‘ಹಿಗ್ಗಿನ್ಸ್ ಭಾಗವತರ್ ಹೆಸರು ಕೇಳಿದ್ದೀರಾ?’ ಮಡದಿ ಕೇಳಿದಳು.

‘ಅವರ ಕಛೇರೀನೂ ಕೇಳಿದ್ದೀನಿ. ಎಷ್ಟು ಚೆನ್ನಾಗಿ ದಾಸರ ಕೃತಿಗಳನ್ನು ಹಾಡ್ತಿದ್ದರು’ ಎಂದು ನೆನಪು ಮಾಡಿಕೊಂಡೆ.

‘ಅವರು ಕ್ರಿಶ್ಚಿಯನ್ ಅಲ್ವಾ?’

‘ಹೌದು ಅಮೆರಿಕದವರು. ಇಲ್ಲಿ ಬಂದು ಸಂಗೀತ ಕಲಿತರು. ನಮ್ಮ ಯೇಸುದಾಸ್? ಅವರೂ ಕ್ರಿಶ್ಚಿಯನ್. ವಾತಾಪಿ ಗಣಪತಿ ಭಜೆ ಸೊಗಸಾಗಿ ಹಾಡ್ತಾರೆ. ಅಯ್ಯಪ್ಪ ಭಜನೆ ಮಾಡ್ತಾರೆ’.

‘ಯಾರೂ ಆಕ್ಷೇಪಿಸೊಲ್ಲವೆ?’

‘ಆಕ್ಷೇಪಣೆ ಯಾಕೆ? ಖುಷಿಯಿಂದ ಕೇಳ್ತಾರೆ ಜನ’.

‘ಮತ್ತೆ ಬಿಸ್ಮಿಲ್ಲಾ ಖಾನ್?’

‘ಮುಸ್ಲಿಮರಾದರೂ ಪ್ರತಿ ದಿನ ಗಂಗಾ ತೀರದಲ್ಲಿ ಕೂತು ಷೆಹನಾಯ್ ನುಡಿಸ್ತಿದ್ದರಂತೆ. ಅಮೆರಿಕದಲ್ಲಿರುವ ಒಬ್ಬ ಶ್ರೀಮಂತ ಭಾರತೀಯ ಅವರಿಗೆ, ನೀವು ನಮ್ಮೂರಿಗೆ ಬನ್ನಿ, ದೊಡ್ಡ ಬಂಗಲೆ ಕೊಡ್ತೀನಿ, ಅಲ್ಲಿ ಆರಾಮವಾಗಿ ವಾದ್ಯ ನುಡಿಸಿ ಎಂದಾಗ ಅವರು, ಗಂಗಾ ನದೀನೂ ಅಲ್ಲಿಗೆ ತರ್ತೀಯಾ? ಎಂದು ಕೇಳಿದರಂತೆ’.

‘ವ್ಹಾ! ಕ್ಯಾ ಬಾತ್ ಹೈ. ಮೊನ್ನೆ ಪರ್ವೀನ್ ಸುಲ್ತಾನ್ ಚಾಮುಂಡೇಶ್ವರಿ ಸ್ತುತಿ ಹಾಡಿದ್ದನ್ನು ಕೇಳಿದೆ ಯೂಟ್ಯೂಬಿನಲ್ಲಿ’.

‘ವಿಲಾಯತ್ ಖಾನ್, ಷೇಖ್ ಚಿನ್ನಾ ಮೌಲಾ ಸಾಬ್, ರಶೀದ್ ಖಾನ್ ಹೀಗೆ ಅನೇಕರಿಗೆ ಧರ್ಮ ಅಡ್ಡಿ ಮಾಡೇ ಇಲ್ಲ ಸಂಗೀತ ಕಲಿಯೋದಕ್ಕೆ. ಬೇರೆ ಧರ್ಮಕ್ಕೆ ಸೇರಿದ ಗೀತೆಗಳನ್ನು ಹಾಡೋದಿಕ್ಕೆ’.

‘ಮಹಮದ್ ರಫಿ ನೋಡ್ರೀ ಹೇಗೆ ಹಾಡಿದ್ದಾರೆ ಮನ ತಡಪದ್ ಹರಿ ದರ್ಶನ್ಕೆ ಲಿಯೆ ಹಾಡನ್ನ? ಮೊನ್ನೆ ಕಾಶ್ಮೀರದ ಗಾಯಕರೊಬ್ಬರು ಭಾಗ್ಯದ ಲಕ್ಷ್ಮೀ ಬಾರಮ್ಮ ಸುಶ್ರಾವ್ಯವಾಗಿ ಹಾಡಿದರಂತೆ. ದುಬಾಯಿಯಲ್ಲಿ ಕೃಷ್ಣನ ಬಗ್ಗೆ ಆಡಿಯೊ ವಿಷುಯಲ್ ಶೋ ಅದ್ಭುತವಾಗಿ ಮೂಡಿ ಬಂದು, ಅನೇಕ ಅರಬ್ಬರು ಖುಷಿಯಿಂದ ಚಪ್ಪಾಳೆ ತಟ್ಟಿದರಂತೆ. ಅದು ಸರಿ, ಈಗ್ಯಾಕೆ ಇದೆಲ್ಲ...’

‘ಬಾನು ಮೇಡಂ ದಸರಾ ಟೇಪ್ ಕತ್ತರಿಸ್ತಾರೆ ಎಂದಿದ್ದಕ್ಕೆ ಎಷ್ಟೆಲ್ಲಾ ಕೂಗಾಡ್ತಿದಾರಲ್ಲ ಕೆಲವರು, ಅದಕ್ಕೆ...’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.