ಶನಿವಾರ, ಏಪ್ರಿಲ್ 4, 2020
19 °C

ಕೊರೊನಾ ವೈರಸ್ ಭೀತಿ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 239 ಜನರ ಮೇಲೆ ನಿಗಾ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: 'ಜಿಲ್ಲೆಯಾದ್ಯಂತ ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕಾಗಿ ಪರಿಣಾಮಕಾರಿ ನಿಯಂತ್ರಣ ಕ್ರಮಗಳನ್ನು ಕೈಗೊಂಡಿದ್ದು, 239 ಜನರ ಮೇಲೆ ನಿಗಾ ಇಡಲಾಗಿದೆ' ಎಂದು ಜಿಲ್ಲಾಧಿಕಾರಿ ಆರ್.ಲತಾ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಜಿಲ್ಲೆಗೆ ಫೆಬ್ರವರಿಯಿಂದ ಮಾರ್ಚ್ 26ರ ವರೆಗೆ ವಿದೇಶಗಳಿಂದ 195 ಜನರು ಬಂದಿದ್ದು, ಅವರ ಜತೆ 44 ಜನ ಸಂಪರ್ಕ ಹೊಂದಿದ್ದು, ಒಟ್ಟು 239 ಜನರ ಮೇಲೆ ನಿಗಾ ವಹಿಸಲಾಗಿದೆ' ಎಂದು ತಿಳಿಸಿದರು.

ಎಲ್ಲಾ ಪ್ರಯಾಣಿಕರು ಗೃಹ ನಿರ್ಬಂಧನದಲಿದ್ದು, ನಿತ್ಯ ಆರೋಗ್ಯ ಇಲಾಖೆ ಸಿಬ್ಬಂದಿ ಇವರ ಆರೋಗ್ಯದ ಬಗ್ಗೆ ನಿಗಾವಹಿಸುತ್ತಿದ್ದಾರೆ ಎಂದರು.

ವಿದೇಶಗಳಿಂದ ಬಂದವರ ಪೈಕಿ 160 ಜನ 14 ದಿನಗಳ ಕೊರೆಂಟೈನ್ ನಿಗಾದಲ್ಲಿದ್ದು ಈಗಾಗಲೇ 73 ಜನರು 14 ದಿನಗಳ ಕೊರೆಂಟೈನ್ ಅವಧಿ ಪೂರ್ಣಗೊಳಿಸಿದ್ದಾರೆ ಎಂದು ಹೇಳಿದರು.

ಕ್ವಾರಂಟೈನ್ ಉಲ್ಲಂಘನೆ, ಆಸ್ಪತ್ರೆಗೆ ಸ್ಥಳಾಂತರ
ಚಿಕ್ಕಬಳ್ಳಾಪುರ:
ನಗರದ ದೊಡ್ಡಭಜನೆ ಮನೆ ರಸ್ತೆಯಲ್ಲಿ ಗೃಹ ನಿರ್ಬಂಧನಕ್ಕೆ ಒಳಗಾಗಿದ್ದ ಕುಟುಂಬವೊಂದನ್ನು ನಿಯಮ ಉಲ್ಲಂಘಿಸಿ, ಸ್ಥಳೀಯರ ಆಕ್ರೋಶಕ್ಕೆ ಗುರಿಯಾದ ಕಾರಣ ಗುರುವಾರ ಪ್ರತ್ಯೇಕ ವಾರ್ಡ್‌ಗೆ ಸ್ಥಳಾಂತರಿಸಲಾಯಿತು.

ಇತ್ತೀಚಿಗೆ ಅಜ್ಮೀರ ಯಾತ್ರೆಯಿಂದ ವಾಪಾಸಾಗಿದ್ದ ದೊಡ್ಡಭಜನೆ ಮನೆ ರಸ್ತೆ ನಿವಾಸಿ ಮಹಿಳೆಗೆ ವಿಮಾನ ನಿಲ್ದಾಣದಲ್ಲಿ ಕ್ವಾರಂಟೈನ್ ಮೊಹರು ಹಾಕಲಾಗಿತ್ತು. ಆ ಮಹಿಳೆ ಗುರುವಾರ ಪದೇ ಪದೇ ಮನೆಯದ ಹೊರಗೆ ಬರುತ್ತಿದ್ದ ಕಾರಣ ನೆರೆಹೊರೆಯವರು ಆಕ್ರೋಶ ‌ವ್ಯಕ್ತಪಡಿಸಿ, ಈ ವಿಚಾರ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರ ಗಮನಕ್ಕೆ ತಂದರು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಮಹಿಳೆಯನ್ನು ಪರೀಕ್ಷಿಸಿ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲ ತಿಳಿಸಿದರು. ಆದರೂ, ಕೆಲ ಸ್ಥಳೀಯರು ಕೂಡಲೇ ಆ ಕುಟುಂಬವನ್ನು ಸ್ಥಳಾಂತರಿಸುವಂತೆ ಆಗ್ರಹಿಸಿದರು. ಇದು ಸ್ಥಳೀಯರ ನಡುವೆ ಮಾತಿನ ಚಕಮಕಿಗೆ ಕೂಡ ಕಾರಣವಾಯಿತು.

ಕೊನೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಮಹಿಳೆಯ ಮನೆಯಲ್ಲಿದ್ದ ಮೂರು ಸದಸ್ಯರನ್ನು ನಗರದ ಜಿಲ್ಲಾ ಆಸ್ಪತ್ರೆ ಹಳೆ ಕಟ್ಟಡದಲ್ಲಿ ತೆರೆದ ವಿಶೇಷ ವಾರ್ಡ್‌ಗೆ ಸ್ಥಳಾಂತರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು