ಗೌರಿಬಿದನೂರು: ಇತಿಹಾಸ ಪರಂಪರೆ ಇರುವ ಕನ್ನಡ ಭಾಷೆ ಬಗ್ಗೆ ತಮಿಳು ನಟ ಕಮಲ್ ಹಾಸನ್ ಅರಿವಿಲ್ಲದೆ, ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತೆ ಮಾತನಾಡಿರುವುದು ಖಂಡನೀಯ ಎಂದು ಕರ್ನಾಟಕ ರಕ್ಷಣಾ ವೇದಿಕೆ ಚಲಪತಿ ಬಣದ ಜಿಲ್ಲಾ ಅಧ್ಯಕ್ಷ ಸುರೇಶ್ ಬಾಬು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾಸೌಧದಲ್ಲಿ ತಹಶೀಲ್ದಾರ್ ಮಹೇಶ್ ಎಸ್.ಪತ್ರಿಗೆ ಮನವಿ ಸಲ್ಲಿಸಿ ಮಾತನಾಡಿ, ಕನ್ನಡ ಭಾಷೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ತಮಿಳು ನಟ ಕಮಲ್ಹಾಸನ್ ರಾಜ್ಯ ವ್ಯಾಪ್ತಿ ವಿರೋಧ ವ್ಯಕ್ತಪಡಿಸುತ್ತಿವೆ. ಅವರು ಕ್ಷಮೆ ಕೇಳುವವರೆಗೂ ಅವರ ಚಿತ್ರವನ್ನು ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ. ಮುಂಬರುವ ದಿನಗಳಲ್ಲಿ ಕನ್ನಡ ನಾಡು-ನುಡಿ ವಿಚಾರವಾಗಿ ಇಂತಹ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಸರ್ಕಾರ ಇದಕ್ಕೆ ಕಠಿಣ ಕಾನೂನು ತರಬೇಕು ಎಂದು ಒತ್ತಾಯ ಮಾಡಿದರು.

ಸಂಘಟನೆ ತಾಲ್ಲೂಕು ಅಧ್ಯಕ್ಷ ಡಾ.ಅದಿಮೂರ್ತಿರೆಡ್ಡಿ ಮಾತನಾಡಿ, ಕನ್ನಡಕ್ಕೆ ತನ್ನದೆ ಆದ ಇತಿಹಾಸ ಪರಂಪರೆ ಇದೆ. ನಮ್ಮ ಭಾಷೆಗೆ ಎರಡು ಸಾವಿರ ಐದುನೂರು ವರ್ಷಗಳ ಭವ್ಯ ಪರಂಪರೆ ಇದೆ. ಇಂತಹ ಭಾಷೆಗೆ ಅರಿವಿಲ್ಲದೆ ತಮಿಳು ಭಾಷೆಯಿಂದ ಕನ್ನಡ ಬಂದಿರುವುದು ಎಂದು ಅವೈಜ್ಞಾನಿಕ ಎಂದು ಬಾಲಿಶ ಹೇಳಿಕೆ ನೀಡಿರುವುದು ಖಂಡನೀಯ ಎಂದು ಕಿಡಿಕಾರಿದರು.

ಸಂಘಟನೆ ಪದಾಧಿಕಾರಿಗಳಾದ ಮಹಿಳಾ ಜಿಲ್ಲಾ ಆಧ್ಯಕ್ಷೆ ಸುಪ್ರಿಯಾ, ರಮಾಮಣಿ, ಸಂದೀಪ್, ವಿನಯ್ ಚಂದ್ರ, ಮಧು, ವೆಂಕಟರೆಡ್ಡಿ, ನರಸಿಂಹಮೂರ್ತಿ, ಬಾಬಣ್ಣ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.