ಶುಕ್ರವಾರ, ಜನವರಿ 22, 2021
19 °C
ಗೌರಿಬಿದನೂರಿನಲ್ಲಿ ಹೆಚ್ಚಿದ ಆತಂಕ; ಗಡಿ‌ಭಾಗದ ಚೆಕ್‌ಪೋಸ್ಟ್‌ಗಳಲ್ಲಿ ಪ್ರಾಥಮಿಕ ಚಿಕಿತ್ಸೆ

ಮುಂಬೈನಿಂದ ಬಂದ 120 ಮಂದಿಗೆ ಕ್ವಾರಂಟೈನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೌರಿಬಿದನೂರು: ಮಹಾರಾಷ್ಟ್ರದ ಮುಂಬೈನಿಂದ ‌ತಾಲ್ಲೂಕಿನ ವಿವಿಧ ಗ್ರಾಮಗಳಿಗೆ 120 ಜನರು ಬಂದಿದ್ದು ತಾಲ್ಲೂಕಿನಲ್ಲಿ ಆತಂಕ ಹೆಚ್ಚಿಸಿದೆ.

ಸೋಮವಾರ ಲಾರಿ ಮತ್ತು ಟೆಂಪೊ ಮೂಲಕ 9 ಕಾರ್ಮಿಕರು ನೆರೆಯ ಆಂಧ್ರದ ಮೂಲಕ ತಾಲ್ಲೂಕಿಗೆ ಬಂದಿದ್ದರು. ಮಂಗಳವಾರ 4 ಸಾರಿಗೆ ಬಸ್ ಮೂಲಕ ಸುಮಾರು 120 ಮಂದಿ ಕಾರ್ಮಿಕರು ಮಧುಗಿರಿ ಮಾರ್ಗವಾಗಿ ಹಾಗೂ ಉಳಿದಂತೆ ಖಾಸಗಿ ವಾಹನಗಳ‌ ಮೂಲಕ ಮುಂಬೈನಿಂದ ತಾಲ್ಲೂಕಿಗೆ ಬಂದಿದ್ದಾರೆ.

ತಾಲ್ಲೂಕಿನ ಗಡಿ‌ಭಾಗದ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸ್ ‌ಮತ್ತು ಆರೋಗ್ಯ ಅಧಿಕಾರಿಗಳು ಪ್ರಾಥಮಿಕ ಚಿಕಿತ್ಸೆಗೆ ಒಳಪಡಿಸಿದ್ದಾರೆ. ಬಳಿಕ ನಗರದ ಹೊರವಲಯದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ ಎಲ್ಲರನ್ನು ಕ್ವಾರೆಂಟೈನ್‌ ‌ಮಾಡಲಾಗಿದೆ.

ಆರೋಗ್ಯ ಇಲಾಖೆಯ ಅಧಿಕಾರಿ ಮುಂಬೈನಿಂದ ಬಂದ ಎಲ್ಲರ ದಾಖಲೆ ‌ಸಂಗ್ರಹಿಸಿದ ಬಳಿಕ ರಕ್ತ ಹಾಗೂ ಗಂಟಲಿನ ದ್ರವ ಪಡೆದು ಪರೀಕ್ಷೆಗೆ ಕಳುಹಿಸಿದ್ದಾರೆ. ಕ್ವಾರೆಂಟೈನ್‌ನಲ್ಲಿರುವ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಸಮಾಜ ಕಲ್ಯಾಣ ‌ಇಲಾಖೆಯಿಂದ ನೀಡಲಾಗುವುದು ಎಂದು‌ ಅಧಿಕಾರಿಗಳು ತಿಳಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು