದೇ ಆಡಳಿತವಿದ್ದರೂ ಪ್ರತಿಭಟಿಸಿದ್ದ ಬೆಂಬಲಿಗರು
ಮಂಡಿಕಲ್ಲು ಮತ್ತು ಪೆರೇಸಂದ್ರ ಜನರ ಆರೋಗ್ಯಕ್ಕೆ ಮತ್ತು ಪರಿಸರಕ್ಕೆ ಕಂಟಕವಾಗಿರುವ ಕ್ರಷರ್‌ಗಳನ್ನು ಸಂಪೂರ್ಣವಾಗಿ ಬಂದ್ ಮಾಡಿಯೇ ಸಿದ್ಧ ಎಂದು ಕಳೆದ ಅಕ್ಟೋಬರ್‌ನಲ್ಲಿ ಶಾಸಕ ಪ್ರದೀಪ್ ಈಶ್ವರ್ ಅವರ ನುಡಿದಿದ್ದರು. ಶಾಸಕರ ಬೆಂಬಲಿಗರು ಕ್ರಷರ್ ಬಂದ್‌ಗೆ ಆಗ್ರಹಿಸಿ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ಸಹ ನಡೆಸಿದ್ದರು. ಆದರೆ ಈ ಜಟಾಪಟಿ ನಡೆಯುವಾಗಲೇ ‘ಗಣಿಗಾರಿಕೆಯನ್ನು ಪೂರ್ಣವಾಗಿ ಬಂದ್ ಮಾಡಬೇಕು ಎನ್ನುವುದು ಅವೈಜ್ಞಾನಿಕ ಮತ್ತು ಕಾನೂನುಬದ್ಧವಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದರು. ‘ಗಣಿಗಾರಿಕೆಯ ಬಂದ್’ನ ವಿಚಾರ ಕಂದಾಯ ಸಚಿವರ ಮಟ್ಟದವರೆಗೂ ತಲುಪಿತ್ತು. ಇಲ್ಲಿಂದಲೇ ಸಚಿವರು ಮತ್ತು ಶಾಸಕರ ನಡುವೆ ತಾಳಮೇಳ ತಪ್ಪಿತು ಎನ್ನುತ್ತಾರೆ ಕಾಂಗ್ರೆಸ್‌ನ ಪ್ರಮುಖ ಮುಖಂಡರೊಬ್ಬರು.