ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟ (ಚಿಮುಲ್) ನಿರ್ದೇಶಕ ಸ್ಥಾನಗಳಿಗೆ 2026ರ ಫೆ.1ರಂದು ಚುನಾವಣೆ ನಡೆಯಲಿದೆ. ಇದು ಚಿಮುಲ್ ಆಡಳಿತ ಮಂಡಳಿಗೆ ನಡೆಯುತ್ತಿರುವ ಮೊದಲ ಚುನಾವಣೆ.

ಆಡಳಿತ ಮಂಡಳಿ ಚುನಾವಣೆಗೆ ಸಂಬಂಧಿಸಿದಂತೆ ಚಿಮುಲ್ ಅರ್ಹ ಮತ್ತು ಅನರ್ಹ ಮತದಾರರ ಕರಡು ಮತದಾರರ ಪಟ್ಟಿ ಪ್ರಕಟಿಸಿದೆ. ಜಿಲ್ಲೆಯಲ್ಲಿ ಒಟ್ಟು 913 ಅರ್ಹ ಮತ್ತು 83 ಅನರ್ಹ ಮತದಾರರು ಇದ್ದಾರೆ. ಈ ಅನರ್ಹ ಮತದಾರರು ‘ಅರ್ಹ’ರಾಗಲು ಜ.7ರವರೆಗೆ ಕಾಲಾವಕಾಶ ಸಹ ಕಲ್ಪಿಸಲಾಗಿದೆ.

ಚಿಮುಲ್ ಚುನಾವಣೆಗೆ ಜಿಲ್ಲೆಯ ಸಹಕಾರ ವಲಯದ ಧುರೀಣರು ಸ್ಪರ್ಧಿಸಲು ಸಜ್ಜಾಗುತ್ತಿದ್ದಾರೆ. ನಿರ್ದೇಶಕರಾಗಿರುವವರು ಮತ್ತೊಮ್ಮೆ ಕಣಕ್ಕೆ ಇಳಿಯಲು ಉತ್ಸುಕರಾಗಿದ್ದರೆ, ಕಳೆದ ಬಾರಿಯ ಸೋಲಿಗೆ ಪ್ರತಿಪಟ್ಟು ಹಾಕಲು ಧುರೀಣರು ಈಗಾಗಲೇ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಹೊಸ ಅಭ್ಯರ್ಥಿಗಳು ಸಹ ಅದೃಷ್ಟ ಪರೀಕ್ಷಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಈ ಎಲ್ಲ ಬೆಳವಣಿಗೆಗಳಿಗೆ ಮತ್ತಷ್ಟು ರಂಗು ತುಂಬಲು ಮತದಾನದ ಹಕ್ಕುಳ್ಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಕರಡು ಅರ್ಹ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಕರಡು ಮತದಾರರ ಪಟ್ಟಿ ಸಿದ್ಧಗೊಂಡ ನಂತರ ಸಹಕಾರ ವಲಯದ ರಾಜಕಾರಣ ಮತ್ತಷ್ಟು ರಂಗೇರುತ್ತದೆ.

ಪ್ರತಿ ಹಾಲು ಉತ್ಪಾದಕರ ಸಹಕಾರ ಸಂಘ (ಡೇರಿ)ಗಳ ನಿರ್ದೇಶಕರ ಪೈಕಿ ಒಬ್ಬರು ನಿರ್ದೇಶಕ ಚುನಾವಣೆಯಲ್ಲಿ ಮತದಾನಕ್ಕೆ ಅರ್ಹರಾಗಿರುತ್ತಾರೆ. ಈ ಹಿಂದೆ ಡೇರಿ ಅಧ್ಯಕ್ಷರೇ ನಿರ್ದೇಶಕರ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಹೊಂದಿದ್ದರು. ಆದರೆ ಈಗ ನಿಯಮಗಳು ಬದಲಾಗಿವೆ. ಡೇರಿ ನಿರ್ದೇಶಕರು ಸಭೆ ನಡೆಸಿ ಬಹುಮತದ ಆಧಾರದಲ್ಲಿ ಒಬ್ಬ ನಿರ್ದೇಶಕರನ್ನು (ಡೆಲಿಗೇಟ್) ಮತದಾರರನ್ನಾಗಿ ಆಯ್ಕೆ ಮಾಡಬಹುದು. ಈಗ ಈ ಆಯ್ಕೆ ಪ್ರಕ್ರಿಯೆಗಳೆಲ್ಲ ಮುಗಿದು ಕರಡು ಮತದಾರರ ಪಟ್ಟಿ ಪ್ರಕಟವಾಗಿದೆ.

ಅನರ್ಹ ಮತದಾರರು: ಕೆಲವು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಚುನಾವಣೆ ನಡೆದಿಲ್ಲ. ಇಂತಹ ಡೇರಿಗಳಿಗೆ ಆಡಳಿತಾಧಿಕಾರಿ ನೇಮಿಸಲಾಗಿದೆ. ಕೆಲವು ಸಂಘಗಗಳಲ್ಲಿ ಡೆಲಿಗೇಟ್ಗಳ (ಮತದಾರರು) ಆಯ್ಕೆಯಲ್ಲಿ ಒಮ್ಮತ ಮೂಡಿಲ್ಲ. ಆ ಕಾರಣದಿಂದ ಈ ಸಂಘಗಳು ಅನರ್ಹ ಮತದಾರರ ಪಟ್ಟಿಯಲ್ಲಿವೆ. ಆ ಪ್ರಕಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 83 ಡೇರಿಗಳು ಅನರ್ಹ ಮತದಾರರ ಪಟ್ಟಿಯಲ್ಲಿವೆ.

ಈಗಾಗಲೇ ಕಾರ್ಯಾಚರಣೆಯಲ್ಲಿರುವ ಒಕ್ಕೂಟಗಳು ಸಾಮಾನ್ಯವಾಗಿ ಚುನಾವಣಾ ದಿನಾಂಕಕ್ಕೆ ಸದಸ್ಯತ್ವ ಪಡೆದು ಒಂದು ವರ್ಷ ಪೂರ್ಣಗೊಳ್ಳದ ಸದಸ್ಯ ಸಹಕಾರ ಸಂಘಗಳನ್ನು ಕರಡು ಮತದಾರರ ಪಟ್ಟಿಗೆ ಸೇರಿಸುವುದಿಲ್ಲ. ಆದರೆ ಚಿಕ್ಕಬಳ್ಳಾಪುರ ಒಕ್ಕೂಟಕ್ಕೆ ಇದೇ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿರುವ ಕಾರಣ ಎಲ್ಲ ಡೇರಿಗಳಿಗೂ ಸದಸ್ಯತ್ವ ನೀಡಲಾಗಿದೆ.

ಜಿಲ್ಲೆಯಲ್ಲಿ ಚಿಮುಲ್ ಆಡಳಿತ ಮಂಡಳಿಗೆ ಒಟ್ಟು 13 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಸರಾಸರಿ 75ರಿಂದ 80 ಸಂಘಗಳಿಗೆ ಒಂದು ಕ್ಷೇತ್ರ ರೂಪಿಸಲಾಗಿದೆ. ಚಿಕ್ಕಬಳ್ಳಾಪುರ (83) ಮತ್ತು ಪೆರೇಸಂದ್ರ (82) ಕ್ಷೇತ್ರಗಳಲ್ಲಿ ಗರಿಷ್ಠ ಅರ್ಹ ಮತದಾರರು ಇದ್ದಾರೆ. ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿ ಮಹಿಳಾ ಕ್ಷೇತ್ರಗಳ ಕರಡು ಮತದಾರರಪಟ್ಟಿಯಲ್ಲಿ ಕ್ರಮವಾಗಿ 59 ಮತ್ತು 57 ಮತದಾರರು ಇದ್ದಾರೆ.

ಅನರ್ಹ ಪಟ್ಟಿಯಲ್ಲಿರುವ ಮತದಾರರು ಅರ್ಹರಾದರೆ ಮತದಾರರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುತ್ತದೆ.

ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ ತಾಲ್ಲೂಕು ವ್ಯಾಪ್ತಿಯಲ್ಲಿ ಹೊಸದಾಗಿ ತಲಾ ಒಂದು ಕ್ಷೇತ್ರಗಳು ಅಸ್ತಿತ್ವ ಪಡೆದಿವೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೇಸಂದ್ರ, ಚಿಂತಾಮಣಿ ತಾಲ್ಲೂಕಿನಲ್ಲಿ ಕೈವಾರ ಮತ್ತು ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಜಂಗಮಕೋಟೆ ಹೊಸದಾಗಿ ಅಸ್ತಿತ್ವ ಪಡೆದಿವೆ. ನೂತನ ತಾಲ್ಲೂಕುಗಳಾದ ಚೇಳೂರು ಮತ್ತು ಮಂಚೇನಹಳ್ಳಿ ಅವಕಾಶವಾಗಿದೆ. ಈ ಹಿಂದೆ ಮಹಿಳಾ ಮೀಸಲು ಒಂದು ಕ್ಷೇತ್ರ ಅಸ್ತಿತ್ವದಲ್ಲಿ ಇತ್ತು. ಈಗ ಎರಡು ಕ್ಷೇತ್ರವಾಗಿದೆ.

ಸರ್ಕಾರದ ನಾಮನಿರ್ದೇಶಕರು, ಎನ್ಡಿಡಿಬಿ ಪ್ರತಿನಿಧಿ, ಕೆಎಂಎಫ್ ಪ್ರತಿನಿಧಿ, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು, ಪಶುಸಂಗೋಪನಾ ಇಲಾಖೆ ಮತ್ತು ಸಹಕಾರ ಇಲಾಖೆಯ ಪ್ರತಿನಿಧಿ ನಿರ್ದೇಶಕರಾಗುವರು. ಈ ಮೂಲಕ ಚಿಕ್ಕಬಳ್ಳಾಪುರ ಒಕ್ಕೂಟವು 18 ನಿರ್ದೇಶಕರನ್ನು ಹೊಂದಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.