ಗೌರಿಬಿದನೂರು: ದಶಕಗಳ ಹೋರಾಟದ ಫಲವಾಗಿ ಅವಿಭಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ಪ್ರತ್ಯೇಕವಾದ ಬಳಿಕ ತಾಲ್ಲೂಕಿನಲ್ಲಿ ಕೈಗಾರಿಕೆ, ಶಿಕ್ಷಣ, ಸಾಂಸ್ಕೃತಿಕ, ಸಾಮಾಜಿಕ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳು ಕಾರ್ಯಗತವಾಗಿದ್ದು, ಇದರಿಂದ ಗೌರಿಬಿದನೂರು ಹೆಚ್ಚು ಪ್ರಗತಿಯ ಜತೆಗೆ ಪ್ರಚಲಿತದಲ್ಲಿದೆ.

ತಾಲ್ಲೂಕಿನ ಗಡಿಭಾಗವಾದ ಕುಡುಮಲಕುಂಟೆ ಸಮೀಪದಲ್ಲಿ ಸುಮಾರು ಒಂದು ಸಾವಿರ ಎಕರೆ ಭೂ ಪ್ರದೇಶದಲ್ಲಿ ಎರಡು ಹಂತದಲ್ಲಿ ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳು ನಿರ್ಮಾಣವಾಗಿವೆ. ಇದರಿಂದಾಗಿ ತಾಲ್ಲೂಕಿನ ಅನೇಕ ಮಂದಿಗೆ ಉದ್ಯೋಗದ ಅವಕಾಶ ದೊರಕಿದೆ. ಇದರ ಜತೆಯಲ್ಲಿ ತೊಂಡೇಬಾವಿ ಬಳಿ ಎಸಿಸಿ ಸಿಮೆಂಟ್ ಕಾರ್ಖಾನೆ ಹಾಗೂ ಅಲಕಾಪುರದ ಬಳಿ ಸೋಲಾರ್ ಘಟಕ ನಿರ್ಮಾಣವಾಗಿದೆ.

ಶೈಕ್ಷಣಿಕವಾಗಿ ಕ್ಷೇತ್ರವು ಕ್ಷಿಪ್ರಗತಿಯಲ್ಲಿ ಬದಲಾವಣೆ ಕಂಡಿದ್ದು, ಇದಕ್ಕೆ ಸಾಕ್ಷಿಯಾಗಿ ಸರ್ಕಾರಿ ಉಪಕರಣಾಗಾರ ತರಬೇತಿ ಕೇಂದ್ರವು ತಾಲ್ಲೂಕಿನ ಕುಡುಮಲಕುಂಟೆ ಕೈಗಾರಿಕಾ ಪ್ರದೇಶದಲ್ಲಿ ಸುಸಜ್ಜಿತವಾದ ಕಟ್ಟಡ, ಪ್ರಯೋಗ ಶಾಲೆ ಹಾಗೂ ವಿದ್ಯಾರ್ಥಿಗಳಿಗೆ ವಸತಿನಿಲಯ ನಿರ್ಮಾಣವಾಗಿವೆ. ನಗರದಲ್ಲಿ ಜರ್ಮನ್ ತಂತ್ರಜ್ಞಾನ ಆಧಾರಿತ ಮತ್ತೊಂದು ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಕಳೆದ 4 ವರ್ಷಗಳ ಹಿಂದೆ ನಗರದಲ್ಲಿ ಕೇಂದ್ರೀಯ ವಿದ್ಯಾಲಯ ಆರಂಭವಾಗಿದೆ. ಇದರಿಂದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ಮಕ್ಕಳು ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯವಾಗಿದೆ.

ತಾಲ್ಲೂಕಿನ ಗಡಿಭಾಗವಾದ ಕುರೂಡಿ ಅರಣ್ಯ ಪ್ರದೇಶದಲ್ಲಿ ಶಿಕ್ಷಣ ತಜ್ಞ ಎಚ್.ನರಸಿಂಹಯ್ಯ ಅವರ ಹೆಸರಿನಲ್ಲಿ ಸುಮಾರು 16 ಎಕರೆ ಭೂ ಪ್ರದೇಶದಲ್ಲಿ ವಿಜ್ಞಾನ ಕೇಂದ್ರ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಸಾಕಷ್ಟು ವೈಜ್ಞಾನಿಕ ಉಪಕರಣ ಹಾಗೂ ಪಳೆಯುಳಿಕೆ ವಸ್ತುಗಳನ್ನು ಸಂರಕ್ಷಣೆ ಮಾಡಲಾಗಿದೆ. ಇದಕ್ಕೆ ಹೊಂದಿಕೊಂಡಂತೆ ಸುಮಾರು 200 ಎಕರೆ ಪ್ರದೇಶದಲ್ಲಿ ಅಂತರರಾಷ್ಟ್ರೀಯ ವಿಜ್ಞಾನ ಕೇಂದ್ರ ಸ್ಥಾಪಿಸಲು ಸರ್ಕಾರ ಕಳೆದ ಬಜೆಟ್ನಲ್ಲಿಅನುಮೋದನೆ ನೀಡಿದೆ.

ಪುರಸಭೆಯಾಗಿದ್ದ ನಗರ ಆಡಳಿತವು ನಗರಸಭೆಯಾಗಿ ಮೇಲ್ದರ್ಜೆಗೆ ಏರಿದೆ. ತಾಲ್ಲೂಕು ಆಡಳಿತದ ಕಾರ್ಯವೈಖರಿ ಚುರುಕುಗೊಳಿಸುವ ನಿಟ್ಟಿನಲ್ಲಿ ನಗರದ ಹೊರವಲಯದಲ್ಲಿ ಮಿನಿವಿಧಾನಸೌಧ ನಿರ್ಮಾಣವಾಗಿದೆ. ಇದರಿಂದಾಗಿ ಬಾಡಿಗೆ ಕಟ್ಟಡಗಳಲ್ಲಿ ಕಚೇರಿ ಹೊಂದಿದ್ದವರು ಇದೀಗ ಒಂದೆ ಸೂರಿನಡಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ. ನಗರದ ಹೃದಯಭಾಗದಲ್ಲಿ ಡಾ.ಎಚ್.ಎನ್ ಕಲಾಮಂದಿರವನ್ನು ನಿರ್ಮಾಣ ಮಾಡಿ ಈ ಭಾಗದಲ್ಲಿ ಕಲೆ, ಸಾಹಿತ್ಯ, ರಂಗಭೂಮಿ ಸೇರಿದಂತೆ ಇತರ ಪ್ರತಿಭೆ ಅನಾವರಣಕ್ಕೆ ಸಾಕ್ಷಿಯಾಗಿದೆ.

ಕೋಟಾಲದಿನ್ನೆಯಲ್ಲಿ ಭೂಕಂಪನದ ತೀವ್ರತೆ ಅಳೆಯುವ ಬಿಎಆರ್ಸಿ ಕೇಂದ್ರ, ಹೊಸೂರಿನಲ್ಲಿ ವೈಜ್ಞಾನಿಕ ಉಪಕರಣಗಳನ್ನೊಳಗೊಂಡ ಇನ್ಫೋಸಿಸ್ ಕೇಂದ್ರ, ವಿದುರಾಶ್ವತ್ಥದಲ್ಲಿ ಹುತಾತ್ಮರಾದಸ್ವಾತಂತ್ರ್ಯ ಯೋಧರ ಸ್ಥೂಪ ಹಾಗೂ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ನೆನಪುಗಳನ್ನು ನೀಡುವಂತಹ ಫೋಟೊ ಗ್ಯಾಲರಿಯನ್ನೊಳಗೊಂಡ ವೀರಸೌಧ ನಿರ್ಮಾಣವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.