ಬೆಂಗಳೂರು: ದಕ್ಷಿಣ ವಲಯ ಮತ್ತು ಉತ್ತರ ವಲಯ ತಂಡಗಳ ನಡುವಣ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಈಗ ಕುತೂಹಲಕಾರಿ ಘಟ್ಟ ತಲುಪಿದೆ. ಉಭಯ ತಂಡಗಳಲ್ಲಿ ಯಾರು ‘ಮೊದಲ ಇನಿಂಗ್ಸ್’ ಮುನ್ನಡೆ ಗಳಿಸಲಿದ್ದಾರೆ ಎಂಬುದೇ ಈಗ ಕುತೂಹಲದ ಕೇಂದ್ರಬಿಂದು.

ನಗರದ ಹೊರವಲಯದಲ್ಲಿರುವ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲೆರಡೂ ದಿನ ಬ್ಯಾಟಿಂಗ್ ಮಾಡಿದ್ದ ದಕ್ಷಿಣ ವಲಯ ಪ್ರಥಮ ಇನಿಂಗ್ಸ್ನಲ್ಲಿ 536 ರನ್ ಗಳಿಸಿತ್ತು. ಶನಿವಾರ ಇನಿಂಗ್ಸ್ ಆರಂಭಿಸಿದ ಉತ್ತರ ವಲಯ 79 ಓವರ್ಗಳಲ್ಲಿ 5 ವಿಕೆಟ್ಗಳಿಗೆ 278 ರನ್ ಗಳಿಸಿದ್ದು, ಇನಿಂಗ್ಸ್ ಮುನ್ನಡೆ ಪಡೆಯಲು ಇನ್ನೂ 259 ರನ್ಗಳ ಅಗತ್ಯವಿದೆ. ಪಂದ್ಯದಲ್ಲಿ ಇನ್ನೊಂದು ದಿನದ ಆಟ ಮಾತ್ರ ಬಾಕಿಯಿದೆ. ಉತ್ತರ ವಲಯವು ಲೆಕ್ಕ ಚುಕ್ತಾ ಮಾಡುವ ಮುನ್ನವೇ ದಕ್ಷಿಣ ವಲಯವು ಇನ್ನೈದು ವಿಕೆಟ್ ಗಳಿಸಿದರೆ ಮುನ್ನಡೆ ಸಾಧಿಸಿ ಫೈನಲ್ ತಲುಪಬಹುದು.

ಪಂದ್ಯವು ಈ ರೋಚಕ ಘಟ್ಟ ತಲುಪಲು ಪ್ರಮುಖ ಕಾರಣರಾಗಿದ್ದು ಉತ್ತರ ವಲಯದ ಆರಂಭಿಕ ಬ್ಯಾಟರ್ ಶುಭಂ ಖಜೂರಿಯಾ (ಬ್ಯಾಟಂಗ್ 128; 245ಎ, 4X20, 6X1) ಅವರ ಶತಕ. ಅವರೊಂದಿಗೆ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 171 ರನ್ ಸೇರಲು ಕಾರಣರಾದ ನಿಶಾಂತ್ ಸಿಂಧು (82; 148ಎ, 4X9, 6X1) ಕೂಡ ತಂಡಕ್ಕೆ ಆಸರೆಯಾದರು. ಇವರಿಬ್ಬರ ಆಟದಿಂದಾಗಿ ಉತ್ತರ ವಲಯ ತಂಡವು ಆರಂಭಿಕ ಆಘಾತದಿಂದ (38ಕ್ಕೆ2) ಚೇತರಿಸಿಕೊಂಡಿತು. ದಕ್ಷಿಣ ವಲಯದ ವೇಗಿ ಗುರ್ಜಪನೀತ್ (67ಕ್ಕೆ3) ಅವರ ದಾಳಿಗೆ ಸಿಲುಕಿದ ತಂಡಕ್ಕೆ ಶುಭಂ ಮತ್ತು ನಿಶಾಂತ್ ಆಸರೆಯಾದರು.

ಶುಕ್ರವಾರ ದಿನದಾಟ ಸ್ಥಗಿತವಾಗುವ ಮುನ್ನ ದಕ್ಷಿಣ ವಲಯವು ಆಲೌಟ್ ಆಗಿತ್ತು. ಮೂರನೇ ದಿನ ಬೆಳಿಗ್ಗೆ ಗುರ್ಜಪನೀತ್ ಹಾಕಿದ ಆರನೇ ಓವರ್ನಲ್ಲಿ ಉತ್ತರ ವಲಯದ ಆರಂಭಿಕ ಬ್ಯಾಟರ್ ಅಂಕಿತ್ ಕುಮಾರ್ (6 ) ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. ಯಶ್ ಧುಳ್ (14; 13ಎ) ಅವರನ್ನೂ ಗುರ್ಜಪನೀತ್ ಕ್ಲೀನ್ಬೌಲ್ಡ್ ಮಾಡಿದರು.

ಶುಭಂ ಆಟ: ಕಳೆದ ರಣಜಿ ಋತುವಿನಲ್ಲಿ ಉತ್ತಮವಾಗಿ ಆಡಿದ್ದ ಶುಭಂ ಇಲ್ಲಿ ಎರಡು ಮಹತ್ವದ ಜೊತೆಯಾಟಗಳಲ್ಲಿ ಭಾಗಿಯಾದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ ಆಯುಷ್ ಬಡೋನಿ ಜೊತೆಗೆ 63 ರನ್ ಸೇರಿಸಿದರು. ಭೋಜನ ವಿರಾಮಕ್ಕೂ ಸ್ವಲ್ಪ ಮುನ್ನ ಮಧ್ಯಮವೇಗಿ ನಿಧೀಶ್ ಎಸೆತದಲ್ಲಿ ಆಯುಷ್ (40; 57ಎ) ಎಲ್ಬಿಡಬ್ಲ್ಯು ಬಲೆಗೆ ಬಿದ್ದರು.

ಕ್ರೀಸ್ಗೆ ಬಂದ ನಿಶಾಂತ್ ಅವರು ಶುಭಂ ಜೊತೆಗೂಡಿ ಬೌಲರ್ಗಳನ್ನು ಕಾಡಿದರು. ಶುಭಂ ಚೆಂದದ ಕವರ್ಡ್ರೈವ್ಗಳನ್ನು ಆಡಿದರು. ನಿಖರ ಕಟ್ಗಳ ಮೂಲಕ ಫೀಲ್ಡರ್ಗಳನ್ನು ವಂಚಿಸಿ ಬೌಂಡರಿ ಗಳಿಸಿದರು. ಎಡಗೈ ಬ್ಯಾಟರ್ ನಿಶಾಂತ್ ಕೂಡ ಬೌಲರ್ಗಳಿಗೆ ಬಿಸಿ ಮುಟ್ಟಿಸಿದರು. ಇದರಿಂದಾಗಿ ಎರಡನೇ ಅವಧಿಯಲ್ಲಿ 98 ರನ್ಗಳು ಸೇರಿದವು.

ಮಧ್ಯಾಹ್ನ 3.25ರ ಸುಮಾರಿಗೆ ಮಳೆ ಆರಂಭವಾಯಿತು. 45 ನಿಮಿಷ ಆಟ ಸ್ಥಗಿತವಾಯಿತು. ಆಗ ಶುಭಂ 97 ರನ್ ಗಳಿಸಿದ್ದರು. ಆಟ ಮತ್ತೆ ಮುಂದುವರಿದ ಮೇಲೆ ಬೌಂಡರಿ ಹೊಡೆದ ಶುಭಂ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಎಂಟನೇ ಶತಕ ದಾಖಲಿಸಿದರು. ಇನ್ನೊಂದು ಬದಿಯಲ್ಲಿ ಶತಕದತ್ತ ದಾಪುಗಾಲಿಟ್ಟಿದ್ದ ನಿಶಾಂತ್ ಅವರ ವಿಕೆಟ್ ಪಡೆಯುವಲ್ಲಿ ಗುರ್ಜನ್ಪ್ರೀತ್ ಯಶಸ್ವಿಯಾದರು. ಕೆಲನಿಮಿಷಗಳ ನಂತರ ಫೀಲ್ಡರ್ ಮೊಹಮ್ಮದ್ ಅಜರುದ್ದೀನ್ ಅವರ ಚುರುಕಾದ ಥ್ರೋಗೆ ಕನ್ಯಯಾ ವಾಧ್ವಾನ್ ರನ್ಔಟ್ ಆದರು.

ಸಲ್ಮಾನ್ ನಿಜಾರ್ಗೆ ಗಾಯ

ದಕ್ಷಿಣ ವಲಯದ ಸಲ್ಮಾನ್ ನಿಜಾರ್ ಅವರು ಫೀಲ್ಡಿಂಗ್ ಮಾಡುವಾಗ ಚೆಂಡು ಬಡಿದು ಗಾಯಗೊಂಡರು.

ಉತ್ತರ ವಲಯದ ಬ್ಯಾಟರ್ ಆಯುಷ್ ಬಡೋಣಿ ಹೊಡೆದ ಚೆಂಡು ಸಿಲ್ಲಿ ಪಾಯಿಂಟ್ನಲ್ಲಿದ್ದ ಸಲ್ಮಾನ್ ಬಲಪಾದಕ್ಕೆ ಅಪ್ಪಳಿಸಿತು. ಯಾತನೆ ಅನುಭವಿಸಿದ ಸಲ್ಮಾನ್ ಅವರಿಗೆ ತಂಡದ ಫಿಸಿಯೊ ಧಾವಿಸಿ ಪ್ರಥಮ ಚಿಕಿತ್ಸೆ ನೀಡಿದರು. ನೋವು ಶಮನವಾಗದ ಕಾರಣ ಅವರನ್ನು ಮೈದಾನದಿಂದ ಹೊರಕರೆತರಬೇಕಾಯಿತು.

ಆದರೆ, ಈ ವೇಳೆ ಮೈದಾನದಲ್ಲಿ ನಿಯೋಜಿಸಲಾಗಿದ್ದ ಅಂಬುಲೆನ್ಸ್ ಸಿಬ್ಬಂದಿಯಿಂದ ಸ್ಟ್ರೆಚರ್ ಸೇವೆ ಲಭ್ಯವಾಗಲಿಲ್ಲ. ಹೀಗಾಗಿ ತಂಡದ ಇಬ್ಬರು ಸಹ ಆಟಗಾರರು ಸಲ್ಮಾನ್ ಅವರನ್ನು ಎತ್ತಿಕೊಂಡು ಡಗ್ಔಟ್ಗೆ ಕರೆತಂದರು. ನಂತರ ಅಂಬುಲೆನ್ಸ್ನಲ್ಲಿ ಸ್ಕ್ಯಾನಿಂಗ್ಗೆ ಕರೆದೊಯ್ಯಲಾಯಿತು.

ಕೇಂದ್ರ ವಲಯಕ್ಕೆ ಮುನ್ನಡೆ

ಬಿಸಿಸಿಐ ಸಿಒಇ ಎರಡನೇ ಮೈದಾನದಲ್ಲಿ ನಡೆಯುತ್ತಿರುವ ಇನ್ನೊಂದು ಸೆಮಿಫೈನಲ್ನಲ್ಲಿ ಕೇಂದ್ರ ವಲಯ ತಂಡವು ಮೊದಲ ಇನಿಂಗ್ಸ್ನಲ್ಲಿ 118 ರನ್ಗಳ ಮುನ್ನಡೆ ಸಾಧಿಸಿದೆ.

ಪಶ್ಚಿಮ ವಲಯವು ಮೊದಲು ಬ್ಯಾಟಿಂಗ್ ಮಾಡಿ 438 ರನ್ ಗಳಿಸಿತ್ತು. ಅದಕ್ಕುತ್ತರವಾಗಿ ಕೇಂದ್ರವು ಮೂರನೇ ದಿನದಾಟದ ಕೊನೆಗೆ 157 ಓವರ್ಗಳಲ್ಲಿ 8 ವಿಕೆಟ್ಗಳಿಗೆ 556 ರನ್ ಗಳಿಸಿತು. ತಂಡದ ಶುಭಂ ಶರ್ಮಾ (96; 241ಎ, 4X11) ನಾಲ್ಕು ರನ್ ಅಂತರದಲ್ಲಿಶತಕ ತಪ್ಪಿಸಿಕೊಂಡರು.

ನಾಯಕ ರಜತ್ ಪಾಟೀದಾರ್ (77; 84ಎ), ಉಮೇಂದ್ರ ಯಾದವ್ (87; 181ಎ) ಹಾಗೂ ಹರ್ಷ್ ದುಬೆ (75; 93ಎ) ಉಪಯುಕ್ತ ಕಾಣಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.