ಶನಿವಾರ, ಜನವರಿ 25, 2020
28 °C

ಚಿಕ್ಕಬಳ್ಳಾಪುರದಲ್ಲಿ ಪ್ರಿಯಕರನೇ ಪ್ರಿಯತಮೆಗೆ ವಿಷ ಕುಡಿಸಿ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಗೌರಿಬಿದನೂರು: ಪ್ರಿಯತಮೆಗೆ ಪ್ರಿಯಕರನೇ ವಿಷ ಕುಡಿಸಿ ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ತೊಂಡೇಬಾವಿ ‌ಹೋಬಳಿಯ‌ ಕಮಲಾಪುರದಲ್ಲಿ ನಡೆದಿದೆ.

ರಾಧಾ (17) ಮೃತ ಬಾಲಕಿ. ವೆಂಕಟೇಶ್ (23) ಕೊಲೆ ಆರೋಪಿ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ರಾಧಾಗೆ ಬೇರೆಯವರ ಜೊತೆ ಸಂಬಂಧ ಇದೆ ಎಂದು ವೆಂಕಟೇಶ್‌ ಅನುಮಾನಗೊಂಡಿದ್ದ. ಈ ಆರೋಪವನ್ನು ಒಪ್ಪದ ಯುವತಿ ಎಷ್ಟೇ ಸ್ಪಷ್ಟನೆ ನೀಡಿದರೂ ಆತ ಒಪ್ಪಲಿಲ್ಲ. ಅದನ್ನು ಸಾಬೀತು ಪಡಿಸಲು ಇಬ್ಬರೂ ವಿಷ ಕುಡಿಯೋಣ ಎಂದು ಹೇಳಿ ವೆಂಕಟೇಶ್‌ ಜನವರಿ 6ರಂದು ಯುವತಿಗೆ ವಿಷ ಕುಡಿಸಿದ್ದಾನೆ. ‘ನಾನು‌ ನಿನ್ನೊಂದಿಗೆ ವಿಷ ಸೇವಿಸುತ್ತೇನೆ’ ಎಂದು ನಾಟಕವಾಡಿದ್ದಾನೆ‌.

ವಿಷ ಸೇವಿಸಿದ ರಾಧಾ ಮನೆಗೆ ತೆರಳಿ ಅಸ್ವಸ್ಥಳಾಗಿದ್ದಾಳೆ. ಕೂಡಲೇ ಪೋಷಕರು ರಾಧಾಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಚಿಕಿತ್ಸೆಗೆ ಸ್ಪಂದಿಸದೆ ಯುವತಿ ಜನವರಿ 8ರಂದು ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾಳೆ. ಅವಳನ್ನು ನಂಬಿಸುವ ಸಲುವಾಗಿ ತಾನು‌ ವಿಷ ಸೇವಿಸಿರುವುದಾಗಿ ಪ್ರಿಯಕರ ಹೇಳಿ ಅವಳೊಂದಿಗೆ ಆಸ್ಪತ್ರೆಗೆ ದಾಖಲಾಗಿ, ಮರುದಿನ ಮನೆಗೆ ವಾಪಸಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಧಾಳ ಪೋಷಕರು ‌ನೀಡಿದ ದೂರಿನ ಮೇರೆಗೆ ಮಂಚೇನಹಳ್ಳಿ ಪೋಲೀಸರು ಕಾರ್ಯಾಚರಣೆ ನಡೆಸಿ‌ ಆರೋಪಿ ವೆಂಕಟೇಶ್‌ನನ್ನು ಬಂಧಿಸಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು