ಸ್ಟುಡಿಯೊದಲ್ಲಿ ಎಂಟು ಕ್ಯಾಮೆರಾ ಕಳ್ಳತನ

ಚಿಕ್ಕಬಳ್ಳಾಪುರ: ನಗರದ ಬಿ.ಬಿ.ರಸ್ತೆಯ ಧನಲಕ್ಷ್ಮಿ ಬಿಲ್ಡಿಂಗ್‌ನಲ್ಲಿ ಸೋಮವಾರ ರಾತ್ರಿ ಕಳ್ಳರು ಪ್ರೀತಿ ಡಿಜಿಟಲ್ ಸ್ಟುಡಿಯೊ ಬೀಗ ಮುರಿದು ₹4.20 ಲಕ್ಷ ಮೌಲ್ಯದ ಎಂಟು ಕ್ಯಾಮೆರಾಗಳು ಸೇರಿದಂತೆ ವಿವಿಧ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ.
ಸ್ಟುಡಿಯೊ ತಾಲ್ಲೂಕಿನ ತಿಮ್ಮನಹಳ್ಳಿ ನಿವಾಸಿ ನರಸಿಂಹಮೂರ್ತಿ ಎಂಬುವರಿಗೆ ಸೇರಿದೆ. ನರಸಿಂಹಮೂರ್ತಿ ಅವರ ಬಾಮೈದ ಮಂಗಳವಾರ ಬೆಳಿಗ್ಗೆ ಸ್ಟುಡಿಯೊ ತೆರೆಯಲು ಬಂದಾಗ ಘಟನೆ ಬೆಳಕಿಗೆ ಬಂದಿದೆ.
‘ಕಳ್ಳರು ಸ್ಟುಡಿಯೊದಲ್ಲಿ ಎಂಟು ಕ್ಯಾಮೆರಾಗಳು, ಕಂಪ್ಯೂಟರ್ ಹಾರ್ಡ್‌ಡಿಸ್ಕ್, ಮಿಕ್ಸಿಂಗ್ ಯೂನಿಟ್ ಕದ್ದು ಒಯ್ಯುವ ಜತೆಗೆ ವೈರ್‌ಗಳನ್ನು ಮತ್ತು ಸ್ಕ್ರೀನ್ ಬಟ್ಟೆಗಳನ್ನು ಕತ್ತರಿಸಿ ಹಾಕಿದ್ದಾರೆ’ ಎಂದು ನರಸಿಂಹಮೂರ್ತಿ ತಿಳಿಸಿದರು.
ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಶ್ವಾನದಳದೊಂದಿಗೆ ಬಂದು ಸ್ಟುಡಿಯೊ ಪರಿಶೀಲನೆ ನಡೆಸಿ, ಬೆರಳಚ್ಚು ಸಾಕ್ಷ್ಯಗಳನ್ನು ಸಂಗ್ರಹಿಸಿದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.