ಚಿಕ್ಕಬಳ್ಳಾಪುರ: ‘ಇ–ಖಾತೆ’ ಅಭಿಯಾನದ ವಿಚಾರವಾಗಿ ಚಿಕ್ಕಬಳ್ಳಾಪುರ ನಗರಸಭೆಯ ಅಧ್ವಾನಗಳ ಬಗ್ಗೆ ನಾಗರಿಕರು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಆಕ್ರೋಶದ ಬರಹಗಳು, ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

ಈ ಅಧ್ವಾನಗಳು ನಿಜ ಎನ್ನುತ್ತವೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಮಾಧವಿ ಅವರ ಪ್ರಾಥಮಿಕ ತನಿಖಾ ವರದಿ. ‘ಇ–ಖಾತೆ’ ವಿಚಾರವಾಗಿ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಯಾವ ಯಾವ ಅಧ್ವಾನಗಳು ಆಗಿವೆ ಎನ್ನುವುದನ್ನು ಯೋಜನಾ ನಿರ್ದೇಶಕರು ಪಟ್ಟಿ ಮಾಡಿ ಪೌರಾಯುಕ್ತರಿಗೂ ಮಾಹಿತಿ ನೀಡಿದ್ದಾರೆ.

ನಗರಸಭೆಯಲ್ಲಿ ಇ–ಖಾತೆ ಅಭಿಯಾನದಲ್ಲಿ ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ಸಕಾಲ ಯೋಜನೆಯಡಿ ದಾಖಲಿಸಿಕೊಳ್ಳದೆ ಹಾಗೂ ಅರ್ಜಿಗಳ ಜೇಷ್ಠತೆ ಪರಿಶೀಲಿಸದೆ ಇ ಸ್ವತ್ತು ನೀಡಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳು ಪ್ರಸಾರವಾಗಿದ್ದವು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಚಿಕ್ಕಬಳ್ಳಾಪುರ ನಗರಸಭೆಗೆ ಯೋಜನಾ ನಿರ್ದೇಶಕರು ಭೇಟಿ ನೀಡಿದ್ದರು. ತನಿಖೆ ನಡೆಸಿದ್ದರು. ಈ ವೇಳೆ ದೊಡ್ಡ ಪ್ರಮಾಣದಲ್ಲಿಯೇ ನ್ಯೂನತೆಗಳು ಕಂಡು ಬಂದಿವೆ.

ಸಕಾಲ ಯೋಜನೆಯಲ್ಲಿ ಅರ್ಜಿಗಳನ್ನು ಸ್ವೀಕರಿಸಲು ಯಾವುದೇ ನೌಕರರನ್ನು ಅಧಿಕೃತಗೊಳಿಸಿಲ್ಲ. ಅರ್ಜಿಗಳನ್ನು ಭೌತಿಕವಾಗಿ ಸ್ವೀಕರಿಸಲಾಗುತ್ತಿದೆ. ಕರವಸೂಲಿಗಾರರು, ಕಂದಾಯ ನಿರೀಕ್ಷಕರು, ಕಂದಾಯ ಅಧಿಕಾರಿಗಳು ಹಾಗೂ ಪೌರಾಯುಕ್ತರು ಕಡತಗಳನ್ನು ಇ–ಆಸ್ತಿ ತಂತ್ರಾಂಶದಲ್ಲಿ ನಿರ್ವಹಿಸದೆ ಭೌತಿಕವಾಗಿ ನಿರ್ವಹಿಸುತ್ತಿದ್ದಾರೆ. ಕಡತದಲ್ಲಿ ಪೌರಾಯುಕ್ತರ ಆದೇಶವಾದ ನಂತರದಲ್ಲಿ ಇ–ಆಸ್ತಿ ತಂತ್ರಾಂಶದಲ್ಲಿ ಅಳವಡಿಸಿ ಇ–ಸ್ವತ್ತು ನೀಡಲಾಗುತ್ತಿದೆ.

ಕಡತಗಳನ್ನು ಕ್ರಮ ಬದ್ಧವಾಗಿ ನಿರ್ವಹಿಸದೆ ರಾಶಿ ರಾಶಿಯಾಗಿ ನೆಲದಲ್ಲಿ ಹರಡಿರುವುದು ಕಂಡು ಬಂದಿರುತ್ತದೆ. ಇದರಿಂದ ಕಡತಗಳು ಕಾಣೆಯಾಗುವ, ಹಾಳಾಗುವ ಸಾಧ್ಯತೆ ಇದೆ.

ಅನೇಕ ಕಡತಗಳು ದೀರ್ಘಾವಧಿಯಿಂದ (ಇ–ಆಸ್ತಿ ಅಭಿಯಾನದ ಪೂರ್ವದಲ್ಲಿ) ಬಾಕಿ ಇವೆ. ಇವುಗಳನ್ನು ವಿಲೇಗೊಳಿಸಿಲ್ಲ. ಇದರಿಂದ ಅನವಶ್ಯವಾಗಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದು ಯೋಜನಾ ನಿರ್ದೇಶಕಿ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅನೇಕ ಸಿಬ್ಬಂದಿಯು ಕಚೇರಿಯಲ್ಲಿ ಇಲ್ಲ. ಈ ಬಗ್ಗೆ ವಿಚಾರಿಸಿದರೆ ಬಾಹ್ಯ ಕಾರ್ಯಗಳಿಗೆ ಹೋಗಿರುವುದಾಗಿ ತಿಳಿಸಿದರು. ಆದರೆ ಈ ಬಗ್ಗೆ ಚಲನವಲನ ವಹಿ ಸಹ ನಿರ್ವಹಿಸಿಲ್ಲ. ಸಾರ್ವಜನಿಕ ಕುಂದುಕೊರತೆಗಳ ಬಗ್ಗೆ ದೂರುಗಳ ವಹಿ ನಿರ್ವಹಿಸಿಲ್ಲ. ಕಾರ್ಯನಿರ್ವಾಹಕ ಸಿಬ್ಬಂದಿಯು ದಿನಚರಿ ನಿರ್ವಹಿಸಿರುವುದು ಕಂಡು ಬಂದಿಲ್ಲ. ಸಾರ್ವಜನಿಕರು ನೀಡಿರುವ ಅರ್ಜಿಗಳಿಗೆ ಸ್ವೀಕೃತಿಯನ್ನು ದ್ವಿ ಪ್ರತಿಯಲ್ಲಿ ನಿರ್ವಹಿಸಿಲ್ಲ ಎಂದು ತನಿಖಾ ವರದಿಯಲ್ಲಿ ನಗರಸಭೆಯ ಲೋಪಗಳನ್ನು ಪಟ್ಟಿ ಮಾಡಿದ್ದಾರೆ.

ಅಧಿಕಾರಿ, ಸಿಬ್ಬಂದಿಗೆ ಸೂಚನೆ: ಅಲ್ಲದೆ ಇ–ಖಾತೆ ಅಭಿಯಾನದಲ್ಲಿ ಸ್ವೀಕೃತವಾದ ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ವಿಲೇ ಮಾಡಲು ಕೆಲವು ಕ್ರಮಗಳನ್ನು ಅನುಸರಿಸುವಂತೆಯೂ ಅವರು ಸೂಚಿಸಿದ್ದಾರೆ.

ರಾಶಿಯಾಗಿ ಹರಡಿರುವ ಕಡತಗಳನ್ನು 50 ಅರ್ಜಿಗಳಿಗೆ ಒಂದು ಕಂತೆ ಮಾಡಿ ಭದ್ರಪಡಿಸಬೇಕು. ಜೇಷ್ಠತೆ ಆಧಾರದಲ್ಲಿ ಅರ್ಜಿ ವಿಲೇವಾರಿ ಮಾಡಬೇಕು. ಇ–ಖಾತೆ ಅಭಿಯಾನದಲ್ಲಿ ಸ್ವೀಕರಿಸಿರುವ 1,474 ಅರ್ಜಿಗಳು ಬಾಕಿ ಇವೆ. ಇವುಗಳನ್ನು ಕೂಡಲೇ ಪರಿಶೀಲಿಸಿ ನಿಯಮಬದ್ಧವಾಗಿದ್ದಲ್ಲಿ ಇ–ಸ್ವತ್ತು ಮಾಡಿಕೊಡಬೇಕು. ನಿಯಮ ಬದ್ಧವಾಗಿಲ್ಲದಿದ್ದರೆ ಸೂಕ್ತ ಹಿಂಬರಹ ನೀಡಿ ಅರ್ಜಿ ವಿಲೇ ಮಾಡಬೇಕು. ಸಾರ್ವಜನಿಕರು ಸಲ್ಲಿಸುವ ದಾಖಲೆಗಳು ನಕಲಿಯಾಗದ ರೀತಿ ಜಾಗರೂಕತೆವಹಿಸಿ ಪರಿಶೀಲಿಸಬೇಕು ಎಂದು ನಿರ್ದೇಶನಗಳನ್ನು ಸಹ ನೀಡಿದ್ದಾರೆ.

ಶಿಸ್ತು ಕ್ರಮಕ್ಕೆ ಶಿಫಾರಸ್ಸಿನ ಎಚ್ಚರಿಕೆ

ಸಕಾಲ ಯೋಜನೆಯಲ್ಲಿ ಅರ್ಜಿ ಸ್ವೀಕರಿಸಲು ಒಬ್ಬ ಸಿಬ್ಬಂದಿ ನೇಮಿಸಬೇಕು. ಸಕಾಲ ಯೋಜನೆಯ ಅರ್ಜಿಗಳನ್ನು ಸ್ವೀಕರಿಸಿ ನೋಂದಾಯಿಸಬೇಕು. ಇ–ಆಸ್ತಿ ಭೌತಿಕ ಕಡತಗಳನ್ನು ನಿರ್ವಹಿಸಬಾರದು. ಆನ್ಲೈನ್ ತಂತ್ರಾಂಶದಲ್ಲಿಯೇ ಕಡತಗಳನ್ನು ನಿರ್ವಹಿಸಬೇಕು.

ಅರ್ಜಿ ಹಾಗೂ ದಾಖಲೆಗಳನ್ನು ಆನ್ಲೈನ್ ತಂತ್ರಾಂಶದಲ್ಲಿ ದಾಖಲಿಸಿದ ನಂತರ ಕರವಸೂಲಿಗಾರರು, ಕಂದಾಯ ನಿರೀಕ್ಷಕರು, ಕಂದಾಯ ಅಧಿಕಾರಿ ಹಾಗೂ ಪೌರಾಯುಕ್ತರು ಇ–ಆಸ್ತಿ ತಂತ್ರಾಂಶದಲ್ಲಿಯೇ ಕಡತವನ್ನು ಅನುಮೋದನೆಗಾಗಿ ಸಲ್ಲಿಸಬೇಕು.
ಯಾವುದೇ ಕಾರಣಕ್ಕೂ ಭೌತಿಕ ಕಡತಗಳನ್ನು ನಿರ್ವಹಿಸಲು ಅವಕಾಶವಿಲ್ಲ. ಈ ರೀತಿಯಲ್ಲಿ ನಿರ್ವಹಿಸುವುದು ಕಂಡು ಬಂದಲ್ಲಿ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಯೋಜನಾ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.

ಕಾಣೆಯಾಗಿವೆ ಅರ್ಜಿಗಳು!

ನಗರಸಭೆಗೆ ಯೋಜನಾ ನಿರ್ದೇಶಕರು ಭೇಟಿ ನೀಡಿದ ವೇಳೆ ಸಾರ್ವಜನಿಕರು ತಮಗೆ ಆಗುತ್ತಿರುವ ಅನನುಕೂಲಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

ಇ–ಆಸ್ತಿ ಅಭಿಯಾನದ ಪೂರ್ವದಲ್ಲಿ ಹಲವು ತಿಂಗಳಿಂದ ಅರ್ಜಿಗಳು ಬಾಕಿ ಇವೆ. ಈ ಪೈಕಿ ಹಲವು ಅರ್ಜಿಗಳು ಕಾಣೆಯಾಗಿವೆ. ಆದರೆ ನಗರಸಭೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ.

ಬಾಕಿ ಇರುವ ಅರ್ಜಿಗಳನ್ನು ಕೂಡಲೇ ಪರಿಶೀಲಿಸಿ ನಿಯಮಬದ್ಧವಾಗಿ ಇ–ಆಸ್ತಿ ಮಾಡಿಕೊಡಬೇಕು. ನಿಯಮಬದ್ಧವಾಗಿ ಇಲ್ಲದಿದ್ದರೆ ಸೂಕ್ತ ಹಿಂಬರಹ ನೀಡಿ ಬಾಕಿ ಇರುವ ಎಲ್ಲ ಕಡತಗಳನ್ನು 15 ದಿನಗಳ ಒಳಗೆ ವಿಲೇವಾರಿಗೊಳಿಬೇಕು ಎಂದು ಯೋಜನಾ ನಿರ್ದೇಶಕರು ಸೂಚಿಸಿದ್ದಾರೆ.

13,496 ಸ್ವತ್ತು; ಅರ್ಜಿಯೇ ಸಲ್ಲಿಕೆ ಇಲ್ಲ

ಸಾರ್ವಜನಿಕರು ನೀಡಿರುವ ಅರ್ಜಿಗಳಿಗೆ ಸ್ವೀಕೃತಿಯನ್ನು ದ್ವಿಪ್ರತಿಯಲ್ಲಿ ನಿರ್ವಹಿಸಬೇಕು. ಅಧಿಕೃತ ಸ್ವತ್ತುಗಳ 7,547 ಮತ್ತು ಅನಧಿಕೃತ ಸ್ವತ್ತುಗಳ 5,949 ಸೇರಿದಂತೆ ಒಟ್ಟು 13,496 ಸ್ವತ್ತುಗಳಿಗೆ ಮಾಲೀಕರು ಇದುವರೆಗೂ ಅರ್ಜಿ ಸಲ್ಲಿಸಿಲ್ಲ. ಆ ಸ್ಥಳಗಳಿಗೆ ಭೇಟಿ ನೀಡಿ ಆಸ್ತಿ ಮಾಲೀಕರಿಂದ ಅರ್ಜಿಗಳನ್ನು ಪಡೆದು ಇ–ಸ್ವತ್ತು ಮಾಡಿಕೊಡಲು ಕ್ರಮವಹಿಸಬೇಕು ಎಂದು ವರದಿಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.