ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಗಮ ಸ್ಥಾಪನೆಗೆ ಅಭಿನಂದನೆ

Last Updated 1 ಅಕ್ಟೋಬರ್ 2020, 7:24 IST
ಅಕ್ಷರ ಗಾತ್ರ

ಚೇಳೂರು: ಗೊಲ್ಲ ಸಮದಾಯ ಅಭಿವೃದ್ದಿ ನಿಗಮ ಸ್ಥಾಪನೆಗೆ ನಿರ್ಧರಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕರ್ನಾಟಕ ಯಾದವ ಸಂಘದ ಚೇಳೂರು ತಾಲ್ಲೂಕು ಅಧ್ಯಕ್ಷ ಮಂಡ್ಯಂಪಲ್ಲಿ ಕೆ.ಎನ್.ಚಂದ್ರಣ್ಣ ಕೃತಜ್ಞತೆ ಸಲ್ಲಿಸಿದ್ದಾರೆ.

‘ರಾಜ್ಯದಲ್ಲಿ ಗೊಲ್ಲ ಸಮುದಾಯದ 30 ಲಕ್ಷ ಜನರಿದ್ದು, ನಿಗಮ ಸ್ಥಾಪನೆಯಿಂದ ಹಿಂದುಳಿದಿರುವ ಸಮುದಾಯವು ಸಮಾಜದ ಮುಖ್ಯ ವಾಹಿನಿಗೆ ಬರಲು ಅನುಕೂಲವಾಗಿದೆ. ಎಂದು ಹೇಳಿದರು.

ಚಿಂತಾಮಣಿ: ನಗರದ ಮುನ್ಸಿಪಲ್ ಕಾಂಪ್ಲೆಕ್ಸ್‌ ನ ನೀರಿನ ತೊಟ್ಟಿಯ ಕೆಳಗೆ ಐ.ಪಿ.ಎಲ್ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಗುಂಪಿನ ಮೇಲೆ ಬುಧವಾರ ಜಿಲ್ಲಾ ಡಿ.ಸಿ.ಬಿ ಪೊಲೀಸರು ದಾಳಿ ನಡೆಸಿ ಒಬ್ಬರನ್ನು ಬಂಧಿಸಿ ₹ 4,600 ಹಾಗೂ ಮೊಬೈಲ್‌ ವಶಪಡಿಸಿಕೊಂಡಿದ್ದಾರೆ.

ಜಿಲ್ಲಾ ಡಿ.ಸಿ.ಬಿ ಪೊಲೀಸ್ ಠಾಣೆಯ ಇನ್ಸ್‌ಸ್ಪೆಕ್ಟರ್ ರಾಜಣ್ಣ ನೇತೃತ್ವದಲ್ಲಿ ದಾಳಿ ನಡೆದಿದೆ. 4-5 ಜನರ ಗುಂಪು ಐಪಿಎಲ್ ಕ್ರಿಕೆಟ್ ಪಂದ್ಯದ ಹೆಸರುಗಳನ್ನು ಹೇಳಿಕೊಂಡು 2 ಸಾವಿರ ಬೆಟ್ಟಿಂಗ್ ಕಟ್ಟುವಂತೆ ಕೂಗುವುದು ಕೇಳಿಸಿತು. ದಾಳಿ ವೇಳೆ. ಚೀಟಿ ಬರೆಯುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದರು.

ಚಿಂತಾಮಣಿ: ನಗರದ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯು ಅಕ್ಟೋಬರ್ 11 ರಂದು ನಡೆಯಲಿದೆ.ಇಲ್ಲಿನ ಮಹಾತ್ಮ ಗಾಂಧಿ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾನುವಾರ ಬೆಳಿಗ್ಗೆ 9 ಗೆ ಮತದಾನ ನಡೆಯಲಿದೆ.

ಶಿಕ್ಷಕರ ಅರ್ಹತಾ ಪರೀಕ್ಷೆ

ಚಿಕ್ಕಬಳ್ಳಾಪುರ : ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯು ಅಕ್ಟೋಬರ್ 4 ರಂದು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಒಟ್ಟು 13 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ.

ಡಿ.ಇಡಿ ಅಭ್ಯರ್ಥಿಗಳಿಗೆ ಬೆಳಗಿನ ಅವಧಿ 9 ರಿಂದ 12 ಗಂಟೆಯವರೆಗೆ ಮತ್ತು ಬಿ.ಇಡಿ ಮಧ್ಯಾಹ್ನ ಅವಧಿ 1.30 ರಿಂದ 4.30 ಗಂಟೆಯವರೆಗೆ ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಉಪನಿರ್ದೇಶಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT