ಸೋಮವಾರ, ಜನವರಿ 25, 2021
20 °C

ಸಾಂಸ್ಕೃತಿಕ ಸೌರಭ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂತಾಮಣಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜ. 1ರಂದು ಮಧ್ಯಾಹ್ನ 1ಗಂಟೆಗೆ ತಾಲ್ಲೂಕಿನ ಕೈವಾರದಲ್ಲಿ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್ ತಿಳಿಸಿದ್ದಾರೆ.

ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್. ಜಯರಾಂ ಅಧ್ಯಕ್ಷತೆಯಲ್ಲಿ ಶಾಸಕ ಎಂ. ಕೃಷ್ಣಾರೆಡ್ಡಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕವಿತಾ ಮಂಜುನಾಥ್, ಜಿಲ್ಲಾ ಪಂಚಾಯಿತಿ ಸದಸ್ಯೆ ಎನ್. ಪವಿತ್ರಾ ಚಂದ್ರಶೇಖರ್, ತಾಲ್ಲೂಕು ಪಂಚಾಯಿತಿ ಸದಸ್ಯ ಎಸ್. ನಾಗರಾಜ್, ಸರ್ಕಾರಿ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಂ.ಎನ್. ರಘು ಭಾಗವಹಿಸುತ್ತಾರೆ.

ಗೊಲ್ಲಹಳ್ಳಿ ಶಿವಪ್ರಸಾದ್ ತಂಡದಿಂದ ಜನಪದ ಗಾಯನ, ಮಹಾಲಿಂಗಯ್ಯ ಮಠದ್ ಮತ್ತು ತಂಡದಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, ಕೈವಾರ ರಾಮಣ್ಣ ಮತ್ತು ತಂಡದಿಂದ ತತ್ವಪದಗಳ ಗಾಯನ, ಜಯನಾಟ್ಯ ಕಲಾ ಅಕಾಡೆಮಿಯಿಂದ ಸಮೂಹ ನೃತ್ಯರೂಪಕ, ನಾಡೋಜ ಪ್ರಶಸ್ತಿ ಪುರಸ್ಕೃತ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಮತ್ತು ತಂಡದಿಂದ ತಮಟೆ ವಾದನ, ಜಗಮಕೋಟೆಯ ಎನ್. ಮರಿಯಪ್ಪ ತಂಡದಿಂದ ವೀರಗಾಸೆ, ಎಸ್. ಗೊಲ್ಲಹಳ್ಳಿ ನಾರಾಯಣಪ್ಪ ಮತ್ತು ತಂಡದಿಂದ ಕೀಲು ಕುದುರೆ/ಗಾರುಡಿ ಗೊಂಬೆ, ಮೈಸೂರಿನ ಪಲ್ಲವಿ ಮತ್ತು ಐಶ್ವರ್ಯ ತಂಡದಿಂದ ಪೂಜಾ ಕುಣಿತ ಮತ್ತು ಒನಕೆ ಕುಣಿತವಿದೆ.

ಎ.ಎಲ್. ವೆಂಕಟೇಶಪ್ಪ ಮತ್ತು ತಂಡದಿಂದ ಕಥಾಕೀರ್ತನ, ಬೊಮ್ಮಲಾಟಪುರದ ಶಂಕರಪ್ಪ ಮತ್ತು ತಂಡದಿಂದ ತೊಗಲು ಬೊಂಬೆಯಾಟ, ಬಿಜಾಪುರದ ಶಿವನಗೌಡ ಕೋಟಿ ಮತ್ತು ತಂಡದಿಂದ ಶ್ರೀಕೃಷ್ಣ ಪಾರಿಜಾತ ಕಾರ್ಯಕ್ರಮವಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.